ಹೊಸದಿಗಂತ ಡಿಜಿಟಲ್ ಡೆಸ್ಕ್:
ಅಮೇರಿಕದಲ್ಲಿ ನೆಲೆಸಿರುವ ಭಾರತೀಯ ಪ್ರಜೆ ಧ್ರುವಿ ಪಟೇಲ್ ಅವರು 2024 ರ ಮಿಸ್ ಇಂಡಿಯಾ ವರ್ಲ್ಡ್‌ವೈಡ್ ಪ್ರಶಸ್ತಿಯನ್ನು ಗೆದ್ದಿದ್ದಾರೆ.
ಇತ್ತೀಚೆಗೆ ನ್ಯೂಜೆರ್ಸಿಯ ಎಡಿಸನ್‌ನಲ್ಲಿ ನಡೆದ ಸಮಾರಂಭದಲ್ಲಿ ವಿಜೇತರನ್ನು ಘೋಷಿಸಲಾಯಿತು. ಧ್ರುವಿ ಮಿಸ್ ಇಂಡಿಯಾ ವರ್ಲ್ಡ್‌ವೈಡ್ ಕಿರೀಟವನ್ನು ಗೆದ್ದರೆ, ನೆದರ್‌ಲ್ಯಾಂಡ್‌ನ ಶ್ರೇಯಾ ಸಿಂಗ್ ಮತ್ತು ಸುರಿನಾಮ್‌ನ ಶ್ರಧಾ ಟೆಡ್ಜೋ ಕ್ರಮವಾಗಿ ಮೊದಲ ಮತ್ತು ಎರಡನೇ ರನ್ನರ್ ಅಪ್ ಪ್ರಶಸ್ತಿ ಪಡೆದರು.
ಪ್ರಶಸ್ತಿ ಬಳಿಕ ಮಾತನಾಡಿರುವ ಧ್ರುವಿ, ತನಗೆ ಬಾಲಿವುಡ್ ನಟಿ ಮತ್ತು UNICEF ರಾಯಭಾರಿಯಾಗುವ ಆಸೆಯಿದೆ. ಅಲ್ಲದೇ ಇದು ನನಗೆ ಜಾಗತಿಕವಾಗಿ ಸಿಕ್ಕ ಮನ್ನಣೆ. ಮಿಸ್ ಇಂಡಿಯಾ ವರ್ಲ್ಡ್ ವೈಡ್ ಗೆಲ್ಲುವುದು ಮಿಸ್ ವರ್ಲ್ಡ್‌ಗಿಂತಲೂ ಹೆಚ್ಚಿನ ಗೌರವ ಅನಿಸಿದೆ ಎಂದಿದ್ದಾರೆ.