ಹೊಸದಿಗಂತ ಡಿಜಿಟಲ್ ಡೆಸ್ಕ್:
ಭಾರತ ಮತ್ತು ಚೀನಾ ನಡುವೆ ಆಗಿರುವ ಒಪ್ಪಂದದ ಅನುಸಾರ, ಪೂರ್ವ ಲಡಾಖ್‌ನಲ್ಲಿ ವಾಸ್ತವ ಗಡಿ ನಿಯಂತ್ರಣ ರೇಖೆಯುದ್ದಕ್ಕೂ ನಿಯೋಜಿಸಿರುವ ಸೇನೆಗಳ ವಾಪಸಾತಿ ಪ್ರಕ್ರಿಯೆಯು ಸುಗಮವಾಗಿ ನಡೆದಿದೆ ಎಂದು ಚೀನಾ ಹೇಳಿದೆ.
ಚೀನಾದ ವಿದೇಶಾಂಗ ಸಚಿವಾಲಯದ ವಕ್ತಾರ ಲಿನ್ ಜಿಯಾನ್ ಮಾಹಿತಿ ನೀಡಿದ್ದು, ಗಡಿ ಪ್ರದೇಶಕ್ಕೆ ಸಂಬಂಧಿಸಿ ಉಭಯ ದೇಶಗಳು ಕೈಗೊಂಡಿದ್ದ ಒಪ್ಪಂದದ ಜಾರಿ ಪ್ರಕ್ರಿಯೆಯಲ್ಲಿ ಉಭಯ ದೇಶಗಳ ಸೇನೆಗಳು ತೊಡಗಿವೆ.ಪ್ರಸ್ತುತ ಈ ಕಾರ್ಯವು ಸುಗಮವಾಗಿ ನಡೆದಿದೆ ಎಂದು ತಿಳಿಸಿದರು.
ರಷ್ಯಾದ ಕಜಾನ್‌ನಲ್ಲಿ ನಡೆದ ಬ್ರಿಕ್ಸ್ ಶೃಂಗಸಭೆಯಲ್ಲಿ ಭಾಗವಹಿಸಿದ್ದ ಪ್ರಧಾನಿ ನರೇಂದ್ರ ಮೋದಿ, ಚೀನಾ ಅಧ್ಯಕ್ಷ ಷಿ ಜಿನ್‌ಪಿಂಗ್ ಅವರೂ ಸಭೆ ನಡೆಸಿ ಉಲ್ಲೇಖಿತ ಒಪ್ಪಂದವನ್ನು ಅನುಮೋದಿಸಿದ್ದರು.
ಒಪ್ಪಂದದಂತೆ ಉಭಯ ದೇಶಗಳು ಪೂರ್ವ ಲಡಾಖ್‌ನ ಡೆಮ್‌ಚೋಕ್ ಮತ್ತು ಡೆಪ್ಸಾಂಗ್ ಪ್ರದೇಶಗಳಲ್ಲಿ ನಿಯೋಜಿಸಿರುವ ಸೇನೆ ವಾಪಸ ಕರೆಸಲಿವೆ. ಈ ಪ್ರಕ್ರಿಯೆ ಅಕ್ಟೋಬರ್ 28-29ರ ವೇಳೆಗೆ ಪೂರ್ಣಗೊಳ್ಳಲಿದೆ ಎಂದು ಭಾರತ ಸೇನೆಯ ಮೂಲಗಳು ತಿಳಿಸಿವೆ.