ಭಾರತ-ಚೀನಾ ಗಡಿ ಉದ್ವಿಗ್ನತೆ ಶಮನಕ್ಕೆ ಸಿದ್ಧತೆ, ಸೇನಾ ವಾಪಸಾತಿ ಪ್ರಕ್ರಿಯೆ ಶುರು

ಹೊಸದಿಗಂತ ಡಿಜಿಟಲ್ ಡೆಸ್ಕ್:

ಪೂರ್ವ ಲಡಾಖ್‌ನಲ್ಲಿನ ಗಡಿ ಬಿಕ್ಕಟ್ಟನ್ನು ತಟಸ್ಥಗೊಳಿಸಲು ಭಾರತ ಮತ್ತು ಚೀನಾ ಒಪ್ಪಿಕೊಂಡ ನಂತರ, ಉಭಯ ದೇಶಗಳ ಸೈನಿಕರನ್ನು ವಿಸರ್ಜಿಸುವ ಪ್ರಕ್ರಿಯೆಯು ಪ್ರಾರಂಭವಾಗಿದೆ.

ಹೌದು, ನಾಲ್ಕು ವರ್ಷಗಳಿಂದ ನಡೆಯುತ್ತಿದ್ದ ಗಡಿ ಉದ್ವಿಗ್ನತೆಗೆ ಅಂತ್ಯ ಹಾಡುವ ಪ್ರಕ್ರಿಯೆ ಆರಂಭವಾಗಿದೆ. ಈ ಒಪ್ಪಂದದ ಅಡಿಯಲ್ಲಿ, ಪೂರ್ವ ಲಡಾಖ್‌ನಲ್ಲಿನ ಗಡಿಯಿಂದ ಭಾರತ ಮತ್ತು ಚೀನಾ ಪಡೆಗಳನ್ನು ಬೇರ್ಪಡಿಸುವ ಪ್ರಕ್ರಿಯೆಯು ಪ್ರಾರಂಭವಾಗಿದೆ. ಪೂರ್ವ ಲಡಾಖ್‌ನ ಎರಡು ಪ್ರಮುಖ ಪ್ರದೇಶಗಳಾದ ಡೆಮ್‌ಚಾಕ್- ಡೆಪ್‌ಸಾಂಗ್‌ನಿಂದ ಎರಡೂ ದೇಶಗಳ ಸೈನಿಕರು ವಾಪಸ್ ಆಗ್ತಿದ್ದಾರೆ.

ಇಲ್ಲಿ ನಿರ್ಮಿಸಲಾಗಿದ್ದ ತಾತ್ಕಾಲಿಕ ರಚನೆಗಳು ಮತ್ತು ಟೆಂಟ್‌ಗಳನ್ನು ಎರಡೂ ದೇಶಗಳ ಸೇನೆಯು ತೆರವು ಮಾಡಿತು. ಮುಂದಿನ ವಾರ ಗಡಿ ಭದ್ರತೆ ಆರಂಭವಾಗಬಹುದು ಎನ್ನಲಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!