ಹೊಸದಿಗಂತ ಡಿಜಿಟಲ್ ಡೆಸ್ಕ್:
ದೇಶದಲ್ಲಿ ದೀಪಾವಳಿ ಹಬ್ಬದ ಸಂಭ್ರಮದ ಸಮಯ ಪ್ರೀತಿಯ ಧ್ಯೋತಕವಾಗಿ ಭಾರತ ಮತ್ತು ಚೀನಾದ ಸೈನಿಕರು ವಾಸ್ತವ ನಿಯಂತ್ರಣ ರೇಖೆಯ (LAC) ಹಲವು ಗಡಿ ಭಾಗಗಳಲ್ಲಿ ಸಿಹಿತಿಂಡಿ ವಿನಿಮಯ ಮಾಡಿಕೊಂಡರು.
ಪೂರ್ವ ಲಡಾಖ್ನ ಡೆಮ್ಚೋಕ್ ಮತ್ತು ಡೆಪ್ಸಾಂಗ್ ಬಯಲು ಪ್ರದೇಶದಲ್ಲಿ ಎರಡು ಘರ್ಷಣೆಯ ಬಿಂದುಗಳಲ್ಲಿ ಎರಡೂ ದೇಶಗಳು ಕದನ ವಿರಾಮ ಘೋಷಿಸಿದ ನಂತರ ಸಿಹಿಹಂಚಿಕೊಂಡರು.
ಭಾರತ ಮತ್ತು ಚೀನಾದ ಸೈನಿಕರ ನಡುವೆ ಸಿಹಿ ವಿನಿಮಯವು ದೀಪಾವಳಿಯ ಸಂದರ್ಭದಲ್ಲಿ ಗಡಿ ವಾಸ್ತವ ರೇಖೆಯುದ್ದಕ್ಕೂ ಹಲವು ಗಡಿ ಬಿಂದುಗಳಲ್ಲಿ ನಡೆಯಿತು ಎಂದು ಸೇನಾ ಮೂಲವು ಪಿಟಿಐ ಸುದ್ದಿಸಂಸ್ಥೆ ಪ್ರತಿನಿಧಿಗೆ ತಿಳಿಸಿದರು.
ಗಡಿ ವಾಸ್ತವ ರೇಖೆಯ ಉದ್ದಕ್ಕೂ ಐದು ಬಾರ್ಡರ್ ಪರ್ಸನಲ್ ಮೀಟಿಂಗ್ (BPM) ಪಾಯಿಂಟ್ಗಳಲ್ಲಿ ಸಿಹಿತಿಂಡಿಗಳ ವಿನಿಮಯ ನಡೆದಿದೆ. ನಿನ್ನೆ ಎರಡೂ ಕಡೆಯ ಪಡೆಗಳು ಎರಡು ಘರ್ಷಣೆ ಬಿಂದುಗಳಲ್ಲಿ ಕಾರ್ಯಾಚರಣೆಯನ್ನು ಪೂರ್ಣಗೊಳಿಸಿವೆ.
ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಸ್ರಿ ಅಕ್ಟೋಬರ್ 21 ರಂದು ದೆಹಲಿಯಲ್ಲಿ ಕಳೆದ ಹಲವು ವಾರಗಳಿಂದ ಮಾತುಕತೆಗಳ ನಂತರ ಭಾರತ ಮತ್ತು ಚೀನಾ ನಡುವೆ ಒಪ್ಪಂದವನ್ನು ಅಂತಿಮಗೊಳಿಸಲಾಗಿದೆ. 2020 ರಲ್ಲಿ ಪೂರ್ವ ಲಡಾಕ್ ನಲ್ಲಿ ಉದ್ಭವಿಸಿದ ಸಮಸ್ಯೆಗಳ ಪರಿಹಾರಕ್ಕೆ ಕಾರಣವಾಗುತ್ತದೆ ಎಂದು ಹೇಳಿದರು.
ಪೂರ್ವ ಲಡಾಖ್ನ ಎಲ್ಎಸಿ ಉದ್ದಕ್ಕೂ ಗಸ್ತು ತಿರುಗುವಿಕೆ ಮತ್ತು ಸೇನಾಪಡೆಯನ್ನು ಹಿಂತೆಗೆದುಕೊಳ್ಳುವ ಕುರಿತು ಒಪ್ಪಂದವನ್ನು ದೃಢಪಡಿಸಲಾಯಿತು, ಇದು ನಾಲ್ಕು ವರ್ಷಗಳ ಕಾಲದ ಬಿಕ್ಕಟ್ಟನ್ನು ಕೊನೆಗೊಳಿಸುವ ಸೂಚನೆಯಾಗಿದೆ.