ಹೊಸದಿಗಂತ ಡಿಜಿಟಲ್ ಡೆಸ್ಕ್:
ಪಶ್ಚಿಮ ಹಿಮಾಲಯದ ಗೋಗ್ರಾ-ಹಾಟ್ಸ್ಪ್ರಿಂಗ್ಸ್ ಗಡಿ ಪ್ರದೇಶದಿಂದ ಭಾರತ ಮತ್ತು ಚೀನಾ ಪಡೆಗಳು ಸೇನೆಯನ್ನುಹಿಂತೆಗೆದುಕೊಳ್ಳಲು ಕಾರ್ಯಾರಂಭಿಸಿದೆ ಎಂದು ಭಾರತ ಸರ್ಕಾರ ಗುರುವಾರ ಹೇಳಿಕೆಯಲ್ಲಿ ತಿಳಿಸಿದೆ.
ಭಾರತ, ಚೀನಾ ಕಾರ್ಪ್ಸ್ ಕಮಾಂಡರ್ ಮಟ್ಟದ ಸಭೆಯ 16ನೇ ಸುತ್ತಿನ ಒಮ್ಮತದ ಪ್ರಕಾರ, ಗೋಗ್ರಾ-ಹಾಟ್ಸ್ಪ್ರಿಂಗ್ಸ್ (ಪಿಪಿ -15) ಪ್ರದೇಶದಲ್ಲಿ ಭಾರತ ಮತ್ತು ಚೀನಾದ ಪಡೆಗಳು ಸಂಘಟಿತ ಮತ್ತು ಯೋಜಿತ ರೀತಿಯಲ್ಲಿ ಹಿಂತೆಗೆದುಕೊಳ್ಳಲು ಪ್ರಾರಂಭಿಸಿವೆ, ಇದು ಗಡಿ ಪ್ರದೇಶಗಳಲ್ಲಿ ಶಾಂತಿ ಮತ್ತು ನೆಮ್ಮದಿಗೆ ಅನುಕೂಲಕರವಾಗಿದೆ ಎಂದು ರಕ್ಷಣಾ ಸಚಿವಾಲಯ ತಿಳಿಸಿದೆ.