ಬಿಟ್ ಕಾಯಿನ್ ಮತ್ತು ಕ್ರಿಪ್ಟೊ ಕರೆನ್ಸಿ ಕತೆ ಏನಾಗಲಿದೆ? ಬಜೆಟ್ 2022ರಲ್ಲಿ ಸಿಕ್ಕಿದೆ ಉತ್ತರ

ಹೊಸ ದಿಗಂತ ಡಿಜಿಟಲ್ ಡೆಸ್ಕ್

ಭಾರತ ತನ್ನದೇ ಆದ ಡಿಜಿಟಲ್ ಕರೆನ್ಸಿಯನ್ನು ಹೊಂದಲಿದೆ ಎಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್ ಘೋಷಿಸಿದ್ದಾರೆ. ಇದರೊಂದಿಗೆ ಬಿಟ್ ಕಾಯಿನ್ ಸೇರಿದಂತೆ ಇತರ ಸರ್ಕಾರೇತರ ಕ್ರಿಪ್ಟೊ ಕರೆನ್ಸಿಗಳ ಕತೆ ಏನಾಗಲಿದೆ ಎಂಬುದಕ್ಕೆ ಬಜೆಟ್ 2022ರಲ್ಲಿ ಉತ್ತರ ಸಿಕ್ಕಂತಾಗಿದೆ.

ಯಾವಾಗ ಒಂದು ದೇಶ ತನ್ನದೇ ಡಿಜಿಟಲ್ ಕರೆನ್ಸಿಯನ್ನು ಹೊಂದುತ್ತದೋ ಆಗ ಸಹಜವಾಗಿಯೇ ಖಾಸಗಿ ಕ್ರಿಪ್ಟೊ ಕರೆನ್ಸಿಗಳಿಗೆ ಯಾವ ಕಾಯ್ದೆ ಬಲವೂ ದೊರೆಯುವುದಿಲ್ಲ, ಅವನ್ನು ಸರ್ಕಾರ ಸಹಿಸಿಕೊಳ್ಳುವುದು ಇಲ್ಲ ಎಂಬುದು ಎಂಥವರೂ ಅರ್ಥ ಮಾಡಿಕೊಳ್ಳಬಹುದಾದ ಸಂಗತಿ.

ಬ್ಲಾಕ್ ಚೈನ್ ಹಾಗೂ ಇತರ ತಂತ್ರಜ್ಞಾನಗಳನ್ನು ಉಪಯೋಗಿಸಿಕೊಂಡು 2022-23ರಲ್ಲೇ ರಿಸರ್ವ್ ಬ್ಯಾಂಕ್ ಆಫ್ ಇಂಡಿಯಾ ಡಿಜಿಟಲ್ ಕರೆನ್ಸಿಯನ್ನು ಶುರುಮಾಡಲಿದೆ ಎಂದು ವಿತ್ತ ಸಚಿವೆ ಘೋಷಿಸಿದ್ದಾರೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!