ಹೊಸದಿಗಂತ ಡಿಜಿಟಲ್ ಡೆಸ್ಕ್:
ಭಾರತಕ್ಕೆ ನೀತಿ ಪಾಠ ಹೇಳುವವರು ಬೇಕಾಗಿಲ್ಲ, ಸಹವರ್ತಿಗಳು ಬೇಕು ಎಂದು ಐರೋಪ್ಯ ದೇಶಗಳಿಗೆ ಭಾರತದ ವಿದೇಶಾಂಗ ಸಚಿವ ಎಸ್ ಜೈಶಂಕರ್ ಹೇಳಿದ್ದಾರೆ.
ನಾವು ಜಗತ್ತಿನತ್ತ ನೋಡುತ್ತಿದ್ದೇವೆ ಎಂದರೆ ಅದು ಪಾರ್ಟ್ನರ್ಗಳನ್ನು ಎದುರು ನೋಡುತ್ತಿದ್ದೇವೆ ಎಂದರ್ಥ. ನಮಗೆ ಬೋಧಕರು ಬೇಕಾಗಿಲ್ಲ. ಅದರಲ್ಲೂ, ಹೊರಗೆ ಹೇಳೋದು ಒಂದು ಮನೆಯೊಳಗೆ ಮಾಡೋದು ಒಂದು ಎಂದಿರುವ ಬೋಧಕರಂತೂ ಬೇಕಾಗಿಲ್ಲ ಎಂದು ತಿಳಿಸಿದರು.
ಇನ್ನು ಪಾಶ್ಚಿಮಾತ್ಯ ರಾಷ್ಟ್ರಗಳನ್ನು ಎ ಜೈಶಂಕರ್ ತರಾಟೆಗೆ ತೆಗೆದುಕೊಳ್ಳುತ್ತಿರುವುದು ಇದೇ ಮೊದಲಲ್ಲ. ಅನೇಕ ವಿಚಾರದಲ್ಲಿ ಭಾರತದ ಮೇಲೆ ಒತ್ತಡ ಹಾಕಲು ಬಂದಾಗೆಲ್ಲಾ ಆ ದೇಶಗಳಿಗೆ ಅವರು ಖಡಕ್ ತಿರುಗೇಟು ನೀಡಿದ್ದರು.