August 17, 2026
Monday, August 17, 2026
spot_img

ಇಂದು ಭಾರತ-ಇಂಗ್ಲೆಂಡ್ ಮೊದಲ ಟಿ20 ಕದನ: ಆದರೆ ಕ್ರಿಕೆಟ್ ಪ್ರೇಮಿಗಳಿಗೆ ಬ್ಯಾಡ್ ನ್ಯೂಸ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಐರ್ಲೆಂಡ್ ವಿರುದ್ಧದ ಟಿ20 ಸರಣಿ ಮುಗಿಸಿರುವ ಟೀಮ್ ಇಂಡಿಯಾ, ಇದೀಗ ಇಂಗ್ಲೆಂಡ್ ವಿರುದ್ಧ 5 ಪಂದ್ಯಗಳ ಟಿ20 ಸರಣಿ ಆಡಲು ಸಜ್ಜಾಗಿದೆ. ಹೊಸ ನಾಯಕ ಶ್ರೇಯಸ್ ಅಯ್ಯರ್ ನೇತೃತ್ವದ ಯುವ ಭಾರತ ತಂಡವು ಇಂಗ್ಲೆಂಡ್ ತಂಡವನ್ನು ಅವರದ್ದೇ ನೆಲದಲ್ಲಿ ಎದುರಿಸಲಿದೆ.

ಡರ್ಹ್ಯಾಮ್‌ನಲ್ಲಿ ಮೊದಲ ಪಂದ್ಯ

ಸರಣಿಯ ಮೊದಲ ಟಿ20 ಪಂದ್ಯವು ಜುಲೈ 1ರ ಬುಧವಾರದಂದು ಡರ್ಹ್ಯಾಮ್‌ನ ರಿವರ್‌ಸೈಡ್ ಕ್ರೀಡಾಂಗಣದಲ್ಲಿ ಆಯೋಜನೆಯಾಗಿದೆ. ಭಾರತೀಯ ಕಾಲಮಾನ ರಾತ್ರಿ 10:00 ಗಂಟೆಗೆ (ಸ್ಥಳೀಯ ಸಮಯ ಸಂಜೆ 5:30) ಈ ಪಂದ್ಯ ಆರಂಭವಾಗಲಿದೆ. ಟೀಮ್ ಇಂಡಿಯಾ ಈ ಮೈದಾನದಲ್ಲಿ ಚೊಚ್ಚಲ ಟಿ20 ಪಂದ್ಯ ಆಡುತ್ತಿರುವುದು ವಿಶೇಷ.

ಪಂದ್ಯಕ್ಕೆ ಮಳೆ ಅಡ್ಡಿ? ಹವಾಮಾನ ವರದಿ!

ಇಂಗ್ಲೆಂಡ್‌ನ ಹವಾಮಾನವನ್ನು ಊಹಿಸುವುದು ಕಷ್ಟವಾಗಿದ್ದು, ಬಿಬಿಸಿ ವರದಿ ಪ್ರಕಾರ ಪಂದ್ಯಕ್ಕೆ ಮಳೆಯಾಗುವ ಸಾಧ್ಯತೆ ಹೆಚ್ಚಿದೆ.

  • ಸಂಜೆ 5 ಗಂಟೆ ನಂತರ: ಶೇ. 43 ರಷ್ಟು ಮಳೆ ಮುನ್ಸೂಚನೆ.
  • ಸಂಜೆ 6 ರಿಂದ ರಾತ್ರಿ 8 ರವರೆಗೆ: ಶೇ. 66 ರಷ್ಟು ಮಳೆಯಾಗುವ ಸಾಧ್ಯತೆ.
  • ರಾತ್ರಿಯಿಡೀ: ಶೇ. 44 ರಿಂದ 45 ರಷ್ಟು ಮಳೆ ಮುಂದುವರಿಯಬಹುದು.

ನಿರಂತರ ಮಳೆಯ ಮುನ್ಸೂಚನೆ ಇರುವುದರಿಂದ, ಭಾರತ ಮತ್ತು ಇಂಗ್ಲೆಂಡ್ ನಡುವಿನ ಮೊದಲ ಟಿ20 ಪಂದ್ಯವು ಟಾಸ್ ಕೂಡ ಆಗದೆ ಸಂಪೂರ್ಣವಾಗಿ ರದ್ದಾಗುವ ಭೀತಿ ಎದುರಾಗಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !