ಹೊಸದಿಗಂತ ಡಿಜಿಟಲ್ ಡೆಸ್ಕ್:
ಐಸಿಸಿ ಟಿ 20 ವಿಶ್ವಕಪ್ ಟೂರ್ನಿ ಕಡೆಯ ಹಂತಕ್ಕೆ ಬಂದಿದ್ದು, ಫೈನಲ್ಸ್‌ಗೆ ತಲುಪಲು ಇಂಡಿಯಾ-ಇಂಗ್ಲೆಂಡ್ ಕಾದಾಟ ನಡೆಸಲಿದೆ.
ಈಗಾಗಲೇ ಸೆಮಿ ಫೈನಲ್ಸ್ ಪಂದ್ಯದಲ್ಲಿ ನ್ಯೂಜಿಲೆಂಡ್ ವಿರುದ್ಧ ಗೆಲುವು ಸಾಧಿಸಿರುವ ಪಾಕಿಸ್ತಾನ ಫೈನಲ್ಸ್ ತಲುಪಿದೆ. ಇದೀಗ ನಡೆಯುವ ಪಂದ್ಯದಲ್ಲಿ ಗೆಲುವು ಸಾಧಿಸುವ ತಂಡ ಫೈನಲ್ಸ್‌ನಲ್ಲಿ ಪಾಕ್ ವಿರುದ್ಧ ಸೆಣೆಸಾಡಲಿದೆ. ಸಾಂಪ್ರದಾಯಿಕ ಎದುರಾಳಿ ಪಾಕ್‌ನ್ನು ಸೋಲಿಸಲು ಭಾರತ ಈ ಪಂದ್ಯ ಗೆದ್ದು ಫೈನಲ್ಸ್‌ಗೆ ಎಂಟ್ರಿ ನೀಡಬೇಕಿದೆ. ಅಡಿಲೇಡ್‌ನಲ್ಲಿ ಇಂದು ಹೈ ವೋಲ್ಟೇಜ್ ಪಂದ್ಯ ನಡೆಯಲಿದ್ದು, ಗೆಲುವು ಸಾಧಿಸುವುದು ಎರಡೂ ತಂಡಕ್ಕೂ ಅತಿಮುಖ್ಯವಾಗಿದೆ.
ಭಾರತ ತಂಡ ಅಡಿಲೇಡ್‌ನಲ್ಲಿ ಈವರೆಗೂ ಎರಡು ಪಂದ್ಯ ಆಡಿದ್ದು, ಎರಡರಲ್ಲೂ ಗೆಲುವು ಸಾಧಿಸಿದೆ. ವಿಶ್ವಾಸದಿಂದಿರುವ ರೋಹಿತ್ ಪಡೆ ಗೆಲುವು ನಮ್ಮದೇ ಎಂದಿದೆ. ಭಾರತದ ಬ್ಯಾಟಿಂಗ್ ಶಕ್ತಿ ಕೆ.ಎಲ್. ರಾಹುಲ್, ವಿರಾಟ್ ಕೊಹ್ಲಿ, ಸೂರ್ಯಕುಮಾರ್ ಯಾದವ್ ಉತ್ತಮ ಫಾರ್ಮ್‌ನಲ್ಲಿದ್ದಾರೆ.
ಇಂದು ಮಧ್ಯಾಹ್ನ 1:30 ಕ್ಕೆ ಪಂದ್ಯ ಆರಂಭವಾಲಿದ್ದು, 1 ಗಂಟೆಗೆ ಟಾಸ್ ಆಯ್ಕೆ ಪ್ರಕ್ರಿಯೆ ನಡೆಯಲಿದೆ. ಸ್ಪೋರ್ಟ್ಸ್ ನೆಟ್‌ವರ್ಕ್‌ನ ವಿವಿಧ ಚಾನೆಲ್‌ಗಳಲ್ಲಿ ನೇರ ಪ್ರಸಾರ ಇರಲಿದೆ.