March 5, 2026
Thursday, March 5, 2026
spot_img

ಸುವರ್ಣ ಯುಗದತ್ತ ಭಾರತ-ಫಿನ್​​ಲ್ಯಾಂಡ್ ಸಂಬಂಧ: ಪ್ರಧಾನಿ ಮೋದಿ ಬಣ್ಣನೆ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಭಾರತ ಭೇಟಿಯಲ್ಲಿರುವ ಫಿನ್​​ಲ್ಯಾಂಡ್​ ಅಧ್ಯಕ್ಷ ಅಲೆಕ್ಸಾಂಡರ್ ಸ್ಟಬ್ ಅವರೊಂದಿಗೆ ಪ್ರಧಾನಿ ನರೇಂದ್ರ ಮೋದಿ ಅವರು ಹೈದರಾಬಾದ್ ಹೌಸ್‌ನಲ್ಲಿ ಇಂದು ದ್ವಿಪಕ್ಷೀಯ ಸಭೆ ನಡೆಸಿದ್ದಾರೆ.

ಈ ವೇಳೆ ಮಾತನಾಡಿದಪ್ರಧಾನಿ ಮೋದಿ, ವಿಶ್ವದ ಎರಡು ಪ್ರಮುಖ ರಾಜತಾಂತ್ರಿಕ ಶಕ್ತಿಗಳಾದ ಭಾರತ ಮತ್ತು ಯುರೋಪ್ ತಮ್ಮ ಸಂಬಂಧದಲ್ಲಿ ಸುವರ್ಣ ಹಂತವನ್ನು ಪ್ರವೇಶಿಸುತ್ತಿವೆ ಎಂದು ಬಣ್ಣಿಸಿದರು.

ಈ ವರ್ಷದ ರೈಸಿನಾ ಸಂವಾದದಲ್ಲಿ ಫಿನ್​ಲ್ಯಾಂಡ್​ ಅಧ್ಯಕ್ಷರಂತಹ ಅನುಭವಿ ಮತ್ತು ಕ್ರಿಯಾತ್ಮಕ ನಾಯಕ ಮುಖ್ಯ ಅತಿಥಿಯಾಗಿರುವುದು ಭಾರತಕ್ಕೆ ಅತ್ಯಂತ ಗೌರವ ಮತ್ತು ಸಂತೋಷದ ವಿಷಯ ಎಂದರು.

ಭಾರತ-ಯುರೋಪಿಯನ್ ಯೂನಿಯನ್ ಮುಕ್ತ ವ್ಯಾಪಾರ ಒಪ್ಪಂದವು ಭಾರತ ಮತ್ತು ಫಿನ್ಲ್ಯಾಂಡ್ ನಡುವಿನ ವ್ಯಾಪಾರ, ಹೂಡಿಕೆ ಮತ್ತು ತಂತ್ರಜ್ಞಾನ ಸಹಕಾರವನ್ನು ಮತ್ತಷ್ಟು ಬಲಪಡಿಸುತ್ತದೆ. ಡಿಜಿಟಲ್ ತಂತ್ರಜ್ಞಾನ, ಮೂಲಸೌಕರ್ಯ ಮತ್ತು ಸುಸ್ಥಿರ ಕ್ಷೇತ್ರಗಳಲ್ಲಿ ಎರಡೂ ರಾಷ್ಟ್ರಗಳು ಪ್ರಮುಖ ಪಾಲುದಾರರಾಗಿವೆ ಎಂದು ಹೇಳಿದರು.

ಫಿನ್​​ಲ್ಯಾಂಡಿನ ನೋಕಿಯಾದ ಮೊಬೈಲ್ ಫೋನ್‌ಗಳು ಮತ್ತು ಟೆಲಿಕಾಂ ನೆಟ್‌ವರ್ಕ್‌ಗಳು ಲಕ್ಷಾಂತರ ಭಾರತೀಯರ ಅಗತ್ಯವಾಗಿವೆ. ಫಿನ್ನಿಷ್ ಎಂಜಿನಿಯರ್​ಗಳ ನೆರವಿನೊಂದಿಗೆ ಚೆನಾಬ್ ನದಿಯ ಮೇಲೆ ವಿಶ್ವದ ಅತಿ ಎತ್ತರದ ರೈಲ್ವೆ ಸೇತುವೆ ನಿರ್ಮಿಸಿದ್ದೇವೆ. ಫಿನ್ಲೆಂಡ್‌ನ ಪಾಲುದಾರಿಕೆಯೊಂದಿಗೆ, ನುಮಾಲಿಗಢ ಸಂಸ್ಕರಣಾಗಾರದಂತಹ ಯೋಜನೆಗಳು ಮುಂದುವರಿಯುತ್ತಿವೆ ಎಂದು ಅವರು ವಿವರಿಸಿದರು.

ಭಾರತ ಮತ್ತು ಫಿನ್‌ಲ್ಯಾಂಡ್‌ನಂತಹ ಪ್ರಜಾಪ್ರಭುತ್ವ ಮತ್ತು ಜವಾಬ್ದಾರಿಯುತ ದೇಶಗಳ ನಡುವಿನ ಈ ಕಾರ್ಯತಂತ್ರದ ಪಾಲುದಾರಿಕೆಯು ಇಡೀ ಜಗತ್ತಿಗೆ ತಂತ್ರಜ್ಞಾನ ಮತ್ತು ಪೂರೈಕೆ ಸರಪಳಿಗಳನ್ನು ಒದಗಿಸಲಿದೆ ಎಂದು ಪ್ರಧಾನಿ ಮೋದಿ ಹೇಳಿದರು.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !