Saturday, December 9, 2023

Latest Posts

ಭಾವನಾತ್ಮಕವಾಯ್ತು ಭಾರತ, ‘ನಮ್ಮ ಮನಸ್ಸಿನಲ್ಲಿ ಎಂದಿಗೂ ನೀವೇ ಚಾಂಪಿಯನ್ಸ್’

ಹೊಸದಿಗಂತ ಡಿಜಿಟಲ್ ಡೆಸ್ಕ್:

ನಿನ್ನೆ ಇಡೀ ಭಾರತವೇ ಭಾವನಾತ್ಮಕವಾಗಿತ್ತು, ಈ ಬಾರಿ ವಿಶ್ವಕಪ್ ಪಂದ್ಯಗಳಲ್ಲಿ ಎಂದೂ ಎಡವದ ಟೀಂ ಇಂಡಿಯಾ ಈ ಬಾರಿ ಗೆದ್ದು ಚಾಂಪಿಯನ್ಸ್ ಆಗುವ ತವಕದಲ್ಲಿತ್ತು.

ಆದರೆ ಭಾರತ ಗೆದ್ದೇ ಗೆಲ್ಲುತ್ತದೆ ಎನ್ನುವ ಊಹೆ ನಿಜವಾಗಲಿಲ್ಲ, ಆಸ್ಟ್ರೇಲಿಯಾ ತಂಡ ಭಾರತವನ್ನು ಮಣಿಸಿ ಚಾಂಪಿಯನ್ಸ್ ಪಟ್ಟಕ್ಕೇರಿತ್ತು. ಕೋಟ್ಯಂತರ ಹೃದಯಗಳು ನಿನ್ನೆ ಕಣ್ಣೀರಿಟ್ಟಿದ್ದು, ತಮ್ಮ ನೆಚ್ಚಿನ ಟೀಂ ಇಂಡಿಯಾ ಆಟಗಾರರ ಕಣ್ಣಿನಲ್ಲಿ ನೀರು ಕಂಡು ದುಃಖಿಸಿವೆ.

ಸಾಮಾಜಿಕ ಜಾಲತಾಣದಲ್ಲಿ ಪ್ರತಿಯೊಬ್ಬರೂ ಭಾರತವನ್ನು ಹೊಗಳಿದ್ದು, ನೀವು ಎಂದೆಂದಿಗೂ ನಮಗೆ ಚಾಂಪಿಯನ್ಸ್ ಎಂದು ಹುರಿದುಂಬಿಸಿದ್ದಾರೆ. ಸಿನಿ ಸೆಲೆಬ್ರಿಟಿಗಳು ತಂಡಕ್ಕೆ ಸಾಥ್ ನೀಡಿದ್ದು, ಇಷ್ಟು ದಿನ ಉತ್ತಮ ಪ್ರದರ್ಶನ ನೀಡಿ ನಮ್ಮನ್ನು ರಂಜಿಸಿದ್ದೀರಿ, ಮುಂದೆ ಇನ್ನೂ ಚೆನ್ನಾಗಿ ಆಡುತ್ತೀರಿ ಎಂದು ಹುರಿದುಂಬಿಸಿದ್ದಾರೆ.

 ಇಂದು ಒಂದು ಕೆಟ್ಟದಿನವಾಗಿತ್ತಷ್ಟೇ, ವಿಶ್ವಕಪ್‌ನಲ್ಲಿ ಕಠಿಣ ಸ್ಫರ್ಧಿಯಾಗಿ ಎಂದೆಂದಿಗೂ ನಿಮ್ಮನ್ನು ನೆನಪಿನಲ್ಲಿ ಇಡುತ್ತೀವಿ ಎಂದು ನಟ ಆಯುಷ್ಮಾನ್ ಖುರಾನ್ ಹೇಳಿದ್ದಾರೆ. ನೀವು ಆಡಿದ ರೀತಿ ಗೆಲುವಿಗೆ ಸಮಾನ, ಹೆಮ್ಮೆಯಿಂದ ಇರಿ ಎಂದು ಅಜಯ್ ದೇವಗನ್ ಟ್ವೀಟ್ ಮಾಡಿದ್ದಾರೆ. ಸೋತು ಗೆಲ್ಲುವವರನ್ನು ಬಾಜಿಗರ್ ಎನ್ನುತ್ತೇವೆ ಎಂದು ನಟಿ ಕಾಜೋಲ್ ಹೇಳಿದ್ದಾರೆ.

ಕಪ್ ಕೈಜಾರಿತು ಎಂದು ತಿಳಿದಾಕ್ಷಣ ಟೀಂ ಕಣ್ಣೀರಿಟ್ಟಿದ್ದು, ಸೋಲಿಗಿಂತ ನಮ್ಮ ನೆಚ್ಚಿನ ಆಟಗಾರರ ಕಣ್ಣೀರನ್ನು ನೋಡುವುದು ಇನ್ನೂ ದುಃಖಕರ ಎಂದು ಫ್ಯಾನ್ಸ್ ಹೇಳಿದ್ದಾರೆ. ಟೂರ್ನಿಯುದ್ಧಕ್ಕೂ ಗೆಲುವಿಗಾಗಿ ಹೋರಾಡಿದ ರೋಹಿತ್ ಪಡೆ ಕಡೆಗೆ ಎಡವಿದಾಗ ಕಣ್ಣೀರನ್ನು ತಡೆಯಲಾಗದೆ ಬಿಕ್ಕಿಬಿಕ್ಕಿ ಅತ್ತಿದ್ದಾರೆ. ಈ ವೇಳೆ ಸಚಿನ್ ತೆಂಡೂಲ್ಕರ್ ಫೀಲ್ಡ್‌ಗೆ ಬಂದಿದ್ದು, ಎಲ್ಲರಿಗೂ ಸಮಾಧಾನ ಮಾಡಿದ್ದಾರೆ. ಈ ಫೋಟೊ ಎಲ್ಲೆಡೆ ವೈರಲ್ ಆಗಿದೆ.

ಟೂರ್ನಿಯುದ್ದಕ್ಕೂ ತಂಡದ ಗೆಲುವಿಗೆ ಹೋರಾಡಿದ ರೋಹಿತ್-ಕೊಹ್ಲಿಗೆ ಫೈನಲ್​ನಲ್ಲಿ ಸೋತಾಗ ಕಣ್ಣೀರನ್ನು ತಡೆಯಲು ಸಾಧ್ಯವಾಗಲಿಲ್ಲ. ಇದನ್ನು ಕಂಡು ಲೆಜೆಂಡರಿ ಕ್ರಿಕೆಟಿಗ ಸಚಿನ್ ತೆಂಡೂಲ್ಕರ್ ರೋಹಿತ್ ಹಾಗೂ ಕೊಹ್ಲಿಗೆ ಸಾಂತ್ವನ ಹೇಳಿದರು. ಇದರ ಫೋಟೋ ಸಾಮಾಜಿಕ ಜಾಲತಾಣಗಳಲ್ಲಿ ಸಖತ್ ವೈರಲ್ ಆಗುತ್ತಿದೆ.ಈ ಬಗ್ಗೆ ಕೋಚ್ ರಾಹುಲ್ ದ್ರಾವಿಡ್ ಮಾತನಾಡಿದ್ದು, ಹುಡುಗರಿಗೆ ತುಂಬಾ ನಿರಾಸೆಯಾಗಿದೆ, ಡ್ರೆಸ್ಸಿಂಗ್ ರೂಮ್‌ನಲ್ಲಿ ಮಾತುಗಳಿಲ್ಲ, ಬರೀ ಭಾವನೆಗಳೇ ಇದ್ದವು. ಎಲ್ಲರಿಗೂ ಕಷ್ಟದ ಸಮಯ, ನಾಳೆ ಮುಂದುವರಿಯುತ್ತೇವೆ ಎಂದಿದ್ದಾರೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!