ಆಫ್ಘಾನಿಸ್ತಾನಕ್ಕೆ ಭಾರತದಿಂದ ನೆರವು: 2,000 ಮೆಟ್ರಿಕ್ ಟನ್ ಗೋಧಿ ರವಾನೆ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌

ಸಂಕಷ್ಟದ ಪರಿಸ್ಥಿತಿಯಲ್ಲಿರುವ ಆಫ್ಘಾನಿಸ್ತಾನಕ್ಕೆ ಭಾರತ ಸರಕಾರ 2,000 ಮೆಟ್ರಿಕ್ ಟನ್ ಗೋಧಿಯ ರವಾನೆಯನ್ನು ಮಂಗಳವಾರ ಅಟ್ಟಾರಿ-ವಾಘಾ ಗಡಿಯ ಮೂಲಕ ರವಾನಿಸಲಾಗುತ್ತಿದೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯ (MEA) ತಿಳಿಸಿದೆ.
ಟ್ವಿಟರ್‌ನಲ್ಲಿ ವಿದೇಶಾಂಗ ವ್ಯವಹಾರಗಳ ಸಚಿವಾಲಯದ (MEA) ವಕ್ತಾರ ಅರಿಂದಮ್ ಬಾಗ್ಚಿ ಮಾಹಿತಿ ನೀಡಿದ್ದು,, ಅಫ್ಘಾನಿಸ್ತಾನಕ್ಕೆ ಈವರೆಗೆ ಒಟ್ಟು 8,000 MT ಗಳನ್ನು ಕಳುಹಿಸಲಾಗಿದೆ. ಈ ಮೂಲಕ ನಾಲ್ಕು ಬಾರಿ ರವಣೆಮಾಡಲಾಗಿದೆ ಎಂದು ಹೇಳಿದ್ದಾರೆ .
ಭಾರತದಿಂದ 2,500 ಟನ್ ಗೋಧಿಯ ನೆರವನ್ನು ಮೊದಲ ಬಾರಿಗೆ ಫೆಬ್ರವರಿ 26ರಂದು ಪಾಕಿಸ್ತಾನದ ಮೂಲಕ ಆಫ್ಘಾನಿಸ್ತಾನದ ಜಲಾಲಾಬಾದ್‌ಗೆ ತಲುಪಿಸಲಾಗಿತ್ತು.
2ನೇ ಬಾರಿಗೆ ಮಾರ್ಚ್ 3ರಂದು 2000 ಮೆಟ್ರಿಕ್ ಟನ್​ ಗೋಧಿಯನ್ನು ಅಮೃತಸರದ ಅಟ್ಟಾರಿಯಿಂದ ಆಫ್ಘಾನಿಸ್ತಾನದ ಜಲಾಲಾಬಾದ್‌ಗೆ ಕಳುಹಿಸಲಾಗಿತ್ತು. ಮೂರನೇ ಬಾರಿಗೆ ಮಾರ್ಚ್ 8ರಂದು ಅಟ್ಟಾರಿ-ವಾಘಾ ಗಡಿಯ ಮೂಲಕ 40 ಟ್ರಕ್‌ಗಳಲ್ಲಿ 2,000 ಮೆಟ್ರಿಕ್ ಟನ್ ಗೋಧಿಯನ್ನು ಆಫ್ಘಾನಿಸ್ತಾನಕ್ಕೆ ಕಳುಹಿಸಲಾಗಿತ್ತು.
ಈ ತಿಂಗಳ ಆರಂಭದಲ್ಲಿ ಭಾರತವು ಪಾಕಿಸ್ತಾನದ ಮೂಲಕ ಅಫ್ಘಾನಿಸ್ತಾನಕ್ಕೆ 50,000 ಮೆಟ್ರಿಕ್ ಟನ್ (MT) ಗೋಧಿಯನ್ನು ಕಳುಹಿಸುವುದಾಗಿ ಘೋಷಿಸಿತ್ತು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!