ಕಳೆದ ಹತ್ತು ವರ್ಷದಲ್ಲಿ ಐತಿಹಾಸಿಕ ಮೈಲಿಗಲ್ಲು ಸಾಧಿಸಿದ ಭಾರತ! ದೇಶದ ಜಿಡಿಪಿ ಡಬಲ್!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಅಂತಾರಾಷ್ಟ್ರೀಯ ಹಣಕಾಸು ನಿಧಿಯ (IMF) ಅಂಕಿಅಂಶಗಳ ಪ್ರಕಾರ ಕಳೆದ ಹತ್ತು ವರ್ಷಗಳಲ್ಲಿ (10 years) ಭಾರತದ ಒಟ್ಟು ದೇಶೀಯ ಉತ್ಪನ್ನ(ಜಿಡಿಪಿ) ದುಪ್ಪಟ್ಟಾಗಿದೆ. ಕಳೆದ ದಶಕದಲ್ಲಿ ಭಾರತವು ಚೀನಾ, ಯುನೈಟೆಡ್ ಸ್ಟೇಟ್ಸ್, ಮತ್ತು ಪ್ರಮುಖ ಯುರೋಪಿಯನ್ ರಾಷ್ಟ್ರಗಳಿಗಿಂತ ಹೆಚ್ಚಿನ GDP ಬೆಳವಣಿಗೆಯ ದರವನ್ನು ದಾಖಲಿಸಿದೆ.

ಕಳೆದ ಹತ್ತು ವರ್ಷಗಳಲ್ಲಿ ಭಾರತದ ಆರ್ಥಿಕತೆಯು 105% ವಿಸ್ತರಿಸಿದರೆ, ಜಪಾನ್‌ನ ಜಿಡಿಪಿ ಸ್ಥಿರವಾಗಿದೆ. ಜಪಾನ್‌ನ GDP ಪ್ರಸ್ತುತ $4.4 ಟ್ರಿಲಿಯನ್ ಆಗಿದ್ದು, ಭಾರತದ ಜಿಡಿಪಿ ಪ್ರಸ್ತುತ $4.3 ಟ್ರಿಲಿಯನ್ ಆಗಿದೆ. ಭಾರತವು 2025 ರ ಮೂರನೇ ತ್ರೈಮಾಸಿಕದ ವೇಳೆಗೆ ಆ ಮಟ್ಟವನ್ನು ದಾಟಲು ಸಜ್ಜಾಗಿದೆ.

ಸರಾಸರಿ ಬೆಳವಣಿಗೆಯ ದರವು ಇದೇ ರೀತಿ ಮುಂದುವರಿದರೆ, 2027 ರ ಎರಡನೇ ತ್ರೈಮಾಸಿಕದ ವೇಳೆಗೆ ಭಾರತವು ಜಾಗತಿಕವಾಗಿ 3 ನೇ ಅತಿದೊಡ್ಡ ಆರ್ಥಿಕತೆಯಾದ ಜರ್ಮನಿಯನ್ನು ಮೀರಿಸುತ್ತದೆ. ಜರ್ಮನಿಯ GDP ಪ್ರಸ್ತುತ $4.9 ಟ್ರಿಲಿಯನ್ ಆಗಿದೆ.

ಆರ್ಥಿಕತೆ ಬೆಳವಣಿಗೆಯ ವೇಗದಲ್ಲಿ ಭಾರತವು IMF ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದರೆ, ಆರ್ಥಿಕತೆಯ ಗಾತ್ರದ ವಿಷಯದಲ್ಲಿ ಮೊದಲ ಎರಡು ಸ್ಥಾನಗಳಲ್ಲಿ 30.3 ಟ್ರಿಲಿಯನ್ ಹೊಂದಿರುವ ಅಮೆರಿಕ ಮತ್ತು $19.5 ಟ್ರಿಲಿಯನ್ ಹೊಂದಿರುವ ಚೀನಾ ಉಳಿದಿವೆ. ಜರ್ಮನಿ $4.9 ಟ್ರಿಲಿಯನ್‌ನೊಂದಿಗೆ ಮೂರನೇ ಸ್ಥಾನದಲ್ಲಿದೆ, ಜಪಾನ್ $4.4 ಟ್ರಿಲಿಯನ್‌ನೊಂದಿಗೆ ನಾಲ್ಕನೇ ಸ್ಥಾನದಲ್ಲಿದೆ ಮತ್ತು ಭಾರತ $4.3 ಟ್ರಿಲಿಯನ್‌ನೊಂದಿಗೆ ಐದನೇ ಸ್ಥಾನದಲ್ಲಿದೆ.

- Advertisement - Ply
Nova

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!