Thursday, July 7, 2022

Latest Posts

ಮೋದಿಯವರ ಸಮರ್ಥ ನಾಯಕತ್ವದಡಿ ಭಾರತ ಜಾಗತಿಕವಾಗಿ ಪ್ರಭಾವಿಯಾಗಿ ಬೆಳೆದಿದೆ: ಶಾಸಕ ಓಲೇಕಾರ

ಹೊಸದಿಗಂತ ವರದಿ, ಹಾವೇರಿ
ಪ್ರಧಾನಿ ನರೇಂದ್ರ ಮೋದಿಯವರ ಮುಂದಾಳತ್ವದಲ್ಲಿ ಭಾರತವು ಜಾಗತಿಕ ಮಟ್ಟದಲ್ಲಿ ಪ್ರಭಾವಿಯಾಗಿ ಬೆಳೆದಿದೆ. ಹಾಗೂ ಔದ್ಯೋಗಿಕವಾಗಿ ಅತ್ಯುನ್ನತ ಪ್ರಗತಿ ಸಾಧಿಸಿ ಮುನ್ನಡೆಯುತ್ತಿದೆ ಎಂದು ಶಾಸಕ ನೆಹರೂ ಓಲೇಕಾರ ಹೇಳಿದರು.
ನಗರದ ಭಾನುವಾರ ಜರುಗಿದ ಹಾವೇರಿ ಜಿಲ್ಲಾ ಬಿಜೆಪಿ ವಿಶೇಷ ಕಾರ್ಯಕಾರಿಣಿ ಸಭೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು. ವಿಶ್ವ ಭೂಪಟದಲ್ಲಿ ಭಾರತವಿಂದು ಅತ್ಯಂತ ಪ್ರಭಾವಿ ದೇಶವಾಗಿ ಬದಲಾಗುತ್ತಿದೆ. ಭಾರತ ವಿಶ್ವ ನಾಯಕರ ದೃಷ್ಠಿಯಲ್ಲಿ ಅತಿ ಮಹತ್ವವನ್ನು ಪಡೆದುಕೊಳ್ಳುತ್ತಿರುವುದಕ್ಕೆ ಪ್ರಧಾನಿ ನರೇಂದ್ರ ಮೋದಿಯವರು ಇತ್ತೀಚೆಗೆ ಕೈಗೊಳ್ಳುತ್ತಿರುವ ಗಟ್ಟಿಯಾದ ನಿಲುವುಗಳೇ ಕಾರಣ ಎಂದರು.
ರಷ್ಯಾ ಹಾಗೂ ಉಕ್ರೇನ್ ಯುದ್ಧಸದ ವಿಚಾರದಲ್ಲಿ ಭಾರತ ಕೈಗೊಂಡ ನಿಲುವುಗಳು ವಿಶ್ವದ ಕೆಲ ದೇಶಗಳ ನಾಯಕರನ್ನು ಕಂಗೆಡಿಸುವಂತೆ ಮಾಡಿದ್ದರೆ ಕೆಲ ದೇಶಗಳ ಮೆಚ್ಚುಗೆಗೆ ಪಾತ್ರವಾಗುವಂತೆ ಮಾಡಿದೆ. ಬರುವ ದಿನಗಳಲ್ಲಿ ಭಾರತ ಎಲ್ಲ ಕ್ಷೇತ್ರಗಳಲ್ಲಿಯೂ ವಿದೇಶಿಗರನ್ನು ಆಕರ್ಷಿಸುವ ದೇಶವಾಗಲಿದೆ ಎಂದರು.
ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಕೈಗೊಳ್ಳುತ್ತಿರುವ ಅಭಿವೃದ್ಧಿಕಾರ್ಯಗಳು ದೇಶದ ಕಟ್ಟಡ ಕಡೆಯ ವ್ಯಕ್ತಿಗೂ ತಲಪುವಂತೆ ಮಾಡಿದಾಗ ಮಾತ್ರ ಪಕ್ಷ ಬೆಳೆಯುವುದಕ್ಕೆ ಸಾಧ್ಯವಾಗುತ್ತದೆ. ಕೇಂದ್ರ ಸರ್ಕಾರದ ನದಿ ಜೋಡಣಾ ಕಾರ್ಯಕ್ರಮಗಳಿಂದ ಮುಂಬರುವ ಬರುವ ದಿನಗಳಲ್ಲಿ ದೇಶದ ಅನೇಕ ರಾಜ್ಯಗಳ ರೈತರು ವರ್ಷದ 12 ತಿಂಗಳೂ ತಮ್ಮ ಭೂಮಿಗೆ ನೀರನ್ನು ಒದಗಿಸಿ ಬೆಳೆಯನ್ನು ಬೆಳೆದುಕೊಳ್ಳುವುದಕ್ಕೆ ಸಾಧ್ಯವಾಗಲಿದೆ ಎಂದರು.
ಉಗ್ರಾಣ ನಿಗಮದ ಅಧ್ಯಕ್ಷ ಯು.ಬಿ.ಬಣಕಾರ ಮಾತನಾಡಿ, ಪ್ರಸಕ್ತ ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಕೈಗೊಳ್ಳುತ್ತಿರುವ ಪ್ರಗತಿ ಕಾರ್ಯಗಳನ್ನು ಗಮನಿಸಿದರೆ ಬರುವ ಎಲ್ಲ ಚುನಾವಣೆಗಳಲ್ಲಿ ಪಕ್ಷ ಪ್ರಚಾರಕ್ಕೆ ಹೋಗದಿದ್ದರೂ ಪಕ್ಷದ ಅಭ್ಯರ್ಥಿಗಳ ಗೆಲುವು ಸಾಧ್ಯವಾಗಬಹುದಾಗಿದೆ. ಆದರೆ ಹಾಗಂತ ಮೈಮರೆತು ಕುಳಿತುಕೊಳ್ಳುವಂತಿಲ್ಲ. ಬರುವ ಎಲ್ಲ ಚುನಾವಣೆಗಳು ಮುಕ್ತಾಯವಾಗುವವರೆಗೂ ಕಾರ್ಯಕರ್ತರು ವಿಶ್ರಮಿಸುವಂತಿಲ್ಲ ಪಕ್ಷವನ್ನು ಅಧಿಕಾರಕ್ಕೆ ತರುವ ಗಿರಿಯನ್ನಿಟ್ಟುಕೊಂಡು ಕೆಲಸ ಮಾಡಬೇಕಾಗಿದೆ ಎಂದು ಹೇಳಿದರು.
ಬಿಜೆಪಿ ಜಿಲ್ಲಾಧ್ಯಕ್ಷ ಸಿದ್ದರಾಜ ಕಲಕೋಟಿ ಅಧ್ಯಕ್ಷತೆವಹಿಸಿ ಮಾತನಾಡಿ ದೇಶ ಹಾಗೂ ರಾಜ್ಯದಲ್ಲಿ ಬಿಜೆಪಿಯನ್ನು ಮತ್ತೆ ಅಧಿಕಾರಕ್ಕೆ ತರುವುದಕ್ಕೆ ಬದ್ಧರಾಗುವಂತೆ ಕಾರ್ಯಕರ್ತರಿಗೆ ಕರೆ ನೀಡಿದರು.
ವಿಪ ಸದಸ್ಯ ಆರ್.ಶಂಕರ, ವಾಯವ್ಯ ರಸ್ತೆ ಸಾರಿಗೆ ಸಂಸ್ಥೆಯ ಉಪಾಧ್ಯಕ್ಷ ಬಸವರಾಜ ಕೇಲಗಾರ, ಮಾಜಿ ಶಾಸಕ ಶಿವರಾಜ್ ಸಜ್ಜನರ, ವಿಭಾಗ ಸಂಘಟನಾ ಪ್ರಧಾನ ಕಾರ್ಯದರ್ಶಿ ರಾಜಕುಮಾರ್ ಬಸವಾ, ಜಿಲ್ಲಾ ಸಂಘಟನಾ ಪ್ರಭಾರಿ ಕಲ್ಲೇಶ ಎನ್.ಎಲ್, ರಾಜ್ಯ ವಿಶೇಷ ಅಹ್ವಾನಿತೆ ಭಾರತಿ ಜಂಬಗಿ, ಮಂಜುನಾಥ ಓಲೇಕಾರ, ಪಾಲಾಕ್ಷಗೌಡ ಪಾಟೀಲ್, ಶಶಿಧರ ಹೊಸಳ್ಳಿ, ಕೃಷ್ಣ ಈಳಗೇರ, ರುದ್ರೇಶ್ ಚಿನ್ನಣ್ಣನವರ ಇದ್ದರು

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Whatsapp Group
Telegram

Latest Posts

Don't Miss