ವಿಶ್ವದಲ್ಲೇ ಅತಿ ಹೆಚ್ಚು ಮಹಿಳಾ ಪೈಲಟ್‌ಗಳನ್ನು ಹೊಂದಿದೆ ಭಾರತ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಭಾರತದ ವಿಮಾನಯಾನ ನಿಯಂತ್ರಣ ಸಂಸ್ಥೆಯು ಭಾರತದಲ್ಲಿ ಪೈಲಟ್‌ಗಳ ಸಾಮರ್ಥ್ಯದ ಕುರಿತು ಇತ್ತೀಚಿನ ಅಂಕಿಅಂಶಗಳನ್ನು ಹಂಚಿಕೊಂಡಿದ್ದು ಜಗತ್ತಿನ ಇತರ ದೇಶಗಳಿಗಿಂತ ಹೆಚ್ಚಿನ ಸಂಖ್ಯೆಯಲ್ಲಿ ಮಹಿಳಾ ಪೈಲಟ್‌ ಗಳನ್ನು ಹೊಂದಿರುವ ದೇಶವಾಗಿ ಭಾರತ ಹೊರಹೊಮ್ಮಿದೆ. ಇತ್ತೀಚಿನ ಅಂಕಿಅಂಶಗಳ ಪ್ರಕಾರ ದೇಶದಲ್ಲಿರುವ ಒಟ್ಟಾರೆ ಪೈಲಟ್‌ಗಳಲ್ಲಿ 15 ಶೇಕಡಾದಷ್ಟು ಮಹಿಳೆಯರಿದ್ದಾರೆ. ಇದು ಮಹಿಳಾಪೈಲಟ್‌ ಗಳ ಜಾಗತಿಕ ಸರಾಸರಿಗಿಂತ ಮೂರು ಪಟ್ಟು ಹೆಚ್ಚಿದೆ.

ವಿವಿಧ ಭಾರತೀಯ ವಿಮಾನಯಾನ ಸಂಸ್ಥೆಗಳಿಂದ ಪಡೆದ ಮಾಹಿತಿಯ ಪ್ರಕಾರ 2021 ರಲ್ಲಿ ಒಟ್ಟು 244 ಪೈಲಟ್‌ಗಳನ್ನು ನೇಮಿಸಿಕೊಳ್ಳಲಾಗಿದೆ. ಮತ್ತು, ಮುಂದಿನ ಐದು ವರ್ಷಗಳಲ್ಲಿ ಭಾರತಕ್ಕೆ ವರ್ಷಕ್ಕೆ 1,000 ಪೈಲಟ್‌ಗಳು ಬೇಕಾಗಬಹುದು ಎಂದು ಅಂದಾಜಿಸಲಾಗಿದೆ. ಇದಲ್ಲದೆ, ಭಾರತದಲ್ಲಿ ವಿವಿಧ ದೇಶೀಯ ವಿಮಾನಯಾನ ಸಂಸ್ಥೆಗಳೊಂದಿಗೆ ಕೆಲಸ ಮಾಡುತ್ತಿರುವ 67 ವಿದೇಶಿ ಪ್ರಜೆಗಳು ಸೇರಿದಂತೆ ಸುಮಾರು 10,000 ಪೈಲಟ್‌ಗಳು ಇದ್ದಾರೆ ಎಂದು ಡಿಜಿಸಿಎ ಡೇಟಾ ಉಲ್ಲೇಖಿಸಿದೆ.

ವರದಿಯು ಇನ್ನೂ ಕೆಲ ಅಂಶಗಳನ್ನು ಬಹಿರಂಗಪಡಿಸಿದ್ದು ಭಾರತವು ಪೈಲಟ್‌ ಗಳ ಲಿಂಗ ಸಮಾನತೆಯಲ್ಲಿ ಜಗತ್ತಿನ ಉಳಿದೆಲ್ಲಾ ದೇಶಗಳಿಗಿಂತ ಉನ್ನತ ಸ್ಥಾನದಲ್ಲಿದೆ. ಅಲ್ಲದೇ ಮಹಿಳಾ ಪೈಲಟ್‌ಗಳು ಪುರುಷ ಪೈಲಟ್‌ ಗಳಿಗಿಂತ ಹೆಚ್ಚು ಸುರಕ್ಷಿತವಾಗಿ ವಿಮಾನ ಚಾಲನೆ ನಡೆಸುತ್ತಾರೆ ಎಂದು ಅಧ್ಯಯನ ವರದಿಯೊಂದು ತಿಳಿಸಿದ್ದು ಪುರುಷರಿಗೆ ಹೋಲಿಸಿದರೆ ಮಹಿಳಾ ಪೈಲಟ್‌ಗಳಿಂದಾಗ ಅತ್ಯಂತ ಕಡಿಮೆ ವಿಮಾನ ಅಪಘಾತಗಳು ಸಂಭವಿಸಿವೆ ಎಂದು ಉಲ್ಲೇಖಿಸಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!