ರಷ್ಯಾದಿಂದ ಕಚ್ಚಾ ತೈಲ ಆಮದನ್ನು ನಿಲ್ಲಿಸಿಲ್ಲ: ಅಮೆರಿಕ ಅಧ್ಯಕ್ಷ ಟ್ರಂಪ್‌ ಗೆ ಭಾರತ ತಿರುಗೇಟು!

ಹೊಸದಿಗಂತ ಡಿಜಿಟಲ್ ಡೆಸ್ಕ್;

ಭಾರತೀಯ ತೈಲ ಕಂಪನಿಗಳು ರಷ್ಯಾದಿಂದ ಕಚ್ಚಾ ತೈಲ ಆಮದನ್ನು ನಿಲ್ಲಿಸಿದ್ದು, ಇದು ಉತ್ತಮ ಬೆಳವಣಿಗೆ ಎಂಬ ಹೇಳಿದ್ದ ಅಮೆರಿಕ ಅಧ್ಯಕ್ಷ ಡೊನಾಲ್ಡ್‌ ಟ್ರಂಪ್‌ ಗೆ ಇದನ್ನು ಭಾರತ ಸರಕಾರದ ಮೂಲಗಳು ತಿರುಗೇಟು ನೀಡಿವೆ.

ದೇಶದ ಇಂಧನಕ್ಕೆ ಸಂಬಂಧಿಸಿದ ಖರೀದಿ ನಿರ್ಧಾರಗಳು ಸಂಪೂರ್ಣವಾಗಿ ಮಾರುಕಟ್ಟೆಯ ಸ್ಥಿತಿಗತಿ ಮತ್ತು ರಾಷ್ಟ್ರೀಯ ಹಿತಾಸಕ್ತಿಯನ್ನು ಅವಲಂಬಿಸಿವೆ ಎಂದು ಸರಕಾರ ಸ್ಪಷ್ಟಪಡಿಸಿದೆ.

ಭಾರತವು ರಷ್ಯಾದಿಂದ ತೈಲ ಖರೀದಿ ನಿಲ್ಲಿಸಿರಬಹುದು ಎಂಬ ವರದಿಗಳನ್ನು ಅಮೆರಿಕ ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಸ್ವಾಗತಿಸಿ, ಅದೊಂದು ‘ಒಳ್ಳೆಯ ಹೆಜ್ಜೆ’ ಎಂದು ಬಣ್ಣಿಸಿದ್ದರು. ಆದರೆ ಇದಾದ ಬೆನ್ನಲ್ಲೇ ಭಾರತ ಸರಕಾರ ತನ್ನ ನಿಲುವನ್ನು ಸ್ಪಷ್ಟಪಡಿಸಿದೆ.

ಸಮುದ್ರ ಮಾರ್ಗದ ಮೂಲಕ ಭಾರತವು ರಷ್ಯಾದ ಕಚ್ಚಾ ತೈಲವನ್ನು ಖರೀದಿಸುವ ಅತಿದೊಡ್ಡ ದೇಶವಾಗಿದೆ. ವಿಶ್ವದ ಎರಡನೇ ಅತಿದೊಡ್ಡ ಕಚ್ಚಾ ತೈಲ ಉತ್ಪಾದಕ ರಾಷ್ಟ್ರವಾಗಿರುವ ರಷ್ಯಾ, ಜಾಗತಿಕ ಬೇಡಿಕೆಯ ಸುಮಾರು ಶೇ. 10ರಷ್ಟನ್ನು ಪೂರೈಸುತ್ತದೆ

ಇನ್ನೊಂದೆಡೆ ಶೇ. 85ರಷ್ಟು ಕಚ್ಚಾ ತೈಲವನ್ನು ಆಮದು ಮಾಡಿಕೊಳ್ಳುವ ಭಾರತ, ವಿಶ್ವದ ಮೂರನೇ ಅತಿದೊಡ್ಡ ಇಂಧನ ಗ್ರಾಹಕ ದೇಶವಾಗಿದೆ. ಈ ಸವಾಲಿನ ಪರಿಸ್ಥಿತಿಯಲ್ಲಿ, ಅಂತಾರಾಷ್ಟ್ರೀಯ ನಿಯಮಗಳಿಗೆ ಸಂಪೂರ್ಣವಾಗಿ ಬದ್ಧವಾಗಿದ್ದುಕೊಂಡೇ ಕೈಗೆಟಕುವ ದರದಲ್ಲಿ ಇಂಧನವನ್ನು ಪಡೆಯಲು ತನ್ನ ಮೂಲಗಳನ್ನು ಕಾರ್ಯತಂತ್ರವಾಗಿ ಹೊಂದಿಸಿಕೊಂಡಿದೆ ಎಂದು ಸರಕಾರಿ ಮೂಲಗಳು ಹೇಳಿವೆ.

ರಷ್ಯಾದೊಂದಿಗಿನ ತನ್ನ ಸಂಬಂಧ ಈಗಿನದಲ್ಲ ಎಂದು ಸಮರ್ಥಿಸಿಕೊಂಡಿರುವ ಭಾರತ, ಇದೇ ವೇಳೆ ಅಮೆರಿಕದೊಂದಿಗಿನ ಸಂಬಂಧಗಳು ಕೂಡ ದೃಢವಾಗಿ ಮುಂದುವರೆಯಲಿವೆ ಎಂದು ವಿದೇಶಾಂಗ ವ್ಯವಹಾರಗಳ ಸಚಿವಾಲಯದ ವಕ್ತಾರ ರಣದೀಪ್ ಜೈಸ್ವಾಲ್ ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!