ಪ್ರಜಾಪ್ರಭುತ್ವ ಅಪಾಯದಲ್ಲಿದೆ ಎಂಬ ಕಾಂಗ್ರೆಸ್ ಬೊಬ್ಬೆಗೆ ಹಿನ್ನಡೆ?- ಮೋದಿ ಭೇಟಿ ಎದುರಲ್ಲಿ ಭಾರತದ ಲೋಕತಂತ್ರವನ್ನು ಹೊಗಳಿದ ಅಮೆರಿಕ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಭಾರತವು ರೋಮಾಂಚಕ ಪ್ರಜಾಪ್ರಭುತ್ವ ರಾಷ್ಟ್ರ, ನವದೆಹಲಿಗೆ ಹೋದವರು ಅದನ್ನು ಸ್ವತಃ ಅನುಭವಿಸಬಹುದು ಎಂದು ಅಮೆರಿಕಾದ ಶ್ವೇತಭವನ ಹೇಳಿದೆ. ಈ ಹೇಳಿಕೆಯಿಂದ ಭಾರತದ ಪ್ರಜಾಪ್ರಭುತ್ವದ ಬಗ್ಗೆ ಇದ್ದ ಕಳವಳವನ್ನು ತಳ್ಳಿ ಹಾಕಿದಂತೆ ಕಂಡು ಬಂದಿದೆ. ಇನ್ನು ಪ್ರಧಾನಿ ನರೇಂದ್ರ ಮೋದಿಯವರು ತಿಂಗಳ ಅಂತ್ಯದಲ್ಲಿ ಅಮೆರಿಕ ಪ್ರವಾಸ ಕೈಗೊಳ್ಳಲಿದ್ದು, ಅದಕ್ಕೂ ಮುನ್ನ ಭಾರತದ ಪ್ರಜಾಪ್ರಭುತ್ವವನ್ನು ಅಮೆರಿಕ ಹೊಗಳಿದೆ.

ಅಮೆರಿಕ ಶ್ವೇತಭವನದ ರಾಷ್ಟ್ರೀಯ ಭದ್ರತಾ ಮಂಡಳಿಯ ಕಾರ್ಯತಂತ್ರದ ಸಂವಹನಗಳ ಸಂಯೋಜಕ ಜಾನ್ ಕಿರ್ಬಿ, ಇಲ್ಲಿ ನಡೆಸಿದ ಸುದ್ದಿಗೋಷ್ಠಿಯಲ್ಲಿ ಮಾಧ್ಯಮದವರೊಂದಿಗೆ ಭಾರತದ ಪ್ರಜಾಪ್ರಭುತ್ವದ ಬಗ್ಗೆ ಹಾಡಿ ಹೊಗಳಿದ್ದಾರೆ.

‘ಯಾರಾದರೂ ನವದೆಹಲಿಗೆ ಹೋದರೆ ಪ್ರಜಾಪ್ರಭುತ್ವದ ರೋಮಾಂಚಕತೆ, ಅದ್ಭುತವನ್ನು ಸ್ವತಃ ನೋಡಬಹುದು ಮತ್ತು ಇದರಿಂದ ಖಂಡಿತವಾಗಿಯೂ ಮುಂದಿನ ದಿನಗಳಲ್ಲಿ ಪ್ರಜಾಪ್ರಭುತ್ವ ಸಂಸ್ಥೆಗಳ ಶಕ್ತಿ ಮತ್ತು ಆರೋಗ್ಯ, ಅಭಿವೃದ್ದಿಯು ಚರ್ಚೆಯ ಭಾಗವಾಗಲಿದೆ ಎಂದು ನಾನು ನಿರೀಕ್ಷಿಸುತ್ತೇನೆ’ ಎಂದರು.

ಮಾಧ್ಯಮದವರ ಪ್ರಶ್ನೆಗೆ ಕಿರ್ಬಿಯವರು, ನಾವು ಎಂದಿಗೂ ನಮ್ಮ ಸ್ನೇಹಿತರೊಡನೆ ನಮ್ಮಲ್ಲಿ ಇರುವ ಕಳವಳ ವ್ಯಕ್ತಪಡಿಸಲು, ಹೇಳಿಕೊಳ್ಳಲು ನಾಚಿಕೆ ಪಡುವುದಿಲ್ಲ. ಅದೇ ರೀತಿ ಈ ಭಾರತದ ಭೇಟಿಯಿಂದ ನಿಜವಾಗಿಯೂ ಈಗ ಇರುವ ಸಂಬಂಧ ಇನ್ನಷ್ಟು ಗಟ್ಟಿಯಾಗಲಿದೆ.

ಸಹಜವಾಗಿ, ನಮ್ಮ ಎರಡು ದೇಶಗಳ ನಡುವೆ ಬಲವಾದ ಆರ್ಥಿಕ ಸಂಬಂಧವಿದೆ. ಭಾರತವು ಪೆಸಿಫಿಕ್ ಕ್ವಾಡ್‌ನ ಸದಸ್ಯ ಮತ್ತು ಇಂಡೋ-ಪೆಸಿಫಿಕ್ ಭದ್ರತೆಗೆ ಸಂಬಂಧಿಸಿದಂತೆ ಪ್ರಮುಖ ಸ್ನೇಹಿತ ಮತ್ತು ಪಾಲುದಾರ ರಾಷ್ಟ್ರವಾಗಿದೆ. ಭಾರತವು ನಿಸ್ಸಂಶಯವಾಗಿ ನಮ್ಮ ಎರಡು ರಾಷ್ಟ್ರಗಳ ನಡುವೆ ದ್ವಿಪಕ್ಷೀಯವಾಗಿ ಮಾತ್ರವಲ್ಲ, ಬಹುಪಕ್ಷೀಯವಾಗಿ ಹಲವು ಹಂತಗಳಲ್ಲಿ ಸಂಬಂಧ ಹೊಂದಿದೆ. ಜೊತೆಗೆ ಆ ಎಲ್ಲ ವಿಷಯಗಳ ಬಗ್ಗೆ ಮಾತನಾಡಲು, ಆ ಪಾಲುದಾರಿಕೆ ಮತ್ತು ಆ ಸ್ನೇಹವನ್ನು ಕಾಪಾಡಿಕೊಳ್ಳಲು ಜೊತೆಗೆ ಬಾಂಧವ್ಯವನ್ನು ಮತ್ತೊಂದು ಹಂತಕ್ಕೆ ತೆಗೆದುಕೊಂಡು ಹೋಗಲು ಪ್ರಧಾನಿ ಮೋದಿ ಭೇಟಿ ಸಹಕಾರಿಯಾಗಲಿದೆ ಎಂದು ಕಿರ್ಬಿ ಹೇಳಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!