ಜಗತ್ತಿನ ಹೂಡಿಕೆ‌ ಮತ್ತು ಅವಕಾಶಗಳಿಗೆ ಭಾರತ ಅತ್ಯುತ್ತಮವಾದ ದೇಶ: ಉಪ ರಾಷ್ಟ್ರಪತಿ ಜಗದೀಪ ಧನಕರ್

ಹೊಸದಿಗಂತ ವರದಿ ಹಾವೇರಿ;

ಜಗತ್ತಿನ ಹೂಡಿಕೆ‌ ಮತ್ತು ಅವಕಾಶಗಳಿಗೆ ಭಾರತ ಅತ್ಯುತ್ತಮವಾದ ದೇಶವಾಗಿದೆ. ಅರ್ಥ ವ್ಯವಸ್ಥೆಯಲ್ಲಿ ಜಹತ್ತಿನ ಐದನೇ ಬಲಶಾಲಿ ರಾಷ್ಟ್ರ ನಮ್ಮದು. ಭವಿಷ್ಯದಲ್ಲಿ ಮೂರನೇ ಬಲಿಷ್ಠವಾದ ದೇಶ ನಮ್ಮದಾಗಲಿದೆ. ಜಗತ್ತು ಇಂದು ಭಾರತದ ಬಗ್ಗೆ ಪ್ರಶಂಸೆ ವ್ಯಕ್ತಪಡಿಸುತ್ತಿದೆ ಎಂದು ಉಪ ರಾಷ್ಟ್ರಪತಿ ಜಗದೀಪ ಧನಕರ್ ಹೇಳಿದರು‌.

ರಾಣೆಬೆನ್ನೂರಿನ ರಾಜರಾಜೇಶ್ವರಿ ಕಾಲೇಜಿ ಆವರಣದಲ್ಲಿ ಮೂರು ದಿನಗಳ ಕಾಲ ಹಮ್ಮಿಕೊಂಡಿರುವ ಕರ್ನಾಟಕ ವೈಭವ ಕಾರ್ಯಕ್ರಮ ಕ್ಕೆ ಶುಕ್ರವಾರ ಡೊಳ್ಳು ಬಾರಿಸುವ ಮೂಲಕ ಚಾಲನೆ ನೀಡಿ ಮಾತನಾಡಿದರು‌.

ನಾವೆಲ್ಲರೂ ಭಾರತೀಯರು. ಭಾರತೀಯತೆ ಎಂಬ ನಮ್ಮ ರಾಷ್ಟ್ರವಾದ ಗಂಗಾ ನದಿಯಂತೆ ಪವಿತ್ರವಾದದ್ದು. ಇದು ಎಲ್ಲ ಸಮಾಜವನ್ನೂ ಒಳಗೊಂಡಿದೆ. 5 ಸಾವಿರ ವರ್ಷಗಳಷ್ಟು ಹಳೆಯ ಸಂಸ್ಕೃತಿ ನಮ್ಮದು. ಇಂತಹ ಐತಿಹಾಸಿಕ ಸಂಸ್ಕೃತಿ ಉಳಿಸುವುದು ನಮ್ಮ ಕರ್ತವ್ಯ.. ಕಾಶ್ಮೀರದಲ್ಲಿ ವಿಕಾಸ ಕಾಣಿಸುತ್ತಿದೆ. ವರ್ಷಕ್ಕೆ ಎರಡು ಕೋಟಿ‌ ಪ್ರವಾಸಿಗರು ಭೇಟಿ ನೀಡುತ್ತಿದ್ದಾರೆ. ದೇಶದ ಕೊಡುಗೆಯಲ್ಲಿ ಕಾಶ್ಮೀರದ ಪಾಲೂ ಸೇರಿಕೊಂಡಿದೆ. ಎಂದರು.

ರಾಷ್ಟ್ರೀಯ ಭಾವನೆ ಎಲ್ಲರಲ್ಲೂ ಮೂಡಬೇಕು. ೧೪೦ ಕೋಟಿ ಜನಸಂಖ್ಯೆ ಹೊಂದಿರುವ ಭಾರತ ಹೇಗೆ ಸಾಗುತ್ತದೆ ಎಂದು ಹೇಳುತ್ತಿದ್ದರು. ಹತ್ತು ವರ್ಷಗಳ ಹಿಂದೆ ಭಾರತ ಹೇಗಿತ್ತು. ನಿರಾಶೆಯಿಂದ ಕೂಡಿದ ವ್ಯವಸ್ಥೆ ಆಗಿತ್ತು. ಈಗ ಕೇಂದ್ರ ಸರ್ಕಾರದ ಸಕಾರಾತ್ಮಕ ಕ್ರಮಗಳಿಂದ ವ್ಯವಸ್ಥೆ ಅಭಿವೃದ್ಧಿಯತ್ತ ಸಾಗಿದೆ.

ಷಡ್ಯಂತ್ರ ಮಾಡುವವರಿಗೆ ವಿದೇಶಿ ಕಠಿಣ ಶಾಸನದ ಮೂಲಕ ಕೇಂದ್ರ ಸರ್ಕಾರ ಎಚ್ಚರಿಕೆ ‌ಕೊಟ್ಟಿದೆ. ಭಾರತದಲ್ಲಿ ಪ್ರಸ್ತುತ ದೊಡ್ಡ ಯಜ್ಞ ನಡೆಯುತ್ತಿದೆ. ವಿಕಸಿತ ಭಾರತ ನಮ್ಮ ಕನಸಲ್ಲ ಗುರಿ.. ಇದು ನಿಶ್ಚಿತ. ಯಾರೂ ತಡೆಯಲಾಗುವುದಿಲ್ಲ. ೨೦೪೦ರೊಳಗೆ ಭಾರತ ವಿಕಸಿತ ಭಾರತ ಆಗುತ್ತದೆ. ಅದಕ್ಕೂ ಮುಂಚೆಯೇ ಆಗಬಹುದು.

ಪ್ರಾದೇಶಿಕತೆ ಮತ್ತು ರಾಷ್ಟ್ರೀಯತೆಯ ಕುರಿತು ಚರ್ಚೆ ಯಾಕೆ ಆಗುತ್ತದೆ ಎಂಬುದು ಆಶ್ಚರ್ಯ ಉಂಟುಮಾಡಿತ್ತದೆ. ರಾಷ್ಟ್ರ ವಿರೋಧಿ ಭಾವನೆ ಬಿಂಬಿಸಲು ಕೆಲವರು ಸಂಚು ಮಾಡುತ್ತಿದ್ದಾರೆ. ಬೇರೆ ಯಾವುದೇ ದೇಶದಲ್ಲಿ ಇಂತಹ ಕೆಲಸ ಆಗಿಲ್ಲ. ಈ ಕುರಿತು ಚಿಂತನೆ ಆಗಬೇಕಿದೆ ಕರ್ನಾಟಕದ ಕಲೆ, ಸಂಸ್ಕೃತಿ, ಪರಂಪರೆ, ಧಾರ್ಮಿಕತೆಯ ತವರೂರು. ಕದಂಬ ಚಾಲುಕ್ಯ ವಿಜಯನಗರ ಸಾಮ್ರಾಜ್ಯದ ಬಗ್ಗೆ ಅರಿತರ ಇದು ತಿಳಿಯುತ್ತದೆ ಎಂದರು.

ಈ ವೇಳೆ ಉಪರಾಷ್ಟ್ರಪತಿ ಗಳ ಪತ್ನಿ ಡಾ.ಸುದೇಶ ಧನಕರ, ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್, ಬಿಜೆಪಿ ರಾಷ್ಟ್ರೀಯ ಸಂಘಟನಾ ಕಾರ್ಯದರ್ಶಿ ಬಿ.ಎಲ್. ಸಂತೋಷ, ಅಖಿಲ ಭಾರತ ಪ್ರಜ್ಞಾಪ್ರವಾಹದ ಸಹ ಸಂಯೋಜಕ ರಘುನಾಥಜಿ, ಮೀನುಗಾರಿಕೆ ಸಚಿವ ಮಂಕಾಳ ವೈದ್ಯ
ವಚನಾನಂದ ಸ್ವಾಮೀಜಿ ಇದ್ದರು.

- Advertisement - Ply
Nova

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!