ಹೊಸದಿಗಂತ ಡಿಜಿಟಲ್ ಡೆಸ್ಕ್:
ಭಾರತ-ಮಧ್ಯಪ್ರಾಚ್ಯ-ಯುರೋಪ್ ಕಾರಿಡಾರ್ ಮುಂಬರುವ ಶತಮಾನಗಳಲ್ಲಿ ವಿಶ್ವ ವ್ಯಾಪಾರದ ಆಧಾರವಾಗಲಿದೆ ಎಂದು ಪ್ರಧಾನಿ ನರೇಂದ್ರ ಮೋದಿ ಭಾನುವಾರ ಹೇಳಿದರು.
ತಮ್ಮ ಮಾಸಿಕ ಮನ್ ಕಿ ಬಾತ್ ಪ್ರಸಾರದಲ್ಲಿ, ಭಾರತವು ಸಮೃದ್ಧ ಮತ್ತು ದೊಡ್ಡ ವ್ಯಾಪಾರ ಶಕ್ತಿಯಾಗಿದ್ದಾಗ ಬಳಸುತ್ತಿದ್ದ ಪ್ರಾಚೀನ ವ್ಯಾಪಾರ ಕಾರಿಡಾರ್ “ಸಿಲ್ಕ್ ರೂಟ್” ಅನ್ನು ಮೋದಿ ನೆನಪಿಸಿಕೊಂಡರು ಮತ್ತು ಇತ್ತೀಚಿನ ಜಿ 20 ಶೃಂಗಸಭೆಯಲ್ಲಿ ದೇಶವು ಭಾರತ-ಮಧ್ಯಪ್ರಾಚ್ಯ-ಯುರೋಪ್ ಆರ್ಥಿಕ ಕಾರಿಡಾರ್ನ ಪರಿಕಲ್ಪನೆಯನ್ನು ರೂಪಿಸಿದೆ ಎಂದು ಹೇಳಿದರು.
ಭಾರತದಲ್ಲಿ ನಡೆದ ಜಿ20 ಶೃಂಗಸಭೆ ಯಶಸ್ವಿಯಾಗಿರುವುದು ಪ್ರತಿಯೊಬ್ಬ ಭಾರತೀಯನ ಸಂತೋಷವನ್ನು ದ್ವಿಗುಣಗೊಳಿಸಿದೆ. ಜನ ತಮಗೆ ಕಳುಹಿಸಿದ ಸಂದೇಶಗಳಲ್ಲಿ ಈ ಎರಡು ಸಾಧನೆಗಳನ್ನು ಹೆಚ್ಚಾಗಿ ಕೊಂಡಾಡಿದ್ದಾರೆ ಎಂದು ಹೇಳಿದರು. ಆಫ್ರಿಕನ್ ಒಕ್ಕೂಟವನ್ನು ಜಿ 20 ಸದಸ್ಯರನ್ನಾಗಿ ಮಾಡುವಲ್ಲಿ ಯಶಸ್ವಿಯಾದ ಭಾರತದ ನಾಯಕತ್ವವನ್ನು ಜಗತ್ತು ಗುರುತಿಸಿದೆ ಎಂದು ಮೋದಿ ತಿಳಿಸಿದರು.
ಜಿ 20 ಶೃಂಗಸಭೆಯ ಆತಿಥ್ಯ ವಹಿಸಿದ್ದ ಭಾರತ್ ಮಂಟಪವು ‘ಸೆಲೆಬ್ರಿಟಿ’ ಸ್ಥಳವಾಗಿ ಮಾರ್ಪಟ್ಟಿದೆ. ಜನ ಅತ್ಯಾಧುನಿಕ ಕಾನ್ಫರೆನ್ಸ್ ಹಾಲ್ನೊಂದಿಗೆ ಸೆಲ್ಫಿ ಕ್ಲಿಕ್ಕಿಸುತ್ತಿದ್ದಾರೆ ಎಂದು ಪ್ರಧಾನಿ ಬಣ್ಣಿಸಿದರು.