ಇಸ್ರೇಲ್‌ ದೇಶ ಇರೋದೇ ಕದ್ದ ಭೂಮಿಯಲ್ಲಿ, ಪ್ಯಾಲೆಸ್ತೇನ್‌ ಪರ ಭಾರತ ನಿಲ್ಲಬೇಕು: ಚೇತನ್‌

ಹೊಸದಿಂತ ಡಿಜಿಟಲ್‌ ಡೆಸ್ಕ್:‌

ಇಸ್ರೇಲ್‌ ಮೇಲೆ ಹಮಾಸ್‌ ಉಗ್ರರ ದಾಳಿ ನಡೆಸಿದ್ದು, ಈ ನಡುವೆ ಕನ್ನಡದ ನಟ ಹಾಗೂ ಸಾಮಾಜಿಕ ಕಾರ್ಯಕರ್ತ ಚೇತನ್‌ ಅಹಿಂಸಾ, ಇಸ್ರೇಲ್‌ ದೇಶ ಇರೋದೇ ಕದ್ದ ಭೂಮಿಯಲ್ಲಿ. ಭಾರತ ಪ್ಯಾಲೆಸ್ತೇನ್‌ ದೇಶದ ಪರವಾಗಿ ನಿಲ್ಲಬೇಕು ಎಂದು ಹೇಳಿದ್ದಾರೆ.

ಇಡೀ ಭಾರತ ದೇಶ ಈ ಯುದ್ಧದಲ್ಲಿ ಇಸ್ರೇಲ್‌ ಪರವಾಗಿ ನಿಂತಿದೆ. ಸ್ವತಃ ಪ್ರಧಾನಿ ನರೇಂದ್ರ ಮೋದಿ ಇಸ್ರೇಲ್‌ನ ಪರವಾಗಿ ಟ್ವೀಟ್‌ ಮಾಡಿದ್ದಲ್ಲದೆ, ಇಸ್ರೇಲ್‌ನಲ್ಲಿ ಅಮಾಯಕರ ಸಾವಿಗೆ ಮರುಕ ವ್ಯಕ್ತಪಡಿಸಿದ್ದರು. ಆದರೆ, ದೇಶದ ಕೆಲವೊಂದು ಕಡೆ ಮುಸ್ಲಿಂ ಬಾಹುಳ್ಯದ ಪ್ರದೇಶದಲ್ಲಿ ಪ್ಯಾಲೆಸ್ತೇನ್‌ ಪರವಾಗಿಯೂ ಒಲವು ವ್ಯಕ್ತವಾಗಿದೆ.

ಇದೀಗ ಇಸ್ರೇಲ್‌ ಎನ್ನುವುದು ಕದ್ದ ಭೂಮಿ. ಈ ಹೋರಾಟದಲ್ಲಿ ಪ್ಯಾಲೆಸ್ತೇನ್‌ನ ನ್ಯಾಯದ ಪರವಾಗಿ ಭಾರತ ನಿಲ್ಲಬೇಕು ಎಂದು ಸಾಮಾಜಿಕ ಕಾರ್ಯಕರ್ತ ಮತ್ತು ನಟ ಚೇತನ್ (Chetan) ಅಭಿಪ್ರಾಯಪಟ್ಟಿದ್ದಾರೆ.

ಪ್ಯಾಲೇಸ್ಟಿನಿಯನ್ ಹಮಾಸ್ 5,000 ರಾಕೆಟ್‌ಗಳನ್ನು ಉಡಾಯಿಸಿದ್ದರಿಂದ ಮತ್ತು ಇಸ್ರೇಲ್ ಪ್ರತೀಕಾರ ತೀರಿಸಿಕೊಂಡಿದರಿಂದ ಇಸ್ರೇಲ್-ಪ್ಯಾಲೇಸ್ಟಿನಿಯಲ್ಲಿ ಭಾರಿ ಹಿಂಸಾಚಾರ ಮತ್ತು ಸಾವುನೋವುಗಳು ಸಂಭವಿಸಿವೆ. ಈಗ ಪ್ರಧಾನಿ ನರೇಂದ್ರ ಮೋದಿ ಅವರು ಇಸ್ರೇಲ್‌ ಪರವಾಗಿ ಒಗ್ಗಟ್ಟು ವ್ಯಕ್ತಪಡಿಸಿದ್ದಾರೆ. ಇಸ್ರೇಲ್ (Isreal) ದೇಶವು ಕದ್ದ ಭೂಮಿಯಲ್ಲಿ ನಿರ್ಮಿಸಲಾದ ದೇವಪ್ರಭುತ್ವದ ವಸಾಹತುಗಾರರ ಕಾಲೋನಿ. ಭಾರತವು ಇಸ್ರೇಲ್-ಯುಎಸ್ ಪ್ರಾಬಲ್ಯದ ದೌರ್ಜನ್ಯವನ್ನು ಪ್ರಶ್ನಿಸಬೇಕು ಮತ್ತು ಪ್ಯಾಲೇಸ್ಟಿನಿಯನ್ (Palestinian) ನ್ಯಾಯದ ಪರವಾಗಿ ನಿಲ್ಲಬೇಕು ಎಂದು ಅಭಿಪ್ರಾಯಪಟ್ಟಿದ್ದಾರೆ.

ಇನ್ನೊಂದು ಪೋಸ್ಟ್‌ನಲ್ಲಿ’ಪ್ಯಾಲೆಸ್ಟೀನಿಯನ್ನರಿಗೆ ನ್ಯಾಯವು ಅತ್ಯಗತ್ಯವಾಗಿರುತ್ತದೆ ಆದರೆ, ಪ್ಯಾಲೇಸ್ಟಿನಿಯನ್ ಹಮಾಸ್ ಸತ್ತ ಇಸ್ರೇಲಿ ಮಹಿಳೆಯರ ದೇಹಗಳನ್ನು ಬೆತ್ತಲೆಯಾಗಿ ಮೆರವಣಿಗೆ ಮಾಡಿದ ಘಟನೆಗಳು ಕ್ರೂರವಾಗಿದೆ ಮತ್ತು ಇದು ಖಂಡನೀಯ ಪುರುಷರ ಆಕ್ರಮಣಕಾರಿ ಯುದ್ಧಗಳಿಗೆ ಮಹಿಳೆಯರ ದೇಹಗಳು ಯಾವಾಗಲೂ ಸಹಾಯಕ ಯುದ್ಧಭೂಮಿಗಳಾಗಿವೆ. ಇಂತಹ ಘರ್ಷಣೆಗಳ ಸಮಯದಲ್ಲಿ ಅವಮಾನವು ನ್ಯಾಯವನ್ನು ಮೀರಿಸುತ್ತದೆ ಎಂಬುದನ್ನು ಇಂತಹ ಘೋರ ಯುದ್ಧದ ಅಪರಾಧಗಳು ನಮಗೆ ನೆನಪಿಸುತ್ತವೆ’ ಎಂದು ಬರೆದುಕೊಂಡಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!