ಕಾಂಡೋಮ್ ಬಳಕೆಯಲ್ಲಿ ಭಾರತ ವಿಶ್ವದಲ್ಲೆ 2ನೇ ಸ್ಥಾನ: ಸಮೀಕ್ಷೆಯಲ್ಲಿ ಬಹಿರಂಗ!

ಹೊಸದಿಗಂತ ಡಿಜಿಟಲ್ ಡೆಸ್ಕ್ :

ವಿಶ್ವದಲ್ಲಿ ಇಂದು ಯುವ ಸಮೂಹ ಅಥವಾ ವೈವಾಹಿಕ ಜೀವನವನ್ನು ಕಾಂಡೋಮ್ (Condoms) ಹೆಚ್ಚು ಮಾಡುತ್ತಾರೆ. ಇದೇ ರೀತಿ ಕಾಂಡೋಮ್ ಬಳಸುವುದರಲ್ಲಿ ಭಾರತ ಎರಡನೇ ಸ್ಥಾನದಲ್ಲಿದೆ.

ಸಾಮಾನ್ಯವಾಗಿ ಯುವಜನತೆ ಗೆಳತಿಯ ಜೊತೆಗೆ ಒಂದು ಲೈಂಗಿಕ ಸಂಬಂಧ ಹೊಂದಲು ಹಾಗೂ ಕೆಲ ವಿವಾಹಿತ ಪುರುಷರು ತಕ್ಷಣಕ್ಕೆ ಮಗು ಬೇಡ ಎನ್ನುವ ಕಾರಣಕ್ಕೆ ಕಾಂಡೋಮ್​​ನ್ನು ಹೆಚ್ಚು ಹೆಚ್ಚು ಉಪಯೋಗಿಸುತ್ತಿದ್ದಾರೆ.

ಇದೇ ರೀತಿ ಇದೀಗ ವರದಿಯೊಂದು ನೀಡಿದ ಆಧಾರ ಮೇಲೆ ಕಾಂಡೋಮ್ ಬಳಸುವವರ ಸಂಖ್ಯೆ ದಿನದಿಂದ ದಿನಕ್ಕೆ ಹೆಚ್ಚಾಗುತ್ತಿದೆ ಎಂದಿದೆ.

ಪ್ರಮುಖ ಟ್ರೇಡಿಂಗ್ ಮತ್ತು ಹೂಡಿಕೆ ಕಂಪನಿ ಸ್ಟಾಕ್‌ಗ್ರೋ ನಡೆಸಿದ ಸಮೀಕ್ಷೆಯಲ್ಲಿ ಈ ಕುತೂಹಲಕಾರಿ ಸಂಗತಿಗಳು ಬಹಿರಂಗವಾಗಿವೆ. ಸ್ಟಾಕ್‌ಗ್ರೋ ವರದಿ ಪ್ರಕಾರ, ಭಾರತದಲ್ಲಿ ಕಾಂಡೋಮ್ ಮಾರುಕಟ್ಟೆಯ ಮೌಲ್ಯವು 2026 ರ ವೇಳೆಗೆ 134 ಮಿಲಿಯನ್ ಡಾಲರ್‌ಗಳನ್ನು ತಲುಪುವ ನಿರೀಕ್ಷೆಯಿದೆ. ಪ್ರಸ್ತುತ, ಮ್ಯಾನ್‌ಫೋರ್ಸ್ ಇಂಡಿಯಾ ಭಾರತದಲ್ಲಿ ಕಾಂಡೋಮ್‌ಗಳ ಮಾರುಕಟ್ಟೆಯಲ್ಲಿ ಹೆಚ್ಚಿನ ಭಾಗವು ಕಾನೂನುಬಾಹಿರವಾಗಿದೆ ಎಂದು ಹೇಳಿದೆ. ಯುವಜನರಲ್ಲಿ ಕಾಂಡೋಮ್‌ಗಳು ಅತ್ಯಂತ ಜನಪ್ರಿಯ ಗರ್ಭನಿರೋಧಕ ವಿಧಾನವಾಗಿರುವುದರಿಂದ, ಇದು ಭಾರತದಲ್ಲಿ ಕಾಂಡೋಮ್ ಕಂಪನಿಗಳಿಗೆ ಭಾರಿ ಆದಾಯದ ಬೆಳವಣಿಗೆಗೆ ಕಾರಣವಾಗುತ್ತದೆ ಎಂದು ಸ್ಟಾಕ್‌ಗ್ರೋ ಹೇಳಿದೆ.

ಭಾರತದಲ್ಲಿ ಪ್ರತಿ ವರ್ಷ 2 ಬಿಲಿಯನ್ ಕಾಂಡೋಮ್‌ಗಳು ಮಾರಾಟವಾಗುತ್ತವೆ ಎಂದು ಸಮೀಕ್ಷೆಯು ಹೇಳಿದೆ. ಇವರಲ್ಲಿ ಶೇ.8.9ರಷ್ಟು ವಿವಾಹಿತ ಮಹಿಳೆಯರು ಮತ್ತು ಶೇ.10.3ರಷ್ಟು ವಿವಾಹಿತ ಪುರುಷರು ಕಾಂಡೋಮ್ ಬಳಸುತ್ತಾರೆ. ಸಮೀಕ್ಷೆಯ ಪ್ರಕಾರ, ಕಳೆದ ಒಂದು ದಶಕದಲ್ಲಿ ಅವಿವಾಹಿತ ಮಹಿಳೆಯರು ಕಾಂಡೋಮ್ ಬಳಕೆ ಆರು ಪಟ್ಟು ಹೆಚ್ಚಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!