ಅವಳಿ ಮಕ್ಕಳ ಹೆಸರು ರಿವೀಲ್ ಮಾಡಿದ ಕಾಲಿವುಡ್‌ ನಟಿ ನಯನತಾರಾ!

ಹೊಸದಿಗಂತ ಡಿಜಿಟಲ್ ಡೆಸ್ಕ್ :

ಕಾಲಿವುಡ್‌ನ ನಟಿ ನಯನತಾರಾ (Nayanatara) ಅವರು ಸದ್ಯ ಸಿನಿಮಾದಿಂದ ದೂರವಿದ್ದು, ಮದುವೆ, ಸಂಸಾರ, ಅವಳಿ ಮಕ್ಕಳ ಆರೈಕೆ ಅಂತಾ ಬ್ಯುಸಿಯಾಗಿದ್ದಾರೆ.

2022ರಲ್ಲಿ ಬಾಡಿಗೆ ತಾಯಿ ಮೂಲಕ ನಯನತಾರಾ ದಂಪತಿ ಅವಳಿ ಗಂಡು ಮಕ್ಕಳನ್ನು ಪಡೆದರು. ಇದೀಗ ಕಾರ್ಯಕ್ರಮವೊಂದರಲ್ಲಿ ನಟಿ ಮಕ್ಕಳ ಪೂರ್ಣ ಹೆಸರೇನು ಎಂಬುದನ್ನ ರಿವೀಲ್ ಮಾಡಿದ್ದಾರೆ.
ನಟಿ, ನನ್ನ ಮೊದಲ ಮಗನ ಹೆಸರು ಉಯಿರ್ ರುದ್ರೋನೀಲ್ ಎನ್. ಶಿವನ್ ಮತ್ತು ನನ್ನ ಎರಡನೇ ಮಗನ ಹೆಸರು ಉಳಗ್ ದೈವಗನ್ ಎನ್. ಶಿವನ್ ಎಂದು ತಿಳಿಸಿದರು.

ನಯನತಾರಾ ಅವರು ನಿರ್ದೇಶಕ ವಿಘ್ನೇಶ್ ಶಿವನ್ ಜೊತೆ ಹಲವು ವರ್ಷಗಳ ಕಾಲ ಲಿವಿಂಗ್ ರಿಲೇಷನ್‌ಶಿಪ್‌ನಲ್ಲಿ ಇದ್ದರು. ಬಳಿಕ ಅವರು ಮದುವೆ ಆಗುವ ನಿರ್ಧಾರಕ್ಕೆ ಬಂದರು. 2022ರ ಜೂನ್ 9ರಂದು ಅವರಿಬ್ಬರ ಕಲ್ಯಾಣ ನೆರವೇರಿತು. ಈ ಸ್ಟಾರ್ ಸೆಲೆಬ್ರಿಟಿಗಳ ವಿವಾಹ ಸಮಾರಂಭಕ್ಕೆ ಅನೇಕ ಗಣ್ಯರು ಹಾಜರಿ ಹಾಕಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!