2036ರ ಒಲಿಂಪಿಕ್ಸ್ ಆಯೋಜಿಸಲು ಭಾರತ ಸಿದ್ಧ: ಅಮಿತ್ ಶಾ

ಹೊಸದಿಗಂತ ಡಿಜಿಟಲ್ ಡೆಸ್ಕ್; 

2036ರಲ್ಲಿ ನಾವು ಯಶಶ್ವಿಯಾಗಿ ಒಲಿಂಪಿಕ್ಸ್ ಅನ್ನು ಆಯೋಜಿಸಲು ಸಿದ್ಧರಿದ್ದೇವೆ ಎಂದು ಕೇಂದ್ರ ಗೃಹ ಸಚಿವ ಅಮಿತ್ ಶಾ ಹೇಳಿದ್ದಾರೆ.

ಉತ್ತರಾಖಂಡದಲ್ಲಿ ನಡೆದ ರಾಷ್ಟ್ರೀಯ ಕ್ರೀಡಾಕೂಟದ ಸಮಾರೋಪ ಸಮಾರಂಭದಲ್ಲಿ ಮಾತನಾಡಿದ ಅಮಿತ್ ಶಾ, ಭಾರತಕ್ಕೆ ಕ್ರೀಡಾ ಜಗತ್ತಿನಲ್ಲಿ ಅತ್ಯಂತ ಉಜ್ವಲ ಭವಿಷ್ಯವಿದೆ ಎಂದಿದ್ದಾರೆ.

ಕೇವಲ ರಾಷ್ಟ್ರೀಯ ಕ್ರೀಡಾಕೂಟದಿಂದಾಗಿ ಮಾತ್ರವಲ್ಲದೆ ಕ್ರೀಡಾಕೂಟದಲ್ಲಿ ಕ್ರೀಡಾಪಟುಗಳ ಪ್ರದರ್ಶನ ಮತ್ತು ಯಶಸ್ವಿ ಕ್ರೀಡಾಕೂಟವನ್ನು ಆಯೋಜಿಸುವಲ್ಲಿ ಉತ್ತರಾಖಂಡದ ಸಿಎಂ ಧಾಮಿ ಅವರ ನಿರಂತರ ಪ್ರಯತ್ನಗಳಿಂದಾಗಿ ‘ದೇವ ಭೂಮಿ’ಯಾದ ಈ ರಾಜ್ಯ ‘ಕ್ರೀಡಾ ಭೂಮಿ’ ಆಗಿ ರೂಪಾಂತರಗೊಂಡಿದೆ ಎಂದು ಅಮಿತ್ ಶಾ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಸಿಎಂ ಪುಷ್ಕರ್ ಸಿಂಗ್ ಧಾಮಿ ಅವರ ಪ್ರಯತ್ನಗಳಿಗೆ ಧನ್ಯವಾದಗಳು, ಉತ್ತರಾಖಂಡವು ಕಳೆದ ಕ್ರೀಡಾಕೂಟದಲ್ಲಿ ಒಟ್ಟಾರೆ ಶ್ರೇಯಾಂಕದಲ್ಲಿ 21ನೇ ಸ್ಥಾನದಿಂದ 7ನೇ ಸ್ಥಾನಕ್ಕೆ ಜಿಗಿದಿದೆ. ‘ದೇವ ಭೂಮಿ’ ‘ಕ್ರೀಡಾ ಭೂಮಿ’ ಆಗಲು ದಾರಿ ಮಾಡಿಕೊಟ್ಟ ಎಲ್ಲಾ ಕ್ರೀಡಾಪಟುಗಳನ್ನು ನಾನು ಅಭಿನಂದಿಸುತ್ತೇನೆ ಎಂದು ಅಮಿತ್ ಶಾ ಹೇಳಿದ್ದಾರೆ.

ಕ್ರೀಡಾಕೂಟದಲ್ಲಿ ಕ್ರೀಡಾಪಟುಗಳು ಯಾವುದೇ ತೊಂದರೆ ಎದುರಿಸದಂತೆ ರಾಜ್ಯವು ನೋಡಿಕೊಂಡಿದೆ. ಭಾರತ ಕ್ರೀಡಾ ಕೇಂದ್ರವಾಗಲು ಇದು ಆರಂಭದ ಹೆಜ್ಜೆಯಾಗಿದೆ ಎಂದು ಕ್ರೀಡಾ ಸಚಿವ ಮಾಂಡವಿಯಾ ತಮ್ಮ ಭಾಷಣದಲ್ಲಿ ಹೇಳಿದ್ದಾರೆ.

- Advertisement - Ply
Nova

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!