ಬಿಹಾರದಲ್ಲಿ ಹೆಚ್ಚಾಗಿದೆ ಹಕ್ಕಿ ಜ್ವರದ ಕಾಟ: ವರದಿ

ಹೊಸದಿಗಂತ ಡಿಜಿಟಲ್ ಡೆಸ್ಕ್:
ಕೋವಿಡ್ ಬಳಿಕ ಇತ್ತೀಚೆಗೆ ಹಕ್ಕಿ ಜ್ವರದ ಭೀತಿ ಎಲ್ಲೆಡೆ ಹೆಚ್ಚಾಗ್ತಿದ್ದು, ಈಗ ಬಿಹಾರದಲ್ಲಿ ಹಕ್ಕಿ ಜ್ವರ (H5N1) ಸೋಂಕು ವಿಪರೀತ ಏರಿಕೆ ಕಂಡಿದೆ ಎಂದು ವರದಿ ತಿಳಿಸಿದೆ.
ಈ ಬಗ್ಗೆ ವರದಿ ಮಾಡಿದ ವಿಶ್ವ ಪ್ರಾಣಿ ಆರೋಗ್ಯ ಸಂಸ್ಥೆ, ಕೋಳಿ ಸಾಕಣಿಕೆ ಕೇಂದ್ರದಲ್ಲಿ ಅದ್ಯಯನ ನಡೆಸಿದ ತಂಡ, ಬಿಹಾರದ ಪಾಟ್ನಾದ ಫಾರ್ಮ್ ಒಂದರಲ್ಲಿ 3859 ಕೋಳಿಗಳ ಪೈಕಿ 787 ಕೋಳಿಗಳಿಗೆ ಹಕ್ಕಿ ಜ್ವರ ಕಾಣಿಸಿಕೊಂಡು ಮೃತಪಟ್ಟಿದ್ದವು. ಇದರಿಂದ ಉಳಿದ ಎಲ್ಲಾ ಕೋಳಿಗಳನ್ನು ನಾಶ ಮಾಡಲಾಗಿತ್ತು. ಈ ಮೂಲಕ ಬಿಹಾರದಲ್ಲಿ ವೈರಸ್ ಹೆಚ್ಚಿನ ಪ್ರಮಾಣದಲ್ಲಿ ಕಾಣಿಸಿಕೊಳ್ಳುತ್ತಿದೆ ಎಂದರು.
ಮೊದಲು ಜ.18ರಂದು ಹಕ್ಕಿ ಜ್ವರ ಕಾಣಿಸಿಕೊಂಡಿದ್ದು, ಫೆ.16ರ ವೇಳೆಗೆ ಅಪಾರ ಸಂಖ್ಯೆಯಲ್ಲಿ ಕೋಳಿಗಳು ವೈರಸ್ ಸೋಂಕಿನಿಂದ ಬಲಿಯಾಗಿದೆ ಎಂದು ವರದಿ ತಿಳಿಸಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!