29 ಮ್ಯಾನ್ಮಾರ್ ಸೈನಿಕರನ್ನು ಮರಳಿ ಕಳುಹಿಸಿದ ಭಾರತ

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಗಡಿ ದಾಟಿ ಭಾರತದೊಳಗೆ ಬಂದಿದ್ದ 29 ಮ್ಯಾನ್ಮಾರ್ ಸೈನಿಕರನ್ನು ಅಧಿಕಾರಿಗಳು ಭಾನುವಾರ ವಾಪಸ್ ಕಳುಹಿಸಿದ್ದಾರೆ. ಮ್ಯಾನ್ಮಾರ್​ನ ಚಿನ್ ರಾಜ್ಯದ ತುಯಿಬುಲ್​ನಲ್ಲಿರುವ ಶಿಬಿರವನ್ನು ನಾಗರಿಕ ಸಶಸ್ತ್ರ ಪಡೆಗಳು ವಶಪಡಿಸಿಕೊಂಡ ನಂತರ 29 ಮ್ಯಾನ್ಮಾರ್ ಸೈನಿಕರು ನವೆಂಬರ್ 16ರಂದು ಮಿಜೋರಾಂನ ಚಂಫೈ ಜಿಲ್ಲೆಗೆ ನುಸುಳಿ ಬಂದಿದ್ದರು.

ಭಾರತೀಯ ವಾಯುಪಡೆಯ (ಐಎಎಫ್) ಎರಡು ಹೆಲಿಕಾಪ್ಟರ್​ಗಳು ಭಾನುವಾರ 29 ಮ್ಯಾನ್ಮಾರ್ ಸೈನಿಕರನ್ನು ಮಿಜೋರಾಂನ ಚಂಫೈನಿಂದ ಮಣಿಪುರದ ಮೋರೆಹ್ ಪಟ್ಟಣಕ್ಕೆ ಏರ್​ಲಿಫ್ಟ್​ ಮಾಡಿ ಅವರನ್ನು ಮ್ಯಾನ್ಮಾರ್​ನ ಮಿಲಿಟರಿ ಪ್ರಾಧಿಕಾರಕ್ಕೆ ಹಸ್ತಾಂತರಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

“ಬಯೋಮೆಟ್ರಿಕ್ ಪ್ರಕ್ರಿಯೆ ಸೇರಿದಂತೆ ಅಗತ್ಯ ಪರಿಶೀಲನೆಗಳನ್ನು ಪೂರ್ಣಗೊಳಿಸಿದ ಬಳಿಕ , ಭಾರತೀಯ ಅಧಿಕಾರಿಗಳು ಎಲ್ಲಾ 29 ಸೈನಿಕರನ್ನು ನೆರೆಯ ದೇಶದ ತಮು (ಮೋರೆಹ್ ಗಡಿಯ ಎದುರು) ನಲ್ಲಿ ಮ್ಯಾನ್ಮಾರ್ ಸೇನಾ ಅಧಿಕಾರಿಗಳಿಗೆ ಹಸ್ತಾಂತರಿಸಿದರು ಎಂದು ಅಧಿಕಾರಿಯೊಬ್ಬರು ಐಎಎನ್‌ಎಸ್​ಗೆ ತಿಳಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!