ಫಿಲಿಪ್ಪಿನ್ಸ್‌ಗೆ ಮೊದಲ ಬ್ಯಾಚ್‌ನ ಬ್ರಹ್ಮೋಸ್‌ ಕ್ಷಿಪಣಿ ರವಾನಿಸಿದ ಭಾರತ!

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಭಾರತವು ಇಂದು ಮೊದಲ ಬ್ಯಾಚ್‌ನ ಸೂಪರ್‌ಸಾನಿಕ್‌ ಕ್ರೂಸ್‌ ಕ್ಷಿಪಣಿಗಳನ್ನು ಫಿಲಿಪ್ಪಿನ್ಸ್‌ ದೇಶಕ್ಕೆ ಕಳುಹಿಸಿಕೊಟ್ಟಿದೆ.

ಎರಡೂ ದೇಶಗಳು 2022 ರಲ್ಲಿ $375 ಮಿಲಿಯನ್ ಮೌಲ್ಯದ ಒಪ್ಪಂದಕ್ಕೆ ಸಹಿ ಹಾಕಿದ್ದವು. ಇದರ ಭಾಗವಾಗಿ ಇಂದು ಭಾರತೀಯ ವಾಯುಪಡೆಯ ಸಿ-17 ಗ್ಲೋಬ್‌ಮಾಸ್ಟರ್ ಸಾರಿಗೆ ವಿಮಾನವು ಫಿಲಿಪ್ಪೀನ್ಸ್‌ನ ಕ್ಲಾರ್ಕ್ ಏರ್‌ಬೇಸ್‌ನಲ್ಲಿ ಮೇಡ್-ಇನ್-ಇಂಡಿಯಾ ಬ್ರಹ್ಮೋಸ್ ಕ್ಷಿಪಣಿಗಳ ಮೊದಲ ಬ್ಯಾಚ್‌ಅನ್ನು ಅಲ್ಲಿನ ಸರ್ಕಾರಕ್ಕೆ ಹಸ್ತಾಂತರ ಮಾಡಿತು.

ಜನವರಿ 2022 ರಲ್ಲಿ, ಕ್ಷಿಪಣಿಯ ಮೂರು ಬ್ಯಾಟರಿಗಳ ಬ್ರಹ್ಮೋಸ್‌ ಸೂಪರ್‌ಸಾನಿಕ್‌ ಕ್ಷಿಪಣಿಗಳನ್ನು ಪೂರೈಸಲು ಭಾರತವು ಫಿಲಿಪೈನ್ಸ್‌ನೊಂದಿಗೆ ಒಪ್ಪಂದವನ್ನು ಮಾಡಿಕೊಂಡಿತ್ತು.ಇದು ಬ್ರಹ್ಮೋಸ್‌ ಕ್ಷಿಪಣಿಯ ಮೊಟ್ಟಮೊದಲ ರಫ್ತು ಎನಿಸಿದೆ.

ಫಿಲಿಪ್ಪಿನ್ಸ್‌ ಜೊತೆಗೆ ಅರ್ಜೆಂಟೀನಾ ಸೇರಿದಂತೆ ಇತರ ಕೆಲವು ದೇಶಗಳು ಭಾರತದಿಂದ ಬ್ರಹ್ಮೋಸ್ ಕ್ಷಿಪಣಿಗಳನ್ನು ಪಡೆಯಲು ಆಸಕ್ತಿ ತೋರಿಸಿವೆ.

ಬ್ರಹ್ಮೋಸ್ ಏರೋಸ್ಪೇಸ್ ಪ್ರೈವೇಟ್ ಲಿಮಿಟೆಡ್, ಭಾರತ-ರಷ್ಯಾದ ಜಂಟಿ ಉದ್ಯಮವಾಗಿದ್ದು, ಜಲಾಂತರ್ಗಾಮಿ ನೌಕೆಗಳು, ಹಡಗುಗಳು, ವಿಮಾನಗಳು ಅಥವಾ ಭೂ ಪ್ರದೇಶಗಳಿಂದ ಉಡಾವಣೆ ಮಾಡಬಹುದಾದ ಸೂಪರ್ಸಾನಿಕ್ ಕ್ರೂಸ್ ಕ್ಷಿಪಣಿಗಳನ್ನು ಉತ್ಪಾದಿಸುತ್ತದೆ. ಬ್ರಹ್ಮೋಸ್ ಕ್ಷಿಪಣಿ 2.8 ಮ್ಯಾಕ್ ವೇಗದಲ್ಲಿ ಅಂದರೆ ಶಬ್ದಕ್ಕಿಂತ ಮೂರು ಪಟ್ಟು ವೇಗದಲ್ಲಿ ಸಂಚಾರ ಮಾಡುತ್ತದೆ.

ಇತ್ತ ದಕ್ಷಿಣ ಚೀನಾ ಸಮುದ್ರದಲ್ಲಿ ಚೀನಾದ ಹೆಚ್ಚುತ್ತಿರುವ ಮಿಲಿಟರಿ ಶಕ್ತಿಯ ಬಗ್ಗೆ ಜಾಗತಿಕ ಕಳವಳಗಳು ಹೆಚ್ಚುತ್ತಿರುವ ಹಿನ್ನೆಲೆಯಲ್ಲಿ ಭಾರತವು ಫಿಲಿಪೈನ್ಸ್‌ನೊಂದಿಗೆ ರಕ್ಷಣಾ ಸಂಬಂಧಗಳನ್ನು ಮತ್ತಷ್ಟು ವಿಸ್ತರಿಸಲು ನೋಡುತ್ತಿದೆ. ಹೈಡ್ರೋಕಾರ್ಬನ್‌ಗಳ ಬೃಹತ್ ಮೂಲವಾದ ದಕ್ಷಿಣ ಚೀನಾ ಸಮುದ್ರದ ಮೇಲೆ ಚೀನಾದ ಸಾರ್ವಭೌಮತ್ವದ ವ್ಯಾಪಕ ಹಕ್ಕುಗಳ ಬಗ್ಗೆ ಜಾಗತಿಕ ಕಳವಳಗಳು ಹೆಚ್ಚುತ್ತಿವೆ.

ಫಿಲಿಪೈನ್ಸ್‌ನೊಂದಿಗೆ ಮಿಲಿಟರಿ ಬಾಂಧವ್ಯವನ್ನು ಹೆಚ್ಚಿಸುವ ಪ್ರಯತ್ನಗಳ ಭಾಗವಾಗಿ, ಇಥಿಯೋಪಿಯಾ, ಮೊಜಾಂಬಿಕ್, ಪೋಲೆಂಡ್ ಮತ್ತು ಐವರಿ ಕೋಸ್ಟ್‌ನೊಂದಿಗೆ ಆ ದೇಶಕ್ಕೆ ರಕ್ಷಣಾ ವಸ್ತುಗಳನ್ನು ಮಾರಾಟ ಮಾಡಲು ಭಾರತ ಬಯಸಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!