ಜಾಗತಿಕ ಆರ್ಥಿಕತೆಯಲ್ಲಿ ಭಾರತ ಮಿಂಚುತ್ತಿದೆ- ಯುಎನ್ ಆರ್ಥಿಕ ತಜ್ಞನಿಂದ ಪ್ರಶಂಸೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಕೋವಿಡ್‌ ಪೂರ್ವಕಾಲಘಟ್ಟದಲ್ಲಿ ಜಗತ್ತು ಆರ್ಥಿಕ ಹಿಂಜರಿತದ ಭೀತಿಯಲ್ಲಿದೆ. ಬಹುತೇಕ ದೇಶಗಳ ಆರ್ಥಿಕತೆಯ ಬೆಳವಣಿಗೆ ನಿಧಾನಗತಿಯಲ್ಲಿ ಸಾಗುತ್ತಿದೆ. ಆದರೆ ಭಾರತದ ಆರ್ಥಿಕತೆ ಮಾತ್ರ ಜಾಗತಿಕ ಆರ್ಥಿಕತೆಯಲ್ಲಿ ಮಿಂಚುತ್ತಿದೆ ಎಂದು ವಿಶ್ವಸಂಸ್ಥೆಯ ಆರ್ಥಿಕ ಮತ್ತು ಸಾಮಾಜಿಕ ವ್ಯವಹಾರಗಳ ಇಲಾಖೆ ಮುಖ್ಯಸ್ಥ ಹಮೀದ್ ರಶೀದ್ ಹೇಳಿದ್ದಾರೆ.

ವಿಶ್ವ ಆರ್ಥಿಕ ಪರಿಸ್ಥಿತಿ ಮತ್ತು 2023ರ ಭವಿಷ್ಯದ ವರದಿಯನ್ನು ಬಿಡುಗಡೆ ಮಾಡುವ ಸಂದರ್ಭದಲ್ಲಿ ಮಾತನಾಡಿದ ಅವರು ಭಾರತವು ಪ್ರಸ್ತುತ ವಿಶ್ವ ಆರ್ಥಿಕತೆಯಲ್ಲಿ “ಪ್ರಕಾಶಮಾನವಾದ ತಾಣವಾಗಿದೆ” ಎಂದು ಹೇಳಿದ್ದಾರೆ. ಅವರ ಮಾತುಗಳನ್ನು ಸಂಕ್ಷೇಪಿಸಿ ಹೇಳುವುದಾದರೆ, “ಭಾರತವು ಆರ್ಥಿಕವಾಗಿ ಬಲವಾದ ಹೆಜ್ಜೆಗಳನ್ನಿಡುತ್ತಿದೆ. ಮುಂದಿನ ವರ್ಷ ಭಾರತದ ಆರ್ಥಿಕತಯ 6.7 ರಷ್ಟು ಬೆಳವಣಿಗೆಯನ್ನು ನಿರೀಕ್ಷಿಸಲಾಗಿದೆ. ಇದು ಇತರ G20 ಸದಸ್ಯ ರಾಷ್ಟ್ರಗಳಿಗೆ ಹೋಲಿಸಿದರೆ ಅತ್ಯಂತ ಹೆಚ್ಚಿನ ಬೆಳವಣಿಗೆಯ ದರವಾಗಿದೆ. ದಕ್ಷಿಣ ಏಷ್ಯಾದ ಇತರ ರಾಷ್ಟ್ರಗಳ ಭವಿಷ್ಯವು ಸವಾಲಿನಲ್ಲಿದೆ. ಆದರೆ ಭಾರತದ ಆರ್ಥಿಕ ಬೆಳವಣಿಗೆಯು ಬಲವಾಗಿ ಉಳಿಯುತ್ತದೆ ಎಂದು ನಿರೀಕ್ಷಿಸಲಾಗಿದೆ. ಭಾರತವು 2024 ರಲ್ಲಿ ಶೇಕಡಾ 6.7 ರಷ್ಟು ಬೆಳವಣಿಗೆ ಹೊಂದಲಿದೆ ಎಂದು ಅಂದಾಜಿಸಲಾಗಿದೆ, ಇದು ವಿಶ್ವದ ಅತ್ಯಂತ ವೇಗವಾಗಿ ಬೆಳೆಯುತ್ತಿರುವ ಪ್ರಮುಖ ಆರ್ಥಿಕತೆಯಾಗಿದೆ.”

“ಭಾರತವು ಬಲವಾದ ಆರ್ಥಿಕತೆ ಹೊಂದುವುದಕ್ಕೆ ಮೂರು ಪ್ರಮುಖ ಕಾರಣಗಳಿವೆ.. ಅವುಗಳಲ್ಲಿ ಮೊದಲನೇಯದು ಕಳೆದ ನಾಲ್ಕು ವರ್ಷಗಳಲ್ಲಿ ಭಾರತದ ನಿರುದ್ಯೋಗ ದರವು ಗಣನೀಯವಾಗಿ 6.4 ಶೇಕಡಾ ಇಳಿದಿದೆ, ದೇಶೀಯ ಬೇಡಿಕೆಯು ಪ್ರಬಲವಾಗಿದೆ.ಎರಡನೇಯದು ಭಾರತದ ಹಣದುಬ್ಬರ ಒತ್ತಡವು ಗಮನಾರ್ಹವಾಗಿ ಕಡಿಮೆಯಾಗಿದೆ. ಈ ವರ್ಷ ಸುಮಾರು 5.5 ಶೇಕಡಾ ಹಣದುಬ್ಬರವಿದ್ದು 2024 ರಲ್ಲಿ 5 ಶೇಕಡಾ ಎಂದು ನಿರೀಕ್ಷಿಸಲಾಗಿದೆ. ಮೂರನೇಯ ಅಂಶವೆಂದರೆ ಭಾರತದ ಆಮದು ಬಿಲ್‌ ಗಳು ಕಡಿಮೆಯಾಗಿದೆ. ವಿಶೇಷವಾಗಿ ಇಂಧನ ಆಮದು ವೆಚ್ಚವು ಹಿಂದಿನ ವರ್ಷಗಳಿಗಿಂತ ಕಡಿಮೆಯಾಗಿದೆ. ಈ ಮೂರು ಅಂಶಗಳು 2022 ಮತ್ತು 2023 ರಲ್ಲಿ ಭಾರತದ ಬೆಳವಣಿಗೆಯ ನಿರೀಕ್ಷೆಗೆ ಸಹಾಯ ಮಾಡಿದೆ” ಎಂದು ವಿಶ್ವ ಸಂಸ್ಥೆಯ ಆರ್ಥಿಕ ತಜ್ಞ ಹಮೀದ್ ರಶೀದ್ ಹೇಳಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!