ಹೊಸದಿಗಂತ ಡಿಜಿಟಲ್ ಡೆಸ್ಕ್:
2030 ರ ವೇಳೆಗೆ ಭಾರತ 500 GW ಗ್ರೀನ್ ಎನರ್ಜಿ ಉತ್ಪಾದನೆ ಗುರಿಯನ್ನು ಹಾಕಿಕೊಂಡಿದ್ದೇವೆ ಎಂದು ಪ್ರಧಾನಿ ನರೇಂದ್ರ ಮೋದಿ ಹೇಳಿದರು.
ಗಾಂಧಿನಗರದಲ್ಲಿ ನಡೆದ ನವೀಕರಿಸಬಹುದಾದ ಇಂಧನ ಇಲಾಖೆಯಿಂದ ಆಯೋಜಿಸಿರುವ 4ನೇ ಜಾಗತಿಕ ಮಟ್ಟದ ನವೀಕರಿಸಬಹುದಾದ ಇಂಧನ ಹೂಡಿಕೆದಾರರ ಸಭೆ ಮತ್ತು ಎಕ್ಸ್ ಪೋಗೆ ಪ್ರಧಾನಿ ನರೇಂದ್ರ ಮೋದಿ ಚಾಲನೆ ನೀಡಿದರು.
ಮುಂದಿನ ಮೂರು ದಿನ ಇಂಧನದ ಭವಿಷ್ಯ ಮತ್ತು ಯೋಜನೆಗಳ ಬಗ್ಗೆ ಚರ್ಚೆ ನಡೆಯಲಿದೆ, ಈ ವಲಯದ ತಜ್ಞರಿದ್ದಾರೆ ಇದರಿಂದ ನಮಗೆ ಮಾರ್ಗದರ್ಶನ ಸಿಗಲಿದೆ ಒಬ್ಬರಿಂದ ಮತ್ತೊಬ್ಬರು ಈ ಎಕ್ಸ್‌ಪೋದಿಂದ ಹೊಸತನ್ನು ಕಲಿಯಲಿದ್ದೇವೆ ಎಂದರು.
ಭಾರತದ ಜನರು ಐವತ್ತು ವರ್ಷಗಳ ನಂತರ ಒಂದೇ ಪಕ್ಷಕ್ಕೆ ಮೂರನೇ ಬಾರಿಗೆ ಸತತವಾಗಿ ಅಧಿಕಾರ ನೀಡಿದ್ದಾರೆ. 140 ಜನರಿಗೆ, ಭಾರತದ ಯುವಕರಿಗೆ ಭರವಸೆ ಇದೆ ಅವರ ಭರವಸೆಗಳನ್ನು ನಾವು ಈಡೇರಿಸಬೇಕಿದೆ. ದೇಶದ ಬಡವರು, ದಲಿತರು, ಹಿಂದುಳಿದ, ವಂಚಿತರಿಗೆ ಆರಾಮದಾಯಕ ಜೀವನದ ಭರವಸೆ ನೀಡಬೇಕು. ವಿಶ್ವದ ಮೂರನೇ ಬಲಿಷ್ಠ ಆರ್ಥಿಕತೆಯ ದಿಕ್ಕಿನಲ್ಲಿ ಸಾಗುತ್ತಿದ್ದೇವೆ. 2047 ರ ವೇಳೆಗೆ ಭಾರತವನ್ನು ಅಭಿವೃದ್ಧಿ ಹೊಂದಿದ ದೇಶವನ್ನು ಮಾಡಬೇಕಿದೆ ಇದರ ಟ್ರೇಲರ್ ನಮ್ಮ ಮೂರನೇ ಅವಧಿಯ ಮೊದಲ ನೂರು ದಿನದಲ್ಲಿ ತೋರುತ್ತದೆ ನಮ್ಮ ಆದ್ಯತೆ ಮತ್ತು ನಮ್ಮ ವೇಗ ಕಾಣ ಸಿಗಲಿದೆ ಎಂದರು.
7 ಕೋಟಿ ಮನೆ ನಿರ್ಮಾಣ ಮಾಡುತ್ತಿದ್ದೇವೆ, ಹಿಂದಿನ ಎರಡು ಅವಧಿಯಲ್ಲಿ ಕ್ರಮವಾಗಿ ಮೂರು ಮತ್ತು ನಾಲ್ಕು ಕೋಟಿ ಮನೆ ನಿರ್ಮಾಣ ಮಾಡಿದ್ದೇವೆ. ಕಳೆದ ನೂರು ದಿನಗಳಲ್ಲಿ 15 ವಂದೇ ಭಾರತ್ ಟ್ರೈನ್ ಚಾಲನೆ ನೀಡಲಾಗಿದೆ. 2025 ಒಳಗೆ ಪೆಟ್ರೋಲ್ ಒಳಗೆ 20% ಎಥಿನಾಲ್ ಬ್ಲೆಡಿಂಗ್ ಮಾಡಲಿದ್ದೇವೆ ಭಾರತದಲ್ಲಿ ನವೀಕರಿಸಬಹುದಾದ ಇಂಧನಕ್ಕೆ ಬೇಡಿಕೆ ಹೆಚ್ಚುತ್ತಿದೆ, ಅದಕ್ಕಾಗಿ ನಾವು ಹೊಸ ಯೋಜನೆಗಳನ್ನು ಆರಂಭಿಸುತ್ತಿದ್ದೇವೆ, ಹೀಗಾಗಿ ಭಾರತದಲ್ಲಿ ಹೂಡಿಕೆಗೆ ಅವಕಾಶಗಳಿದೆ, ಈ ವಲಯದಲ್ಲಿ ಭಾರತಕ್ಕಿಂತ ಉತ್ತಮ ಸ್ಥಳ ಮತ್ತೊಂದಿಲ್ಲ ಎಂದರು.
ಭಾರತದಲ್ಲಿ ಕಲ್ಲಿದ್ದಲು ಗ್ಯಾಸ್ ನಿಕ್ಷೇಪ ಹೆಚ್ಚಿನ ಪ್ರಮಾಣ ಇಲ್ಲ. ಹೀಗಾಗಿ ಸೋಲಾರ್ ಮತ್ತು ನ್ಯೂಕ್ಲಿಯರ್ ಗೆ ಹೆಚ್ಚಿನ ಆದ್ಯತೆ ನೀಡಬೇಕಿದೆ. 2030 ರ ವೇಳೆ 500 GW ಗ್ರೀನ್ ಎನರ್ಜಿ ಉತ್ಪಾದನೆ ಗುರಿ ಹೊಂದಿದೆ. ಸೂರ್ಯಘರ್ ಯೋಜನೆ ಅಧ್ಯಯನ ಮಾಡಬೇಕು, ಮನೆ ಛಾವಣಿ ಮೇಲೆ ಸೋಲಾರ್ ಅಳವಡಿಸಲು ಸಬ್ಸಿಡಿ ನೀಡುವುದಲ್ಲದೇ ಸರ್ಕಾರ ಸಹಾಯ ಮಾಡುತ್ತಿದೆ, 1.30 ಕೋಟಿ ಜನರು ಈಗಾಗಲೇ ನೋಂದಣಿ ಮಾಡಿಕೊಂಡಿದ್ದಾರೆ. 3.5 ಲಕ್ಷ ಮನೆಗಳಲ್ಲಿ ಸೋಲಾರ್ ಅಳವಡಿಕೆಯಾಗಿದೆ. ಈಗ ಜನರು ವಿದ್ಯುತ್ ಉತ್ಪಾದಿಸಿ ಮಾರಾಟ ಮಾಡುತ್ತಿದ್ದಾರೆ ಇದರಿಂದ ವಿದ್ಯುತ್ ಉಳಿತಾಯದ ಜೊತೆಗೆ ಹಣ ಮದ ಸಂಪಾದನೆಯಾಗಲಿದೆ ಎಂದರು.
ಇಲ್ಲಿ ವಿದ್ಯುತ್ ಉತ್ಪಾದನೆ ಜೊತೆಗೆ ಉದ್ಯೋಗ ಸೃಷ್ಟಿಯಾಗಲಿದೆ ಮತ್ತು ಪ್ರಕೃತಿಯ ರಕ್ಷಣೆಯೂಯಾಗಲಿದೆ. ಮೂಡೇರಾ ದೇಶದ ಮೊದಲ ಗ್ರಾಮವಾಗಿದೆ, ಇಲ್ಲ ಎಲ್ಲ ಮನೆಗಳಿಗೆ ಸೋಲಾರ್ ಅಳವಡಿಸಿದೆ ಸೋಲಾರ್ ಮೂಲಕ ಈ ಹಳ್ಳಿ ವಿದ್ಯುತ್ ನಲ್ಲಿ ಸ್ವಾವಲಂಬಿಯಾಗಿದೆ. ಅಯೋಧ್ಯೆಯನ್ನು ಮಾಡೆಲ್ ಸೋಲಾರ್ ಸಿಟಿ ಮಾಡುವ ಚಿಂತನೆ ಇದೆ. ಈಗಾಗಲೇ ಈ ಕಾರ್ಯ ಶುರುವಾಗಿದೆ. ಬೀದಿ ದೀಪ, ಬೋರ್ಡ್, ಎಟಿಎಂ ಸೇರಿ ಹಲವು ಕಡೆ ಸೋಲಾರ್ ಬಳಸಲಾಗುತ್ತಿದೆ. ಭಾರತದಲ್ಲಿ 17 ಸೋಲಾರ್ ಸಿಟಿ ನಿರ್ಮಿಸುವ ಗುರಿ ಹೊಂದಿದೆ ಎಂದು ತಿಳಿಸಿದರು.
ಗುಜರಾತ್‌ನ ಗಾಂಧಿನಗರದ ಮಹಾತ್ಮ ಮಂದಿರದಲ್ಲಿ ಇಂದಿನಿಂದ ಮೂರು ದಿನಗಳ ಕಾಲ ಎಕ್ಸ್‌ಪೋ ನಡೆಯುತ್ತಿದ್ದು ಉದ್ಘಾಟನಾ ಕಾರ್ಯಕ್ರಮದಲ್ಲಿ ಕೇಂದ್ರ ಸಚಿವ ಪ್ರಹ್ಲಾದ್ ಜೋಶಿ ಗುಜರಾತ್ ಸಿಎಂ ಭೂಪೇಂದ್ರ ಪಟೇಲ್ ಸೇರಿ ಹಲವು ಗಣ್ಯರು ಭಾಗಿಯಾಗಿದ್ದರು.
200 ಅಧಿಕ ವಿದೇಶಿ ಪ್ರತಿನಿಧಿಗಳು, ವಿವಿಧ ಕಂಪನಿಗಳು ಹಾಗೂ 10,000 ಸಾರ್ವಜನಿಕರು ಇದರಲ್ಲಿ ಭಾಗಿಯಾಗಿದ್ದರು. ಮೂರು ದಿನಗಳಲ್ಲಿ 40 ಸೆಷನ್ ಗಳು ನಡೆಯುತ್ತಿದ್ದು ನವೀಕರಿಸಬಹುದಾದ ಇಂಧನ ವಲಯದಲ್ಲಿ ಭಾರತದಲ್ಲಿರುವ ಅವಕಾಶಗಳುತ್ತು ಹೂಡಿಕೆ ಬಗ್ಗೆ ಸುಧೀರ್ಘ ಚರ್ಚೆ ನಡೆಯಲಿದೆ.