March 23, 2026
Monday, March 23, 2026
spot_img

ಭಾರತ-ಅಮೆರಿಕ ‘ವ್ಯಾಪಾರ’ ಸ್ನೇಹ: ಸುಂಕದ ಹೊರೆ ಇಳಿಕೆ, ಆರ್ಥಿಕತೆಗೆ ಹೊಸ ಚೈತನ್ಯ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಭಾರತ ಮತ್ತು ಅಮೆರಿಕ ನಡುವಿನ ಆರ್ಥಿಕ ಬಾಂಧವ್ಯದಲ್ಲಿ ಹೊಸ ಪರ್ವ ಆರಂಭವಾಗಿದೆ. ಪೂರ್ಣಪ್ರಮಾಣದ ವ್ಯಾಪಾರ ಒಪ್ಪಂದಕ್ಕೆ ಮುನ್ನುಡಿಯಾಗಿ ಎರಡೂ ರಾಷ್ಟ್ರಗಳು ‘ಮಧ್ಯಂತರ ವ್ಯಾಪಾರ ಚೌಕಟ್ಟನ್ನು’ ಘೋಷಿಸಿವೆ.

ಅಮೆರಿಕವು ಭಾರತದ ಮೇಲಿನ ಆಮದು ಸುಂಕವನ್ನು ಶೇ. 18ರಷ್ಟು ಕಡಿತಗೊಳಿಸಿರುವುದು ಹಾಗೂ ರಷ್ಯಾ ತೈಲ ಖರೀದಿಯ ಹಿನ್ನೆಲೆಯಲ್ಲಿ ವಿಧಿಸಲಾಗಿದ್ದ ಶೇ. 25ರಷ್ಟು ಹೆಚ್ಚುವರಿ ಸುಂಕವನ್ನು ತೆರವುಗೊಳಿಸಿರುವುದು ಈ ಮಹತ್ವದ ಬೆಳವಣಿಗೆಗೆ ದಾರಿ ಮಾಡಿಕೊಟ್ಟಿದೆ. ಈ ಬೆನ್ನಲ್ಲೇ ಶೇ. 18ರ ತೆರಿಗೆ ವ್ಯಾಪ್ತಿಗೆ ಬರುವ ವಸ್ತುಗಳ ಪರಸ್ಪರ ರಫ್ತು ವಹಿವಾಟಿನ ಕುರಿತು ಉಭಯ ದೇಶಗಳ ಅಧಿಕಾರಿಗಳು ಮಾತುಕತೆ ಆರಂಭಿಸಿದ್ದಾರೆ.

ಈ ಐತಿಹಾಸಿಕ ನಡೆಯನ್ನು ಪ್ರಧಾನಿ ನರೇಂದ್ರ ಮೋದಿ ಅವರು ‘ಭಾರತ ಮತ್ತು ಅಮೆರಿಕಕ್ಕೆ ಶುಭ ಸುದ್ದಿ’ ಎಂದು ಬಣ್ಣಿಸಿದ್ದಾರೆ. ಎಕ್ಸ್ ಮೂಲಕ ಪ್ರತಿಕ್ರಿಯಿಸಿದ ಅವರು, ಅಧ್ಯಕ್ಷ ಟ್ರಂಪ್ ಅವರ ವೈಯಕ್ತಿಕ ಬದ್ಧತೆಗೆ ಧನ್ಯವಾದ ಅರ್ಪಿಸಿದ್ದಾರೆ. ಈ ಒಪ್ಪಂದದಿಂದ ಭಾರತೀಯ ರೈತರು, ಎಂಎಸ್‌ಎಂಇಗಳು, ನವೋದ್ಯಮಗಳು ಮತ್ತು ಮೀನುಗಾರರಿಗೆ ಹೊಸ ಅವಕಾಶಗಳು ಲಭ್ಯವಾಗಲಿದ್ದು, ‘ಮೇಕ್ ಇನ್ ಇಂಡಿಯಾ’ ಅಭಿಯಾನಕ್ಕೆ ದೊಡ್ಡ ಬಲ ಸಿಗಲಿದೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !