September 28, 2026
Monday, September 28, 2026
spot_img

ಛತ್ತೀಸ್‌ಗಢದಲ್ಲಿ ಎನ್‌ಕೌಂಟರ್‌: ಮಹಿಳಾ ನಕ್ಸಲ್ ಕಮಾಂಡರ್ ರೂಪಿ ಹತ್ಯೆ

ಹೊಸ ದಿಗಂತ ಡಿಜಿಟಲ್ ಡೆಸ್ಕ್:

ಛತ್ತೀಸ್‌ಗಢದ ಕಂಕೇರ್ ಜಿಲ್ಲೆಯ ದಟ್ಟ ಅರಣ್ಯದಲ್ಲಿ ಭದ್ರತಾ ಪಡೆಗಳೊಂದಿಗೆ ನಡೆದ ಗುಂಡಿನ ಚಕಮಕಿಯಲ್ಲಿ ಮಹಿಳಾ ನಕ್ಸಲ್ ಕಮಾಂಡರ್ ರೂಪಿ ಹತ್ಯೆಯಾಗಿದ್ದಾರೆ .

ಟೆಬೆಥಿಯಾ-ಪರ್ತಾಪುರ ಪೊಲೀಸ್ ಠಾಣೆ ವ್ಯಾಪ್ತಿಯ ಮಚ್‌ಪಲ್ಲಿ-ಅರಾಮ್‌ಜೋರಾ-ಹಿದೂರ್ ಬೆಲ್ಟ್‌ನ ಅರಣ್ಯದಲ್ಲಿ ಮಾವೋವಾದಿಗಳ ಉಪಸ್ಥಿತಿಯ ಕುರಿತು ಮಾಹಿತಿ ಆಧರಿಸಿ ಪೊಲೀಸ್ ಮತ್ತು ಭದ್ರತಾ ಪಡೆಗಳ ಜಂಟಿಯಾಗಿ ಶೋಧ ಕಾರ್ಯಾಚರಣೆ ನಡೆಸಿದರು. ಈ ವೇಳೆ ನಡೆದ ಗುಂಡಿನ ಚಕಮಕಿಯಲ್ಲಿ ಮಹಿಳಾ ಕಮಾಂಡರ್ ರೂಪಿ ಬಲಿಯಾಗಿದ್ದು, ಆಕೆಯ ಬಳಿಯಿದ್ದ ಪಿಸ್ತೂಲ್, ಮದ್ದುಗುಂಡುಗಳು ಹಾಗೂ ದಿನನಿತ್ಯ ಬಳಸುವ ವಿವಿಧ ಸಾಮಗ್ರಿಗಳು ಪತ್ತೆಯಾಗಿವೆ ಎಂದು ಕಂಕೇರ್ ಜಿಲ್ಲಾ ಪೊಲೀಸ್ ಮುಖ್ಯಸ್ಥ ನಿಖಿಲ್ ರಾಖೇಚಾ ಮಾಹಿತಿ ನೀಡಿದ್ದಾರೆ.

ಮಹಿಳಾ ಮಾವೋವಾದಿ ಕೇಡರ್‌ ರೂಪಿ ಏರಿಯಾ ಕಮಿಟಿ ಸದಸ್ಯೆ ಶ್ರೇಣಿಯ ಕಮಾಂಡರ್ ಆಗಿದ್ದಳು. 2025 ರಲ್ಲಿ ಮನ್ಪುರ್-ಮೊಹ್ಲಾ ಜಿಲ್ಲೆಯಲ್ಲಿ ನಡೆದ ಎನ್‌ಕೌಂಟರ್‌ನಲ್ಲಿ ಕೊಲ್ಲಲ್ಪಟ್ಟ ಹಿರಿಯ ದಂಡಕಾರಣ್ಯ ವಿಶೇಷ ವಲಯ ಸಮಿತಿ ನಾಯಕ ವಿಜಯ್ ರೆಡ್ಡಿಯ ಪತ್ನಿಯಾಗಿದ್ದಳು.

ಕಂಕೇರ್ ಪ್ರದೇಶದಲ್ಲಿಉಳಿದಿರುವ ಮಾವೋವಾದಿ ಕಾರ್ಯಕರ್ತರಿಗಾಗಿ ಪೊಲೀಸರು ಮತ್ತು ಹೆಚ್ಚುವರಿ ಭದ್ರತಾ ಪಡೆಗಳ ಶೋಧ ಕಾರ್ಯಾಚರಣೆ ಮುಂದುವರೆದಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ..

Must Read