ಹೊಸದಿಗಂತ ಡಿಜಿಟಲ್ ಡೆಸ್ಕ್:
ಭಾರತ-ಅಮೆರಿಕ ನಡುವಿನ ರಕ್ಷಣಾ ಸಹಕಾರವು ‘ನಮ್ಮ ದ್ವಿಪಕ್ಷೀಯ ಸಂಬಂಧ’ದ ಪ್ರಮುಖ ಆಧಾರಸ್ತಂಭಗಳಲ್ಲಿ ಒಂದಾಗಿದೆಎಂದು ರಕ್ಷಣಾ ಸಚಿವ ರಾಜನಾಥ್ ಸಿಂಗ್ ಹೇಳಿದರು.
ಇಂದು ರಾಷ್ಟ್ರ ರಾಜಧಾನಿಯಲ್ಲಿ ನಡೆದ ಭಾರತ – ಅಮೆರಿಕ ‘2 + 2’ ಸಂವಾದದಲ್ಲಿ ಅವರು ಮಾತನಾಡಿದರು. ಸಾಮರ್ಥ್ಯ ವರ್ಧನೆಯ ಕ್ಷೇತ್ರಗಳಲ್ಲಿ ಅಮೆರಿಕದೊಂದಿಗೆ ನಿಕಟವಾಗಿ ಕೆಲಸ ಮಾಡಲು ನಾವು ಎದುರು ನೋಡುತ್ತಿದ್ದೇವೆ ಎಂದು ಹೇಳಿದರು.
ಹೆಚ್ಚಿನ ರಕ್ಷಣಾ ಕೈಗಾರಿಕಾ ಸಂಬಂಧಗಳ ಮೂಲಕ ಜಾಗತಿಕ ಕಾರ್ಯತಂತ್ರದ ಪಾಲುದಾರಿಕೆಯನ್ನು ಮತ್ತಷ್ಟು ವಿಸ್ತರಿಸಲು, ಇಂಡೋ – ಪೆಸಿಫಿಕ್ನಲ್ಲಿ ತೊಡಗಿಸಿಕೊಳ್ಳುವಿಕೆ ಹೆಚ್ಚಿಸಲು ಮತ್ತು ಪ್ರಮುಖ ಖನಿಜಗಳು ಮತ್ತು ಉನ್ನತ ತಂತ್ರಜ್ಞಾನದಂತಹ ಪ್ರಮುಖ ಕ್ಷೇತ್ರಗಳಲ್ಲಿ ಸಹಕಾರ ಹೆಚ್ಚಿಸಲು ಭಾರತ ಮತ್ತು ಅಮೆರಿಕ ಮಧ್ಯೆ ಇಂದು ವ್ಯಾಪಕ ಚರ್ಚೆ ನಡೆದವು.
2+2 ಸಚಿವರ ಮಾತುಕತೆಯಲ್ಲಿ ಅಮೆರಿಕ ನಿಯೋಗದ ನೇತೃತ್ವವನ್ನು ಅಮೆರಿಕದ ಸೆಕ್ರೆಟರಿ ಆಂಟನಿ ಬ್ಲಿಂಕೆನ್ ಮತ್ತು ಯುಎಸ್ ರಕ್ಷಣಾ ಕಾರ್ಯದರ್ಶಿ ಲಾಯ್ಡ್ ಆಸ್ಟಿನ್ ವಹಿಸಿದ್ದರು.
ರಕ್ಷಣಾ ಸಚಿವ ರಾಜನಾಥ್ ಸಿಂಗ್ ಮತ್ತು ವಿದೇಶಾಂಗ ಸಚಿವ ಎಸ್ ಜೈಶಂಕರ್ ಅವರು ಭಾರತದ ನೇತೃತ್ವ ವಹಿಸಿದ್ದರು.
ಜೈಶಂಕರ್ ಮಾತನಾಡಿ, ನಮ್ಮ ಸಂವಾದವು ಪ್ರಧಾನಿ ನರೇಂದ್ರ ಮೋದಿ ಮತ್ತು ಅಮೆರಿಕದ ಅಧ್ಯಕ್ಷ ಜೋ ಬೈಡನ್ ಅವರ ದೂರದೃಷ್ಟಿಕೋನವನ್ನು ಮುನ್ನಡೆಸಲು ಮತ್ತು ಹಂಚಿಕೆಯ ಜಾಗತಿಕ ಕಾರ್ಯಸೂಚಿಯನ್ನು ನಿರ್ಮಿಸಲು ಒಂದು ಅವಕಾಶವಾಗಿದೆ” ಎಂದು ಹೇಳಿಕೆಗಳಲ್ಲಿ ಹೇಳಿದರು.ನಾವು ಪ್ರಮುಖ ತಂತ್ರಜ್ಞಾನಗಳು, ನಾಗರಿಕ ಬಾಹ್ಯಾಕಾಶದಲ್ಲಿ ಸಹಯೋಗ ಮತ್ತು ಪ್ರಮುಖ ಖನಿಜಗಳ ಕ್ಷೇತ್ರಗಳಲ್ಲಿನ ಸಹಕಾರವನ್ನು ಅನ್ವೇಷಿಸುತ್ತಿದ್ದೇವೆ ಎಂದು ಅವರು ಹೇಳಿದರು.
ಕ್ವಾಡ್ ಮೂಲಕ ಯುಎಸ್-ಭಾರತ ಪಾಲುದಾರಿಕೆಯನ್ನು ಬಲಪಡಿಸುವ ಮೂಲಕ ಎರಡೂ ದೇಶಗಳು ಮುಕ್ತ ಮತ್ತು ಸಮೃದ್ಧ, ಸುರಕ್ಷಿತ ಇಂಡೋ-ಪೆಸಿಫಿಕ್ ನಿರ್ಮಾಣಕ್ಕೆ ಪ್ರಯತ್ನಿಸುತ್ತಿದ್ದೇವೆ ಎಂದು ಬ್ಲಿಂಕೆನ್ ತಮ್ಮ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಅಂತಾರಾಷ್ಟ್ರೀಯ ಶಾಂತಿ, ಭದ್ರತೆ ಮತ್ತು ನಿರ್ದಿಷ್ಟವಾಗಿ ನಿಯಮ ಆಧಾರಿತ ಕ್ರಮವನ್ನು ಉತ್ತೇಜಿಸಲು, ಸಾರ್ವಭೌಮತ್ವ, ಪ್ರಾದೇಶಿಕ ಸಮಗ್ರತೆ ಮತ್ತು ಸ್ವಾತಂತ್ರ್ಯದ ತತ್ವಗಳನ್ನು ಎತ್ತಿಹಿಡಿಯಲು ಕೆಲಸ ಮಾಡುವುದು ನಮ್ಮ ಉದ್ದೇಶವಾಗಿದೆ ಎಂದು ಅವರು ಹೇಳಿದರು.
ನಮ್ಮ ಹೆಚ್ಚುತ್ತಿರುವ ಬಲವಾದ ಸಂಬಂಧಗಳು ಈ ಪಾಲುದಾರಿಕೆಯ ಭವಿಷ್ಯದ ಬಗ್ಗೆ ಮತ್ತು ಹೆಚ್ಚು ಸುರಕ್ಷಿತ ಪ್ರಪಂಚದ ಕಡೆಗೆ ನಮ್ಮ ಸಾಮಾನ್ಯ ಪ್ರಯತ್ನಗಳ ಭರವಸೆಯನ್ನು ನೀಡುತ್ತವೆ ಎಂದು ಅಮೆರಿಕದ ರಕ್ಷಣಾ ಕಾರ್ಯದರ್ಶಿ ಆಸ್ಟಿನ್ ಹೇಳಿದರು.