ಪುಟಿನ್‌ಗೆ ಶಾಕ್ ನೀಡಿದ ಭಾರತ: ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ರಷ್ಯಾ ವಿರುದ್ಧ ಮತ ಚಲಾವಣೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ರಷ್ಯಾಕ್ಕೆ ಭಾರತ ಶಾಕ್ ನೀಡಿದೆ. ವಿಶ್ವಸಂಸ್ಥೆಯ ಸಾಮಾನ್ಯ ಸಭೆಯಲ್ಲಿ ನಡೆದ ಮತದಾನದಲ್ಲಿ ರಷ್ಯಾದ ಬೇಡಿಕೆಯನ್ನು ತಿರಸ್ಕರಿಸಿ ಭಾರತ ಮತ ಚಲಾಯಿಸಿದೆ. ಉಕ್ರೇನ್‌ನ ಡೊನೆಟ್ಸ್ಕ್, ಲುಹಾನ್ಸ್ಕ್, ಖೆರ್ಸನ್ ಮತ್ತು ಜಪೋರಿಜಿಯಾ ಪ್ರದೇಶಗಳನ್ನು ರಷ್ಯಾಕ್ಕೆ ಸೇರಿಸುವುದನ್ನು ಖಂಡಿಸುವ ನಿರ್ಣಯವನ್ನು ಅಲ್ಬೇನಿಯಾ ಪ್ರಸ್ತಾಪಿಸಿತು. ನಿರ್ಣಯವನ್ನು ರಹಸ್ಯ ಮತದಾನದ ಮೂಲಕ ನಡೆಯಬೇಕೆಂದು ಎಂದು ರಷ್ಯಾ ಒತ್ತಾಯಿಸಿದೆ. ರಷ್ಯಾದ ಬೇಡಿಕೆಯ ಮೇಲೆ ವಿಶ್ವಸಂಸ್ಥೆಯ ಜನರಲ್ ಅಸೆಂಬ್ಲಿ ಮತದಾನ ಪ್ರಕ್ರಿಯೆ ನಡೆಸಿದೆ, ಅದರಲ್ಲಿ 107 ದೇಶಗಳು ರಷ್ಯಾದ ಬೇಡಿಕೆಗೆ ವಿರುದ್ಧವಾಗಿ ಮತ ಚಲಾಯಿಸಿದವು. ಕೇವಲ 13 ದೇಶಗಳು ಮಾತ್ರ ರಷ್ಯಾದ ಪರವಾಗಿ ಮತ ಚಲಾಯಿಸಿದವು. ಇನ್ನೂ 39 ದೇಶಗಳು ಮತದಾನದಿಂದ ದೂರ ಉಳಿದಿವೆ. ಮತದಾನದಿಂದ ದೂರವಿರುವ ದೇಶಗಳ ಪೈಕಿ ರಷ್ಯಾ ಮತ್ತು ಚೀನಾ ಕೂಡ ಇರುವುದು ಗಮನಾರ್ಹ.

ಪ್ರತಿ ಬಾರಿಯೂ ರಷ್ಯಾವನ್ನು ಬೆಂಬಲಿಸುತ್ತಿದ್ದ ಭಾರತ ಈ ಬಾರಿ ಆಘಾತ ನೀಡಿದೆ. ರಷ್ಯಾದ ಬೇಡಿಕೆಯನ್ನು ತಿರಸ್ಕರಿಸಿದ 107 ದೇಶಗಳಲ್ಲಿ ಭಾರತವೂ ಒಂದು. ಅಂತೆಯೇ, ಅಲ್ಬೇನಿಯಾ ನಿರ್ಣಯದ ಅಂಗೀಕಾರವನ್ನು ಮರುಪರಿಶೀಲಿಸುವಂತೆ ವಿಶ್ವಸಂಸ್ಥೆಯ ಸಾಮಾನ್ಯ ಸಭೆಗೆ ರಷ್ಯಾ ವಿನಂತಿಸಿತು. ಯುಎನ್ ಜನರಲ್ ಅಸೆಂಬ್ಲಿ ಇದನ್ನು ಮರುಪರಿಶೀಲಿಸಲು ನಿರಾಕರಿಸಿದೆ. ನಡೆಸಿದ ಮತದಾನದಲ್ಲಿ ಭಾರತ ಸೇರಿದಂತೆ 104 ದೇಶಗಳು ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ ನಿರ್ಧಾರದ ಪರವಾಗಿ ಮತ ಚಲಾಯಿಸಿದವು.

ರಷ್ಯಾದ ಖಾಯಂ ಪ್ರತಿನಿಧಿ ವಾಸಿಲಿ ನೆಬೆಂಜಿಯಾ ಅವರು ವಿಶ್ವಸಂಸ್ಥೆಯ ಸಾಮಾನ್ಯ ಸಭೆಯ ನಡವಳಿಕೆಯ ಬಗ್ಗೆ ತೀವ್ರ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ವಿಶ್ವಸಂಸ್ಥೆಯ ಸದಸ್ಯತ್ವವು ಬೃಹತ್ ವಂಚನೆಯ ಸಂಕೇತವಾಗಿದೆ, ಸದಸ್ಯ ರಾಷ್ಟ್ರಗಳು ತಮ್ಮ ಅಭಿಪ್ರಾಯಗಳನ್ನು ಮುಕ್ತವಾಗಿ ವ್ಯಕ್ತಪಡಿಸುವ ಹಕ್ಕನ್ನು ಕಸಿದುಕೊಳ್ಳುತ್ತಿವೆ ಎಂದು ಟೀಕಿಸಿದ್ದಾರೆ.

Image

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!