Monday, November 28, 2022

Latest Posts

ಭಾರತ ವಿರುದ್ದದ ಏಕದಿನ ಸರಣಿಗೆ ಬಲಿಷ್ಠ ತಂಡ ಪ್ರಕಟಿಸಿದ ಬಾಂಗ್ಲಾದೇಶ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ಸದ್ಯ ನ್ಯೂಜಿಲೆಂಡ್ ಪ್ರವಾಸದಲ್ಲಿರುವ ಭಾರತ ಕ್ರಿಕೆಟ್ ತಂಡ ಏಕದಿನ ಸರಣಿಯನ್ನು ಮುಗಿಸಿ ಬಳಿಕ ಬಾಂಗ್ಲಾದೇಶ ಪ್ರವಾಸ ಕೈಗೊಳ್ಳಲಿದ್ದು, ಅಲ್ಲಿ ಏಕದಿನ ಮತ್ತು ಟೆಸ್ಟ್​ ಸರಣಿಯಲ್ಲಿ ಆಡಲಿದೆ. ಈ ಏಕದಿನ ಸರಣಿಗೆಬಾಂಗ್ಲಾ ಕ್ರಿಕೆಟ್ ಬೋರ್ಡ್ 16 ಸದಸ್ಯರ ಬಾಂಗ್ಲಾದೇಶ ತಂಡವನ್ನು ಪ್ರಕಟ ಮಾಡಿದ್ದು, ತಮಿಮ್ ಇಕ್ಬಾಲ್ ನಾಯಕನಾಗಿ ಮರಳಿದ್ದಾರೆ. ಜೊತೆಗೆ ಬಲಿಷ್ಠ ಆಟಗಾರರಿಗೆ ಮಣೆ ಹಾಕಲಾಗಿದೆ.
ಢಾಕಾದ ಶೇರ್-ಎ-ಬಾಂಗ್ಲಾ ರಾಷ್ಟ್ರೀಯ ಕ್ರಿಕೆಟ್ ಕ್ರೀಡಾಂಗಣವು ಕ್ರಮವಾಗಿ ಡಿಸೆಂಬರ್ 4 ಮತ್ತು 7 ರಂದು ಸರಣಿಯ ಮೊದಲ ಎರಡು ಪಂದ್ಯಗಳನ್ನು ಆಯೋಜಿಸಲಿದ್ದು, ಅಂತಿಮ ಪಂದ್ಯವನ್ನು ಚಟ್ಟೋಗ್ರಾಮ್‌ನ ಜಹುರ್ ಅಹ್ಮದ್ ಚೌಧರಿ ಕ್ರೀಡಾಂಗಣದಲ್ಲಿ ಆಯೋಜಿಸಲಾಗುತ್ತಿದೆ.
ಈ ವರ್ಷದ ಆರಂಭದಲ್ಲಿ ಜುಲೈ-ಆಗಸ್ಟ್‌ನಲ್ಲಿ ಜಿಂಬಾಬ್ವೆ ಪ್ರವಾಸದ ಬಳಿಕ ಏಕದಿನದಿಂದ ಹೊರಗುಳಿದಿದ್ದ ಶಕೀಬ್ ತಂಡಕ್ಕೆ ಮರಳಿದ್ದಾರೆ. ಕಳಫೆ ಫಾರ್ಮ್‌ ನಲ್ಲಿರುವ ಮೊಸದ್ದೆಕ್ ಹೊಸೈನ್, ಶೋರಿಫುಲ್ ಇಸ್ಲಾಂ ಮತ್ತು ತೈಜುಲ್ ಇಸ್ಲಾಂ ಅವರನ್ನು ತಂಡದಿಂದ ಕೈಬಿಡಲಾಗಿದೆ. ಜಿಂಬಾಬ್ವೆ ವಿರುದ್ಧದ ಅಂತಿಮ ಏಕದಿನ ಪಂದ್ಯದಲ್ಲಿ 50 ಓವರ್‌ಗಳ ಚೊಚ್ಚಲ ಪಂದ್ಯವನ್ನಾಡಿದ ಎಬಾದತ್ ಹೊಸೈನ್ ತಂಡದಲ್ಲಿ ತಮ್ಮ ಸ್ಥಾನವನ್ನು ಉಳಿಸಿಕೊಂಡಿದ್ದಾರೆ. ಬಾಂಗ್ಲಾದೇಶ ಕ್ರಿಕೆಟ್ ಲೀಗ್ ಏಕದಿನ ಪಂದ್ಯಾವಳಿಯಲ್ಲಿ ಯಾಸಿರ್ ಅಲಿ ಅವರ ಫಾರ್ಮ್ ಅವರಿಗೆ 16 ಆಟಗಾರರ ತಂಡದಲ್ಲಿ ಸ್ಥಾನ ಪಡೆಯಲು ಸಹಾಯ ಮಾಡಿದೆ.
ಬಾಂಗ್ಲಾದೇಶ ತಂಡ:
ತಮೀಮ್ ಇಕ್ಬಾಲ್ (ಸಿ), ಲಿಟನ್ ದಾಸ್, ಅನಾಮುಲ್ ಹಕ್, ಶಕೀಬ್ ಅಲ್ ಹಸನ್, ಮುಶ್ಫಿಕರ್ ರಹೀಮ್, ಅಫೀಫ್ ಹೊಸೈನ್, ಯಾಸಿರ್ ಅಲಿ, ಮೆಹಿದಿ ಹಸನ್, ಮುಸ್ತಫಿಜುರ್ ರೆಹಮಾನ್, ತಸ್ಕಿನ್ ಅಹ್ಮದ್, ಹಸನ್ ಮಹ್ಮದ್, ಎಬಾಡೋತ್ ಹೊಸೈನ್, ನಸುಮ್ ಉಮದ್, ನಸುಮ್ ಅಹ್ಮದ್ ಶಾಂಟೋ, ನೂರುಲ್ ಹಸನ್ ಸೋಹನ್.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!