IND vs SA ಪಂದ್ಯ ನಡೆಯುವಾಗಲೇ ಮೈದಾನಕ್ಕೆ ನುಗ್ಗಿದ ಹಾವು! ಆಮೇಲೇನಾಯ್ತು? ವಿಡಿಯೋ ನೋಡಿ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ನಿನ್ನೆ ಗುವಾಹಟಿಯ ಬರ್ಸಾಪರಾ ಕ್ರಿಕೆಟ್ ಸ್ಟೇಡಿಯಂನಲ್ಲಿ ಭಾರತ ಮತ್ತು ದಕ್ಷಿಣ ಆಫ್ರಿಕಾ ನಡುವಿನ 2 ನೇ ಟಿ 20 ರೋಚಕವಾಗಿ ಸಾಗುತ್ತಿತ್ತು. ಸೌತ್‌ ಆಪ್ರಿಕಾ ಬೌಲರ್‌ ಗಳನ್ನು ಮನಬಂದಂತೆ ದಂಡಿಸಿದ ಭಾರತದ ಆರಂಭಿಕರು ಪವರ್‌ ಪ್ಲೇ ನಲ್ಲೇ ಸ್ಫೋಟಿಸಿ ದೊಡ್ಡ ಮೊತ್ತ ದಾಖಲಿಸುವ ಮುನ್ಸೂಚನೆ ನೀಡಿದ್ದರು. ಟೀಂ ಇಂಡಿಯಾ ಕೇವಲ 7 ಓವರ್‌ ಗಳಲ್ಲಿ 68 ರನ್‌ ಗಳಿಸಿದ್ದ ವೇಳೆ ಮೈದಾನದೊಳಕ್ಕೆ ನುಗ್ಗಿದ ಅನಿರೀಕ್ಷಿತ ಅತಿಥಿಯನ್ನು ಕಂಡು ಸೌತ್‌ ಆಫ್ರಿಕಾ ಆಟಗಾರರು ಹೌಹಾರಿ ಹೋದರು. ಮೊದಲೇ ಭಾರತೀಯ ಬ್ಯಾಟರ್‌ ಗಳ ಅಬ್ಬರದಿಂದ ಕಂಗಾಲಾಗಿದ್ದ ಹರಿಣಗಳು ಏಕಾಏಕಿ ಮೈದಾನದೊಳಗೆ ನುಗ್ಗಿದ ಹಾವನ್ನು ಕಂಡು ಆತಂಕಿತರಾದರು. ಹಾವು ಆಗಮಿಸಿದ ಸ್ಥಳದಲ್ಲಿ ಫೀಲ್ಡಿಂಗ್‌ ಗೆ ನಿಂತಿದ್ದ ಪ್ಲೆಯರ್ಸ್‌ ಎದ್ವೋ ಬಿದ್ವೋ ಎಂದು ಪಿಚ್‌ ಮಧ್ಯಭಾಗಕ್ಕೆ ಕಾಲ್ಕಿತ್ತರು.

ಟೆಲಿವಿಷನ್ ಕ್ಯಾಮೆರಾಗಳು ಹಾವನ್ನು ಗುರುತಿಸುತ್ತಿದ್ದಂತೆ, ಬರ್ಸಾಪಾರ ಕ್ರೀಡಾಂಗಣದ ಭದ್ರತಾ ಅಧಿಕಾರಿಗಳು ತಕ್ಷಣ ಉರಗ ತಜ್ಞರೊಂದಿಗೆ ಧಾವಿಸಿ ಹಾವನ್ನು ಸ್ಥಳಾಂತರಿಸಿ ಆಟಗಾರರ ಆತಂಕ ನಿವಾರಿಸಿದರು. 8ನೇ ಓವರ್‌ನ ಆರಂಭದಲ್ಲಿ ಈ ಪ್ರಸಂಗ ನಡೆದಿದ್ದು,  10 ನಿಮಿಷಗಳ ವಿಳಂಬದ ನಂತರ ಆಟ ಪುನರಾರಂಭವಾಯಿತು.
ಭಾನುವಾರ ಗುವಾಹಟಿಯಲ್ಲಿ ನಡೆದ 2ನೇ ಟಿ20 ಪಂದ್ಯದಲ್ಲಿ ಆಟ ಆರಂಭವಾಗುವ ಮೊದಲೂ ಒಂದು ಹಾವು ಕಾಣಿಸಿಕೊಂಡಿತ್ತು ಎಂದು ಟಿವಿ ವಾಹಿನಿ ನಿರೂಪಕರೊಬ್ಬರು ತಿಳಿಸಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!