ಹೊಸದಿಗಂತ ಡಿಜಿಟಲ್ ಡೆಸ್ಕ್:
ಇಂದಿನಿಂದ ಎಫ್‌ಐಎಚ್ ಕಿರಿಯ ಪುರುಷರ ಹಾಕಿ ವಿಶ್ವಕಪ್ ಆರಂಭವಾಗುತ್ತಿದ್ದು, ಭಾರತ ಹಾಗೂ ದಕ್ಷಿಣ ಕೊರಿಯಾ ಮೊದಲ ಪಂದ್ಯದಲ್ಲಿ ಮುಖಾಮುಖಿಯಾಗಲಿವೆ.
2016 ರಲ್ಲಿ ಚಾಂಪಿಯನ್ಸ್ ಆಗಿದ್ದ ಭಾರತ ಈ ಬಾರಿ ಚಾಂಪಿಯನ್ಸ್ ಆಗುವ ತವಕದಲ್ಲಿದೆ. ಟೂರ್ನಿಯಲ್ಲಿ ಒಟ್ಟಾರೆ 16 ತಂಡಗಳು ಪಾಲ್ಗೊಳ್ಳುತ್ತಿವೆ. ಟೀಂ ಇಂಡಿಯಾ ಗ್ರೂಪ್ ಸಿ ಗುಂಪಿನಲ್ಲಿದ್ದು, ಡಿ.7ಕ್ಕೆ ಸ್ಪೇನ್ ವಿರುದ್ಧ ಹಾಗೂ ಡಿ.9ರಂದು ಕೆನಡಾ ವಿರುದ್ಧ ಸೆಣಸಾಡಲಿದೆ.
ಮಧ್ಯಾಹ್ನ 3:30ಕ್ಕೆ ಪಂದ್ಯ ಆರಂಭವಾಗಲಿದ್ದು, ಜಿಯೋ ಸಿನಿಮಾದಲ್ಲಿ ಪಂದ್ಯ ವೀಕ್ಷಿಸಬಹುದಾಗಿದೆ.