ಮಿಚಾಂಗ್ ಚಂಡಮಾರುತಕ್ಕೆ ಜನರು ತತ್ತರ: ತಮಿಳುನಾಡಿಗೆ ಬಿಜೆಪಿಯಿಂದ ನೆರವಿನ ಹಸ್ತ

ಹೊಸದಿಗಂತ ಡಿಜಿಟಲ್‌ ಡೆಸ್ಕ್:

ಭೀಕರ ಮಿಚಾಂಗ್ ಚಂಡಮಾರುತದ ಆರ್ಭಟಕ್ಕೆ ತಮಿಳುನಾಡು ನಲುಗಿ ಹೋಗಿದೆ. ಸಂಕಷ್ಟ ಪೀಡಿತವಾಗಿರುವ ತಮಿಳುನಾಡಿನ ಜನರ ಹಾಹಾಕಾರ ಪರಿಸ್ಥಿತಿಗೆ ಸ್ಪಂದಿಸಲು ಅಲ್ಲಿನ ಸಂಕಷ್ಟಿತ ಜನರ ನೆರವಿಗೆ ಧಾವಿಸುವಂತೆ ಮಾನ್ಯ ಪ್ರಧಾನಿ ನರೇಂದ್ರ ಮೋದಿಯವರ ಕರೆ ನೀಡಿದ್ದಾರೆ.

ಪ್ರಧಾನಿಯವರ ಕರೆಯ ಮೇರೆಗೆ ಇಂದು ಬೆಳಗಾವಿಯ ಬಿಜೆಪಿ ಕಛೇರಿಯಿಂದ ಆಹಾರ ಸಾಮಗ್ರಿಗಳು ಹಾಗೂ ಅಗತ್ಯ ದಿನಬಳಕೆ ವಸ್ತುಗಳನ್ನು ತಮಿಳುನಾಡಿಗೆ ರವಾನಿಸುವ ವಾಹನಕ್ಕೆ ಚಾಲನೆ ನೀಡಲಾಯಿತು.

ಈ ಸಂದರ್ಭದಲ್ಲಿ ಬೆಳಗಾವಿ ನಗರ ಜಿಲ್ಲಾಧ್ಯಕ್ಷರು ಹಾಗೂ ಮಾಜಿ ಶಾಸಕರಾದ ಶ್ರೀ ಅನಿಲ್ ಬೆನಕೆ, ಶಾಸಕರುಗಳಾದ ಶ್ರೀ ಎಸ್.ಆರ್.ವಿಶ್ವನಾಥ್, ಶ್ರೀ ಸತೀಶ್ ರೆಡ್ಡಿ, ಶ್ರೀ ಪ್ರಭು ಚೌಹಾಣ್, ಮಾಜಿ ವಿಧಾನ ಪರಿಷತ್ ಸದಸ್ಯರಾದ ಶ್ರೀ ಮಹಾಂತೇಶ ಕವಟಗಿಮಠ ಅವರು ಸೇರಿದಂತೆ ಪಕ್ಷದ ಮುಖಂಡರು, ಪದಾಧಿಕಾರಿಗಳು ಹಾಗೂ ಕಾರ್ಯಕರ್ತರು ಉಪಸ್ಥಿತರಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!