Sunday, October 2, 2022

Latest Posts

ಭಾರತ ವಿರುದ್ಧ ಟಿ20, ಏಕದಿನ ಸರಣಿ: ಸೌತ್ ಆಫ್ರಿಕಾದಿಂದ ಟೀಮ್ ಪ್ರಕಟ

ಹೊಸ ದಿಗಂತ ಡಿಜಿಟಲ್ ಡೆಸ್ಕ್

ಟಿ20 ಹಾಗೂ ಏಕದಿನ ಸರಣಿಗಾಗಿ ಸೌತ್ ಆಫ್ರಿಕಾ ತಂಡ ಭಾರತ ಪ್ರವಾಸ ಕೈಗೊಳ್ಳಲಿದೆ. ಭಾರತ ವಿರುದ್ಧದ ಸರಣಿ ಹಾಗೂ ಟಿ20 ವಿಶ್ವಕಪ್ ಟೂರ್ನಿಗೆ ಸೌತ್ ಆಫ್ರಿಕಾ ತಂಡ ಪ್ರಕಟಿಸಿದೆ.

ಸೆಪ್ಟೆಂಬರ್ 28 ರಿಂದ ಭಾರತ ಹಾಗೂ ಸೌತ್ ಆಫ್ರಿಕಾ ನಡುವಿನ ಟಿ20 ಟೂರ್ನಿ ಆರಂಭಗೊಳ್ಳಲಿದೆ. ಅಕ್ಟೋಬರ್ 6 ರಿಂದ ಏಕದಿನ ಸರಣಿ ನಡೆಯಲಿದೆ. 3 ಟಿ20 ಹಾಗೂ 3 ಏಕದಿನ ಪಂದ್ಯಕ್ಕೆ ಸೌತ್ ಆಫ್ರಿಕಾ ತಂಡ ಪ್ರಕಟಗೊಂಡಿದೆ.

ಈ ಮಹತ್ವದ ಟೂರ್ನಿಗೆ ಸೌತ್ ಆಫ್ರಿಕಾ ಪ್ರಮುಖ ಬ್ಯಾಟ್ಸ್‌ಮನ್ ರಸಿ ವಾಂಡರ್ ಡಸೆನ್ ಹೊರಗುಳಿದಿದ್ದಾರೆ.

15 ಸದಸ್ಯರ ಸೌತ್ ಆಫ್ರಿಕಾ ತಂಡ ಪ್ರಕಟಗೊಂಡಿದೆ. ಟಿ20 ಹಾಗೂ ಏಕದಿನ ಮಾದರಿಯಲ್ಲಿ ತೆಂಬಾ ಬುವುಮಾ ತಂಡವನ್ನು ಮುನ್ನಡೆಸಲಿದ್ದಾರೆ.

ಭಾರತ ವಿರುದ್ಧದ ಟಿ20 ಗೆ ಸೌತ್ ಆಫ್ರಿಕಾ ತಂಡ
ಟೆಂಬಾ ಬವುಮಾ (ನಾಯಕ), ಕ್ವಿಂಟನ್ ಡಿ ಕಾಕ್, ಹೆನ್ರಿಚ್ ಕ್ಲಾಸೆನ್, ರೀಜಾ ಹೆಂಡ್ರಿಕ್ಸ್, ಕೇಶವ್ ಮಹಾರಾಜ್, ಐಡೆನ್ ಮಾರ್ಕ್ರಾಮ್, ಡೇವಿಡ್ ಮಿಲ್ಲರ್, ಲುಂಗಿ ಎನ್‌ಗಿಡಿ, ಆನ್ರಿಚ್ ನಾರ್ಟ್ಜೆ, ವೇಯ್ನ್ ಪಾರ್ನೆಲ್, ಡ್ವೈನ್ ಪ್ರಿಟೋರಿಯಸ್, ಕಾಗಿಸೊ ರಬಾಡ, ಟಬ್ರಾ ಸ್ಟೌಬ್ಸ್, ರಿಲೀ ಟ್ರಿಸ್ಟಾನ್ ಸ್ಸೌಬ್ಸ್,

ಭಾರತ ವಿರುದ್ಧದ ಏಕದಿನ ಸರಣಿಗೆ ಸೌತ್ ಆಫ್ರಿಕಾ ತಂಡ
ಟೆಂಬಾ ಬವುಮಾ(ನಾಯಕ), ಕ್ವಿಂಟನ್ ಡಿ ಕಾಕ್, ಹೆನ್ರಿಚ್ ಕ್ಲಾಸೆನ್, ರೀಜಾ ಹೆಂಡ್ರಿಕ್ಸ್, ಕೇಶವ್ ಮಹಾರಾಜ್, ಜನೆಮನ್ ಮಲನ್, ಐಡೆನ್ ಮಾರ್ಕ್ರಾಮ್, ಡೇವಿಡ್ ಮಿಲ್ಲರ್, ಲುಂಗಿ ಎನ್‌ಗಿಡಿ, ಅನ್ರಿಚ್ ನಾರ್ಟ್ಜೆ, ವೇಯ್ನ್ ಪಾರ್ನೆಲ್, ಆಂಡಿಲ್ ಫೆಲುಕ್ವಾಯೋ, ಡ್ವೈನ್ ಪ್ರಿಟೋರಿಯಸ್, ಕಾಗಿಸೋ ರಬಾಡ, ತಬ್ರೈಜ್ ಶಮ್ಸಿ

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!