ಹೊಸದಿಗಂತ ಡಿಜಿಟಲ್ ಡೆಸ್ಕ್:
ಭಾರತ ವಿರುದ್ಧದ ಮಹತ್ವದ ಪಂದ್ಯಕ್ಕೂ ಮುನ್ನ ವೆಸ್ಟ್ ಇಂಡೀಸ್ ತಂಡ ಸಂಪೂರ್ಣ ಸಿದ್ಧವಾಗಿದೆ ಎಂದು ತಂಡದ ಮುಖ್ಯ ತರಬೇತುದಾರ ಡ್ಯಾರೆನ್ ಸ್ಯಾಮಿ ತಿಳಿಸಿದ್ದಾರೆ. ಕೊಲ್ಕತ್ತಾದ ಈಡನ್ ಗಾರ್ಡನ್ಸ್ ಮೈದಾನದಲ್ಲಿ ನಡೆಯಲಿರುವ ಈ ಮುಖಾಮುಖಿ ಪಂದ್ಯದಲ್ಲಿ ಗೆಲ್ಲುವ ತಂಡ ಸೆಮಿಫೈನಲ್ ಪ್ರವೇಶಿಸಲಿದೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಸ್ಯಾಮಿ, ಯಾವುದೇ ಸವಾಲನ್ನೂ ಎದುರಿಸಲು ತಮ್ಮ ಆಟಗಾರರು ಸಜ್ಜಾಗಿದ್ದಾರೆ ಎಂದು ವಿಶ್ವಾಸ ವ್ಯಕ್ತಪಡಿಸಿದರು. ಇಂಡಿಯಾವನ್ನು ಎದುರಿಸಲು ನನ್ನ ಪಡೆ ಸಿದ್ಧವಾಗಿದೆ. ಮಾರ್ಚ್ 1 ರಂದು ನಡೆಯಲಿರುವ ಯುದ್ಧಕ್ಕೆ ನನ್ನ ಎಲ್ಲಾ ಸೈನಿಕರು ಸಿದ್ಧರಿದ್ದಾರೆ. ಈ ಪಂದ್ಯದಲ್ಲಿ ನಾವೇ ಗೆಲ್ಲುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದ್ದಾರೆ. 2016ರಲ್ಲಿ ಇದೇ ಮೈದಾನದಲ್ಲಿ ವೆಸ್ಟ್ ಇಂಡೀಸ್ ಸಾಧಿಸಿದ್ದ ಜಯವನ್ನು ಉಲ್ಲೇಖಿಸಿ, ಇತಿಹಾಸ ಮರುಕಳಿಸಲಿದೆ ಎಂಬ ನಿರೀಕ್ಷೆ ವ್ಯಕ್ತಪಡಿಸಿದರು.
ಇದನ್ನೂ ಓದಿ:
ಜೊತೆಗೆ ಭಾರತದ ಬೌಲಿಂಗ್ ದಾಳಿಗೆ ತಕ್ಕ ಪ್ರತಿಕ್ರಿಯೆ ನೀಡುವ ಸಾಮರ್ಥ್ಯ ನಮ್ಮ ಬಳಗದಲ್ಲಿದೆ ಎಂದು ಹೇಳಿದರು.ಈ ಮಹತ್ವದ ಪಂದ್ಯದಲ್ಲಿ ಜಯ ಸಾಧಿಸಿ ಸೆಮಿ ಫೈನಲ್ ಪ್ರವೇಶಿಸುವ ವಿಶ್ವಾಸವನ್ನು ವೆಸ್ಟ್ ಇಂಡೀಸ್ ಶಿಬಿರ ವ್ಯಕ್ತಪಡಿಸಿದೆ.



