February 27, 2026
Friday, February 27, 2026
spot_img

ವಿಂಡೀಸ್ ವಿರುದ್ಧ ಇಂಡಿಯಾ ‘Do or Die’ ಫೈಟ್: ವರುಣದೇವ ತಂದೊಡ್ಡುತ್ತಾನಾ ವಿಘ್ನ?

ಹೊಸದಿಗಂತ ಡಿಜಿಟಲ್ ಡೆಸ್ಕ್:

2026ರ ಟಿ20 ವಿಶ್ವಕಪ್‌ನ ಸೆಮಿಫೈನಲ್ ರೇಸ್ ಈಗ ಕುತೂಹಲಕಾರಿ ಘಟ್ಟಕ್ಕೆ ಬಂದು ನಿಂತಿದೆ. ಸೂಪರ್-8 ಹಂತದ ತನ್ನ ಕೊನೆಯ ಪಂದ್ಯದಲ್ಲಿ ಇಂದು ಟೀಂ ಇಂಡಿಯಾ, ಬಲಿಷ್ಠ ವೆಸ್ಟ್ ಇಂಡೀಸ್ ತಂಡವನ್ನು ಎದುರಿಸುತ್ತಿದೆ. ಕೋಲ್ಕತ್ತಾದ ಐತಿಹಾಸಿಕ ಈಡನ್ ಗಾರ್ಡನ್ಸ್ ಮೈದಾನದಲ್ಲಿ ನಡೆಯಲಿರುವ ಈ ಪಂದ್ಯವು ಅಕ್ಷರಶಃ ‘ವರ್ಚುವಲ್ ಕ್ವಾರ್ಟರ್ ಫೈನಲ್’ ಆಗಿ ಮಾರ್ಪಟ್ಟಿದೆ.

ಗ್ರೂಪ್-1 ರ ಅಂಕಪಟ್ಟಿಯಲ್ಲಿ ಪ್ರಸ್ತುತ ಎರಡೂ ತಂಡಗಳು ತಲಾ 2 ಅಂಕಗಳನ್ನು ಹೊಂದಿವೆ. ಆದರೆ, ರನ್ ರೇಟ್ ವಿಚಾರದಲ್ಲಿ ವೆಸ್ಟ್ ಇಂಡೀಸ್ (+1.791) ಭಾರತಕ್ಕಿಂತ (-0.100) ಉತ್ತಮ ಸ್ಥಿತಿಯಲ್ಲಿದೆ.

ಈ ಪಂದ್ಯದಲ್ಲಿ ಗೆಲ್ಲುವ ತಂಡವು ಒಟ್ಟು 4 ಅಂಕಗಳೊಂದಿಗೆ ನೇರವಾಗಿ ಸೆಮಿಫೈನಲ್‌ಗೆ ಲಗ್ಗೆ ಇಡಲಿದೆ.

ಒಂದು ವೇಳೆ ಮಳೆಯಿಂದಾಗಿ ಪಂದ್ಯ ರದ್ದಾದರೆ, ಎರಡೂ ತಂಡಗಳಿಗೆ ತಲಾ 1 ಅಂಕ ಹಂಚಿಕೆಯಾಗುತ್ತದೆ. ಆಗ ಎರಡೂ ತಂಡಗಳ ಖಾತೆಯಲ್ಲಿ 3 ಅಂಕಗಳಿರುತ್ತವೆ. ಇಂತಹ ಸಂದರ್ಭದಲ್ಲಿ ಉತ್ತಮ ನೆಟ್ ರನ್ ರೇಟ್ ಹೊಂದಿರುವ ವೆಸ್ಟ್ ಇಂಡೀಸ್ ಸೆಮಿಫೈನಲ್‌ಗೆ ಅರ್ಹತೆ ಪಡೆಯಲಿದ್ದು, ಭಾರತ ಟೂರ್ನಿಯಿಂದ ಹೊರಬೀಳಲಿದೆ.

ಹೀಗಾಗಿ, ಟೀಮ್ ಇಂಡಿಯಾಗೆ ಕೇವಲ ಗೆಲುವು ಮಾತ್ರವೇ ಅಂತಿಮ ದಾರಿಯಾಗಿದೆ. ಮಳೆಯ ಆತಂಕ ಮತ್ತು ವಿಂಡೀಸ್ ದಾಳಿಯನ್ನು ಮೆಟ್ಟಿ ನಿಂತು ಭಾರತ ಅಂತಿಮ ನಾಲ್ಕರ ಘಟ್ಟಕ್ಕೆ ಸೇರುತ್ತದೆಯೇ ಎಂದು ಕಾದು ನೋಡಬೇಕಿದೆ.

Must Read

error: Copy ಬೇಡ, Coffee ಜೊತೆ ಹಂಚಿಕೊಳ್ಳಿ !