October 18, 2026
Sunday, October 18, 2026
spot_img

ಮತದಾನ ದಾಖಲೆಗೆ ಜಿಲ್ಲಾಧಿಕಾರಿ ಅನು ಪಣ: ಖುದ್ದು ಪ್ಯಾರಾಗ್ಲೈಡಿಂಗ್, ಪ್ಯಾರಾಸೈಲಿಂಗ್ ನಡೆಸಿ ಜಾಗೃತಿ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಈ ಬಾರಿಯ ಚುನಾವಣೆಯಲ್ಲಿ ಕೇರಳದ ತಿರುವನಂತಪುರ ಹೊಸ ದಾಖಲೆ ಬರೆಯಲು ಸರ್ವಸಜ್ಜಾಗುತ್ತಿದೆ.

ಇದುವರೆಗಿನ ಇತಿಹಾಸದಲ್ಲೇ ಅತಿ ಹೆಚ್ಚು ಮತದಾನದ ಶೇಕಡಾವಾರು ಪ್ರಮಾಣ ದಾಖಲೆ ಬರೆಯುವತ್ತ ಜಿಲ್ಲಾಧಿಕಾರಿ ಅನು ಕುಮಾರಿ ಹಾಗೂ ಅವರ ತಂಡ ಪಣತೊಟ್ಟಿದೆ.

ಚುನಾವಣಾ ಜಾಗೃತಿಯ ಭಾಗವಾಗಿ ವರ್ಕಲಾ ಕ್ಲಿಫ್ ಹಾಗೂ ಪಾಪನಾಶಂನಲ್ಲಿ ಪ್ಯಾರಾಗ್ಲೈಡಿಂಗ್, ಪ್ಯಾರಾಸೈಲಿಂಗ್ ಆಯೋಜಿಸಲಾಗಿದ್ದು, ಎಲ್ಲರನ್ನು ಸೆಳೆಯುವಲ್ಲಿ ಯಶಸ್ವಿಯಾಗಿದೆ. ಪಾಪನಾಶಂನಲ್ಲಿ ಖುದ್ದು ಜಿಲ್ಲಾಧಿಕಾರಿ ಹಾಗೂ ಅವರ ತಂಡ ಪ್ಯಾರಾಸೈಲಿಂಗ್ ನಡೆಸಿ ಅಚ್ಚರಿ ಮೂಡಿಸಿತು.


ಇದಕ್ಕೂ ಮುನ್ನ ಪ್ಯಾರಾಗ್ಲೈಡಿಂಗ್ ನಡೆಸಿದ ಜಿಲ್ಲಾಧಿಕಾರಿ, ಇದು ಕೂಡಾ ಒಂದು ವಿಭಿನ್ನ ಅನುಭವವಾಗಿದೆ. ತಮ್ಮ ಜೀವನದಲ್ಲಿ ಒಮ್ಮೆಯಾದರೂ ಇದರ ಅನುಭವ ಮಾಡಿಕೊಳ್ಳಬೇಕು ಎಂದು ಹೇಳಿದರು.

ಏ.9 ರಂದು ಮತದಾನದ ಶಕ್ತಿಯನ್ನು ಅರಿತುಕೊಂಡು ತಮ್ಮ ಮತದಾನದ ಹಕ್ಕನ್ನು ಚಲಾಯಿಸುವಂತೆ ಪ್ರತಿಯೊಬ್ಬ ಮತದಾರರನ್ನು ಜಿಲ್ಲಾಽಕಾರಿ ಇದೇ ಸಂದರ್ಭದಲ್ಲಿ ವಿನಂತಿಸಿದರು. ಸ್ವೀಪ್‌ನ ಭಾಗವಾಗಿ ವಿಝಿಂಜಂನಲ್ಲಿ ಸ್ಕೂಬಾ ಡೈವಿಂಗ್ ಆಯೋಜಿಸಲಾಗಿತ್ತು.

Must Read