ಭಾರತ ದೇಶ ಕಟ್ಟಿದ್ದೇ ಕಾಂಗ್ರೇಸ್, ಹತ್ತು ವರ್ಷಗಳಲ್ಲಿ ಬಿಜೆಪಿ ಸಾಧನೆ ಶೂನ್ಯ: ಎಂ.ಬಿ.ಪಾಟೀಲ

ಹೊಸದಿಗಂತ ಬೀದರ್:

ಕಾಂಗ್ರೇಸ್ ಪಕ್ಷ 70 ವರ್ಷಗಳಲ್ಲಿ ದೇಶಕ್ಕಾಗಿ ಏನು ಮಾಡಿದೆ? ಎಂದು ಪ್ರಧಾನಮಂತ್ರಿ ನರೇಂದ್ರ ಮೋದಿ ಹೇಳುತ್ತಾರೆ. ಇಡೀ ಭಾರತ ದೇಶ ಕಟ್ಟಿದ್ದೇ ಕಾಂಗ್ರೇಸ್ ಪಕ್ಷ ಎಂದು ಬೃಹತ್ ಮಧ್ಯಮ ಕೈಗಾರಿಕೆ ಮತ್ತು ಮೂಲಸೌಕರ್ಯ ಅಭಿವೃದ್ಧಿ ಸಚಿವರಾದ ಎಂ.ಬಿ.ಪಾಟೀಲ ತಿಳಿಸಿದರು.

ನಗರದ ಜಿಲ್ಲಾ ಪತ್ರಿಕಾ ಭವನದಲ್ಲಿ ರವಿವಾರ ಕರೆದ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ದೇಶದಲ್ಲಿ ಸ್ಥಾಪನೆಯಾದ ಶಾಲಾ ಕಾಲೇಜುಗಳು, ಮೆಡಿಕಲ್ ಕಾಲೇಜುಗಳು, ವಿಶ್ವವಿದ್ಯಾಲಯಗಳು, ಏಮ್ಸ್ ಕಾಲೇಜುಗಳು ಕಾಂಗ್ರೇಸ್ ಅವಧಿಯಲ್ಲಿ ಸ್ಥಾಪನೆಯಾಗಿವೆ. ಆದರೆ 2014ರಲ್ಲಿ ದೇಶಕ್ಕೆ ಅಚ್ಛೆ ದಿನ್ ಬರುತ್ತವೆ ಎಂದು ಹೇಳಿದ ಮೋದಿಯವರು ರಾಷ್ಟ್ರದ ಜನತೆಗೆ ನೀಡಿದ್ದು ವಿವಿಧ ಸಾಮಗ್ರಿಗಳ ಬೆಲೆ ಏರಿಕೆ, ರೂಪಾಯಿ ಮೌಲ್ಯ ಕುಸಿತ, ಪೆಟ್ರೋಲ್ ಡಿಜೆಲ್ ಬೆಲೆ ಏರಿಕೆಯ ಬಿಸಿ. ವರ್ಷಕ್ಕೆ 2 ಕೋಟಿ ಉದ್ಯೋಗ ಅಂದ್ರೆ 10 ವರ್ಷದಲ್ಲಿ 20 ಕೋಟಿ ಉದ್ಯೋಗ ಸೃಷ್ಟಿಯಾಗಲಿಲ್ಲ. ಬದಲಾಗಿ ಉದ್ಯೋಗಸ್ಥರೂ ತಮ್ಮ ಕೆಲಸ ಕಳೆದುಕೊಂಡಿದ್ದಾರೆ ಎಂದರು.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!