ಅರಬರ ನಾಡಿನಲ್ಲಿ 2ನೇ ಹಿಂದೂ ದೇವಾಲಯ ಉದ್ಘಾಟನೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್‌
ದುಬೈನ ಜೆಬೆಲ್ ಅಲಿ ನಗರದಲ್ಲಿ ನಿರ್ಮಿಸಲಾದ ಹೊಸ ಹಿಂದೂ ದೇವಾಲಯವನ್ನು ಭಾರತ ಸ್ವಾಗತಿಸಿದೆ. ಈ ದೇವಾಲಯವನ್ನು ಬುಧವಾರ ಭಕ್ತರಿಗೆ ತೆರೆಯಲಾಗುವುದು. ದಸರಾಕ್ಕೆ ಒಂದು ದಿನ ಮುಂಚಿತವಾಗಿ, ಹೊಸ ಹಿಂದೂ ದೇವಾಲಯವನ್ನು ಮಂಗಳವಾರ ಭಾರತ ಮತ್ತು ಯುನೈಟೆಡ್ ಅರಬ್ ಎಮಿರೇಟ್ಸ್‌ನ ಉನ್ನತ ಗಣ್ಯರು ದುಬೈನಲ್ಲಿ ನಡೆದ ಭವ್ಯ ಸಮಾರಂಭದಲ್ಲಿ ಅಧಿಕೃತವಾಗಿ ಉದ್ಘಾಟಿಸಿದರು.
ಏಳು ಚರ್ಚುಗಳು, ಒಂದು ಗುರುದ್ವಾರ ಮತ್ತು ನೂತನ ದೇವಾಲಯ ಸೇರಿದಂತೆ ವಿವಿಧ ಧರ್ಮಿಯರ ಒಂಬತ್ತು ಧಾರ್ಮಿಕ ಕೇಂದ್ರಗಳನ್ನು ಹೊಂದಿರುವ ಜೆಬಲ್ ಅಲಿ ಆರಾಧನಾ ಗ್ರಾಮದಲ್ಲಿ ನಡೆದ ಹಿಂದೂ ದೇಗುಲ ಉದ್ಘಾಟನಾ ಕಾರ್ಯಕ್ರಮದಲ್ಲಿ 200 ಕ್ಕೂ ಹೆಚ್ಚು ಗಣ್ಯರು, ರಾಯಭಾರಿಗಳು ಮತ್ತು ಸ್ಥಳೀಯ ಸಮುದಾಯದ ಮುಖಂಡರು ಆಚರಣೆಯಲ್ಲಿ ಭಾಗವಹಿಸಿದ್ದರು.
ದೇವಸ್ಥಾನದಲ್ಲಿ ನಡೆದ ಸಮಾರಂಭದಲ್ಲಿ ಮಾತನಾಡಿದ ಯುಎಇಗೆ ಭಾರತೀಯ ರಾಯಭಾರಿ ಸಂಜಯ್ ಸುಧೀರ್, “ಇಂದು ದುಬೈನಲ್ಲಿ ಹೊಸ ಹಿಂದೂ ದೇವಾಲಯವನ್ನು ಉದ್ಘಾಟಿಸುತ್ತಿರುವುದು ಭಾರತೀಯ ಸಮುದಾಯಕ್ಕೆ ಸ್ವಾಗತಾರ್ಹ ಸುದ್ದಿ. ಇದು ಯುಎಇಯಲ್ಲಿ ವಾಸಿಸುವ ದೊಡ್ಡ ಹಿಂದೂ ಸಮುದಾಯದ ಧಾರ್ಮಿಕ ಆಶಯಗಳನ್ನು ಪೂರೈಸುತ್ತದೆ ಎಂದು ಅಭಿಪ್ರಾಯಪಟ್ಟಿದ್ದಾರೆ.
ದುಬೈನಲ್ಲಿರುವ ಹಿಂದೂ ದೇವಾಲಯವು ಎಲ್ಲಾ ಧರ್ಮಗಳಿಗೆ ಸಮಕಾಲೀನ ಆಧ್ಯಾತ್ಮಿಕ ಕೇಂದ್ರವಾಗಿದೆ, ಇದು ಪೂಜೆ, ಜ್ಞಾನ ಮತ್ತು ಸಾಮಾಜಿಕ ಸಹಾಯದವರೆಗೆ ದೈವತ್ವದ ಅನೇಕ ಮುಖಗಳನ್ನು ಹೊಂದಿದೆ ಎಂದು ಪ್ರಕಟಣೆ ತಿಳಿಸಿದೆ.

ಸಮುದಾಯದ ನಾಯಕ ಹಾಗೂ ರೀಗಲ್ ಗ್ರೂಪ್ ಆಫ್ ಕಂಪನಿಗಳ ಸಿಇಒ ಆದ ರಾಜು ಶ್ರಾಫ್ ಅವರು ದೇವಾಲಯದ ಯೋಜನೆ, ವಾಸ್ತುಶಿಲ್ಪ ಮತ್ತು ನಿರ್ಮಾಣದ ಜವಾಬ್ದಾರಿಯನ್ನು ಹೊತ್ತಿದ್ದರು.
ಹೊಸದಾಗಿ ಉದ್ಘಾಟನೆಗೊಂಡ ಹಿಂದೂ ದೇವಾಲಯವು ದುಬೈನಲ್ಲಿ ಎರಡನೇ ದೇವಾಲಯವಾಗಿದೆ. ಮೊದಲನೆಯದನ್ನು 1958 ರಲ್ಲಿ ನಿರ್ಮಿಸಲಾಗಿತ್ತು.
ದೇಶದಲ್ಲಿ ಒಟ್ಟು 3.3 ಮಿಲಿಯನ್ ಭಾರತೀಯರಿದಾರೆ.ಸಣ್ಣದಿಂದ ಮಧ್ಯಮ ಮತ್ತು ಬಹುರಾಷ್ಟ್ರೀಯ ವ್ಯಾಪಾರಗಳು ಸೇರಿದಂತೆ 30,000 ಕ್ಕೂ ಹೆಚ್ಚು ವ್ಯವಹಾರಗಳನ್ನು ನಡೆಸುತ್ತಿರುವ ಸಮುದಾಯವು ದೇಶದಲ್ಲಿ ಅತ್ಯಂತ ಪ್ರಭಾವಶಾಲಿಯಾಗಿದೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!