ಭಾರತ- ವೆಸ್ಟ್​ ಇಂಡೀಸ್ ಮೊದಲ ಏಕದಿನ ಪಂದ್ಯ: ಟಾಸ್ ಗೆದ್ದ ಕೆರಿಬಿಯನ್ ಬಳಗ ಬೌಲಿಂಗ್​​

ಹೊಸದಿಗಂತ ಡಿಜಿಟಲ್‌ ಡೆಸ್ಕ್‌:

ಪ್ರವಾಸಿ ಭಾರತ ಹಾಗು ವೆಸ್ಟ್​ ಇಂಡೀಸ್ ತಂಡಗಳ ನಡುವೆ ಮೊದಲ ಏಕದಿನ ಪಂದ್ಯದಲ್ಲಿ ಟಾಸ್​ ಗೆದ್ದ ಕೆರಿಬಿಯನ್ ಬಳಗ ಬೌಲಿಂಗ್​​ ಮಾಡುವ ನಿರ್ಧಾರ ಕೈಗೊಂಡಿದೆ.
ಭಾರತ ತಂಡವನ್ನ ಶಿಖರ್ ಧವನ್ ಮುನ್ನಡೆಸುತ್ತಿದ್ದು, ವೆಸ್ಟ್​ ಇಂಡೀಸ್ ಸವಾಲು ಎದುರಿಸಲಿದೆ.
ಆಲ್​​ರೌಂಡರ್ ರವೀಂದ್ರ ಜಡೇಜಾ ಗಾಯಗೊಂಡಿರುವ ಕಾರಣ ತಂಡದ ಉಪನಾಯಕ ಜವಾಬ್ದಾರಿ ಇದೀಗ ಶ್ರೇಯಸ್ ಅಯ್ಯರ್​ಗೆ ನೀಡಲಾಗಿದೆ. ಕೋವಿಡ್​ನಿಂದಾಗಿ ವೆಸ್ಟ್​ ಇಂಡೀಸ್ ತಂಡದ ಅನುಭವಿ ಆಟಗಾರ ಜೇಸನ್ ಹೋಲ್ಡರ್ ಸಹ ಹೊರಗುಳಿದಿದ್ದಾರೆ. ಇಶಾನ್​ ಕಿಶನ್​, ಋತುರಾಜ್​ ಗಾಯಕ್ವಾಡ್​ ಬದಲಿಗೆ ಆರಂಭಿಕರಾಗಿ ಶುಭ್ಮನ್​ ಗಿಲ್​ ಚಾನ್ಸ್​ ಪಡೆದುಕೊಂಡಿದ್ದಾರೆ.

ಟೀಂ ಇಂಡಿಯಾ: ಶಿಖರ್ ಧವನ್​(ಕ್ಯಾಪ್ಟನ್​), ಶುಬ್ಮನ್ ಗಿಲ್​​, ಶ್ರೇಯಸ್​ ಅಯ್ಯರ್​(ಉ.ನಾಯಕ), ಸೂರ್ಯಕುಮಾರ್ ಯಾದವ್​, ಸಂಜು ಸ್ಯಾಮ್ಸನ್​, ದೀಪಕ್ ಹೂಡಾ, ಅಕ್ಸರ್ ಪಟೇಲ್​, ಶಾರ್ದೂಲ್ ಠಾಕೂರ್​, ಯಜುವೇಂದ್ರ ಚಹಲ್​,ಮೊಹಮ್ಮದ್ ಸಿರಾಜ್​, ಪ್ರಸಿದ್ಧ ಕೃಷ್ಣ

ವೆಸ್ಟ್ ಇಂಡೀಸ್​​ ತಂಡ: ಶಾಯ್​ ಹೋಪ್​(ವಿ.ಕೀ), ನಿಕೊಲಸ್ ಪೂರನ್​(ಕ್ಯಾಪ್ಟನ್​), ಬ್ರಾಂಡನ್ ಕಿಂಗ್​, ಶಮರ್​ ಬ್ರೂಕ್ಸ್​, ಕೈಲ್​ ಮೇಯರ್ಸ್​, ರೋವ್​ಮನ್ ಪೊವೆಲ್​, ಅಕೆಲ್​ ಹೊಸೈನ್​, ರೊಮಾರಿಯಾ ಶೆಫರ್ಡ್​, ಅಲ್ಜಾರಿ ಜೋಸೆಫ್​, ಗುಡಕೇಶ್​ ಮೋಟಿ, ಜೇಡನ್ ಸೀಲ್ಸ್​​

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!