Thursday, September 29, 2022

Latest Posts

ಶೀಘ್ರದಲ್ಲೇ ರಷ್ಯಾದಿಂದ ಭಾರತಕ್ಕೆ ಸಿಗಲಿದೆ ಗುಡ್ ನ್ಯೂಸ್: ಅದೇನು ಗೊತ್ತಾ?

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌ 

ಭಾರತೀಯ ಪ್ರವಾಸಿಗರಿಗೆ ರಷ್ಯಾ ವಿಶೇಷ ವೀಸಾ ಮುಕ್ತ ಪ್ರವೇಶ ವ್ಯವಸ್ಥೆಯನ್ನು ಪ್ರಾರಂಭಿಸಲು ಚಿಂತನೆ ನಡೆಸುತ್ತಿದೆ.
ಈ ಕುರಿತು ಮುಂಬೈನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಮಾಹಿತಿ ನೀಡಿದ ಮಾಸ್ಕೋ ಸಿಟಿ ಟೂರಿಸಂ ಕಮಿಟಿಯ ಉಪಾಧ್ಯಕ್ಷೆ ಅಲೀನಾ ಅರುಟುನೋವಾ ಅವರು, ಭಾರತೀಯ ಉದ್ಯಮಿಗಳು ಮತ್ತು ಪ್ರವಾಸಿಗರಿಗೆ ವೀಸಾ ಮುಕ್ತ ಯೋಜನೆಯನ್ನು ಪರಿಚಯಿಸುವ ಯೋಜನೆಯಲ್ಲಿ ರಷ್ಯಾ ಕಾರ್ಯನಿರ್ವಹಿಸುತ್ತಿದ್ದು, ಶೀಘ್ರದಲ್ಲೇ ನಿರ್ಧರಿಸಲಾಗುವುದು ಎಂದು ಹೇಳಿದರು.

ಪ್ರಸ್ತುತ ರಷ್ಯಾ ಶೀಘ್ರದಲ್ಲೇ ಭಾರತೀಯರಿಗೆ ಇ-ವೀಸಾವನ್ನು ಪ್ರಾರಂಭಿಸಲಿದೆ. ಭಾರತೀಯ ಪ್ರವಾಸಿಗರಿಗೆ ವೀಸಾ ಮುಕ್ತ ಯೋಜನೆಯನ್ನು ನೀಡುವ ಕಾರ್ಯಕ್ರಮವನ್ನು ರಷ್ಯಾದ ಅಧ್ಯಕ್ಷ ವ್ಲಾಡಿಮಿರ್‌ ಪುಟಿನ್‌ ಕೂಡ ಬೆಂಬಲಿಸಿದ್ದಾರೆ ಎಂದು ಅರುಟುನೋವಾ ಹೇಳಿದ್ದಾರೆ.

ಇನ್ನು ಇರಾನ್‌ಗೆ ವೀಸಾ ಮುಕ್ತ ಯೋಜನೆಗೆ ಈಗಾಗಲೇ ಗ್ರೀನ್ ಸಿಗ್ನಲ್ ನೀಡಲಾಗಿದೆ ಮತ್ತು ಶೀಘ್ರದಲ್ಲೇ ಈ ಯೋಜನೆಯನ್ನು ಭಾರತಕ್ಕೂ ಪ್ರಾರಂಭಿಸಬಹುದು ಎಂದು ನಿರೀಕ್ಷಿಸಲಾಗಿದೆ.

“2020 ರಲ್ಲಿ, ಭಾರತ ಸೇರಿದಂತೆ 52 ದೇಶಗಳಿಗೆ ಎಲೆಕ್ಟ್ರಾನಿಕ್ ವೀಸಾಗಳನ್ನು ಪರಿಚಯಿಸಲು ನಿರ್ಣಯವನ್ನು ಅಂಗೀಕರಿಸಲಾಯಿತು, ಆದರೆ ಕೊರೋನಾದಿಂದಾಗಿ, ಇದು ಇನ್ನೂ ಜಾರಿಗೆ ಬಂದಿಲ್ಲ ಆದರೆ ಶೀಘ್ರದಲ್ಲೇ ಪ್ರಾರಂಭವಾಗಲಿದೆ ಮತ್ತು ಇ-ವೀಸಾದೊಂದಿಗೆ ಸುಲಭವಾಗಿ ವಿದೇಶಿ ಪ್ರವಾಸಿಗರ ಆಗಮನದ ಪ್ರಕ್ರಿಯೆಯು ನಡೆಯಲಿದೆ ಎಂದು ನಾವು ಭಾವಿಸುತ್ತೇವೆ” ಎಂದಿದ್ದಾರೆ.

ಪ್ರವಾಸೋದ್ಯಮವು ಪ್ರಪಂಚದಾದ್ಯಂತ ಅನಿಶ್ಚಿತತೆಯ ವಾತಾವರಣದಲ್ಲಿ ಜನರು ಮತ್ತು ಸಂಸ್ಕೃತಿಗಳ ನಡುವೆ ಸೇತುವೆಯಾಗಿ ಕಾರ್ಯನಿರ್ವಹಿಸುತ್ತದೆ. ಈ ವರ್ಷದ ಮೊದಲ ಆರು ತಿಂಗಳಲ್ಲಿ 13,300 ಭಾರತೀಯ ಪ್ರವಾಸಿಗರು ರಷ್ಯಾಕ್ಕೆ ಬಂದಿದ್ದಾರೆ. ರಷ್ಯಾ 2023 ರ ಅಂತ್ಯದ ವೇಳೆಗೆ, ಈ ಅಂಕಿ ಅಂಶವು ಸಾಂಕ್ರಾಮಿಕ ರೋಗದ ಹಿಂದಿನ ಅವಧಿಯಂತೆ ಇರುತ್ತದೆ ಎಂದು ನಿರೀಕ್ಷಿಸಲಾಗಿದೆ ಎಂದು ತಿಳಿಸಿದ್ದಾರೆ.

2016 ಮತ್ತು 2019 ರ ನಡುವೆ, ಭಾರತದಿಂದ ರಷ್ಯಾಕ್ಕೆ ಪ್ರವಾಸಿಗರ ಪ್ರಯಾಣ 61,000 ರಿಂದ ಒಂದು ಲಕ್ಷಕ್ಕೆ ಏರಿದೆ. ಕುತೂಹಲಕಾರಿ ಸಂಗತಿಯೆಂದರೆ, 2021 ರಲ್ಲಿ, ರಷ್ಯಾಕ್ಕೆ ಬಂದ 48 ಪ್ರತಿಶತ ಭಾರತೀಯ ಪ್ರಯಾಣಿಕರು ವರ್ಷಕ್ಕೆ ಎರಡು ಬಾರಿ ಅಲ್ಲಿಗೆ ಪ್ರಯಾಣಿಸಿದ್ದಾರೆ. 2021 ರಲ್ಲಿ, ಅಲ್ಲಿಗೆ ಬರುವ ಜನರಿಗೆ ಕ್ವಾರಂಟೈನ್ ನಿಯಮವನ್ನು ಜಾರಿಗೆ ತರದ ಕೆಲವೇ ದೇಶಗಳಲ್ಲಿ ರಷ್ಯಾ ಕೂಡ ಒಂದಾಗಿದೆ.

ಈ ಸುದ್ದಿ ಇತರರೊಂದಿಗೂ ಹಂಚಿಕೊಳ್ಳಿ

Latest Posts

Don't Miss

error: Content is protected !!