Asian Games 2023| ಪುರುಷರ ಟ್ರ್ಯಾಪ್ ಶೂಟಿಂಗ್‌ನಲ್ಲಿ ಚಿನ್ನ ಗೆದ್ದ ಭಾರತ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌

ಚೀನಾದ ಹಾಂಗ್‌ಜೌನಲ್ಲಿ ನಡೆಯುತ್ತಿರುವ ಏಷ್ಯನ್ ಕ್ರೀಡಾಕೂಟದಲ್ಲಿ ಭಾರತದ ಪುರುಷರ ಶೂಟಿಂಗ್ ತಂಡ ಚಿನ್ನದ ಪದಕ ಗೆದ್ದುಕೊಂಡಿದೆ.

ಪೃಥ್ವಿರಾಜ್ ತೊಂಡೈಮಾನ್, ಜೋರವರ್ ಸಿಂಗ್ ಸಂಧು, ಕಿನಾನ್ ಚೆನೈ ಅವರನ್ನೊಳಗೊಂಡ ಭಾರತದ ಪುರುಷರ ತಂಡ 50 ಶೂಟ್​ ಟ್ರ್ಯಾಪ್‌ ವಿಭಾಗದಲ್ಲಿ 361 ಪಡೆದು ಚಿನ್ನದ ಪದಕ ಗೆದ್ದುಕೊಂಡಿದೆ.

ಕುವೈತ್‌ನ ಖಲೀದ್ ಅಲ್ಮುದಾಫ್, ತಲಾಲ್ ಅಲ್ರಾಶಿದಿ ಮತ್ತು ಅಬ್ದುಲ್ ರಹಮಾನ್ ಅಲ್ಪೈಹಾನ್ ಒಟ್ಟು 359 ಅಂಕಗಳನ್ನು ಪಡೆದುಕೊಂಡಿದ್ದು, ಬೆಳ್ಳಿ ಪದಕವನ್ನು ಪಡೆದುಕೊಂಡಿದ್ದಾರೆ. ಚೀನಾದ ಯುಹಾವೊ ಗುವೊ, ಯಿಂಗ್ ಕಿ ಮತ್ತು ಯುಹಾವೊ ವಾಂಗ್ ಒಟ್ಟು 354 ಅಂಕ ಪಡೆದು ಕಂಚಿನ ಪದಕವನ್ನು ಪಡೆದುಕೊಂಡಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!