ASIAN GAMES 2023 | ಶೂಟಿಂಗ್ ಗ್ರೂಪ್ ವಿಭಾಗದಲ್ಲಿ ಚಿನ್ನ, ಬೆಳ್ಳಿ ಬಾಚಿಕೊಂಡ ಭಾರತ!

ಹೊಸದಿಗಂತ ಡಿಜಿಟಲ್ ಡೆಸ್ಕ್:

ಏಷ್ಯನ್ ಗೇಮ್ಸ್‌ನ ಆರನೇ ದಿನವಾದ ಇಂದು ಬೆಳ್ಳಂಬೆಳಗ್ಗೆ ಭಾರತಕ್ಕೆ ಮತ್ತೆರಡು ಪದಕ ಒಲಿದುಬಂದಿದೆ.
ಶೂಟಿಂಗ್ ಗ್ರೂಪ್ ವಿಭಾಗದಲ್ಲಿ ಭಾರತಕ್ಕೆ ಚಿನ್ನ ಹಾಗೂ ಬೆಳ್ಳಿ ಲಭಿಸಿದೆ.

ಮಹಿಳೆಯರ 10 ಮೀಟರ್ ಏರ್ ಪಿಸ್ತೂಲ್ ಸ್ಪರ್ಧೆಯಲ್ಲಿ ಬೆಳ್ಳಿ ಪದಕ ಹಾಗೂ 50 ಮೀಟರ್ ರೈಫಲ್ 3 ಸ್ಥಾನಗಳ ಪುರುಷರ ಗ್ರೂಪ್ ವಿಭಾಗದಲ್ಲಿ ಚಿನ್ನದ ಪದಕ ಒಲಿದಿದೆ.

Imageಐಶ್ವರ್ಯ ಪ್ರತಾಪ್ ಸಿಂಗ್, ಸ್ವಪ್ನಿಲ್ ಕುಸಾಲೆ ಮತ್ತು ಅಖಿಲ್ ಶೆರಾನ್ ಚಿನ್ನದ ಪದಕಕ್ಕೆ ಮುತ್ತಿಕ್ಕಿದ್ದಾರೆ.

Imageಇಶಾ ಸಿಂಗ್, ಪಲಕ್ ಹಾಗೂ ದಿವ್ಯಾ ಸೇರಿ ಭಾರತಕ್ಕೆ ಬೆಳ್ಳಿಯ ಪದಕ ನೀಡಿದ್ದಾರೆ.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!