ಹೊಸದಿಗಂತ ಡಿಜಿಟಲ್ ಡೆಸ್ಕ್:
ಇಟಲಿಯಲ್ಲಿ ನಡೆದ ವಿಶ್ವ ಸ್ಕೇಟ್ ಗೇಮ್ಸ್ 2024 ರಲ್ಲಿ ಭಾರತದ ಮಹಿಳಾ ರೋಲರ್ ಡರ್ಬಿ ತಂಡ ಗೆದ್ದು ಇತಿಹಾಸವನ್ನು ನಿರ್ಮಾಣ ಮಾಡಿದೆ.
ಶ್ರುತಿಕಾ ಸರೋದೆ ನೇತೃತ್ವದ ಭಾರತ ತಂಡವು ಮಹಿಳಾ ವಿಭಾಗದ ಕಂಚಿನ ಪದಕದ ಪಂದ್ಯದಲ್ಲಿ ಚೀನಾ ವಿರುದ್ಧ ಅದ್ಭುತ ಪ್ರದರ್ಶನ ನೀಡಗ ಮೂಲಕ ಪ್ರೇಕ್ಷಕರಿಗೆ ಅಚ್ಚರಿ ನೀಡಿದ ಪದಕವನ್ನು ತನ್ನದಾಗಿಸಿಕೊಂಡಿತು.
ತಮ್ಮ ಫೈನಲ್‌ನ ಪ್ರಾರಂಭದಲ್ಲಿ ಸಮವಾಗಿ ಎರಡೂ ತಂಡಗಳು ಸಮಬಲದ ಹೋರಾಟ ನಡೆಸಿದ್ದರು. ಆದರೆ, ಪಂದ್ಯ ಮುಕ್ತಾಯದ ವೇಳೆಗೆ ಭಾರತ 127 ರಿಂದ 39 ಸ್ಕೋರ್‌ನೊಂದಿಗೆ ಗೆಲುವು ಕಂಡಿತು. ಆ ಮೂಲಕ ಭಾರತ ಐತಿಹಾಸಿಕ ವಿಜಯವನ್ನು ಸಾಧಿಸಿತು.
ಭಾರತದ ಜಾಮರ್‌ಗಳನ್ನು ತಡೆಯುವುದು ಚೀನಾ ಆಟಗಾರ್ತಿಯರಿಗೆ ಸುಲಭವಾಗಿರಲಿಲ್ಲ. ಚೀನಾದ ಪ್ರತಿ ರಕ್ಷಣಾತ್ಮಕ ಲೋಪವನ್ನು ಭಾರತ ಬಳಕೆ ಮಾಡಿಕೊಂಡಿತು. ಮಿಂಚಿನ ವೇಗದ ಪಾಸ್‌ಗಳೊಂದಿಗೆ ಪಾಯಿಂಟ್‌ಗಳನ್ನು ಗಳಿಸಿದರು. ತಮ್ಮ ಅಮೋಘ ವಿಜಯದ ಮೇಲೆ ಸವಾರಿ ಮಾಡಿದ ಭಾರತ ತಂಡವು ಕಂಚಿನ ಪದಕದ ಗೆಲುವು ಕಂಡಿತು.
ಪದಕ ವೇದಿಕೆ ಏರಲು ಮಿಸ್ ಆದ ಪುರುಷರ ತಂಡ: ಮಹಿಳಾ ತಂಡದ ಪ್ರದರ್ಶನಕ್ಕೆ ವ್ಯತಿರಿಕ್ತವಾಗಿ, ಭಾರತದ ಪುರುಷರ ತಂಡವು 75-119 ರಿಂದ ಚೀನಾಕ್ಕೆ ಶರಣಾಗುವ ಮೂಲಕ ಪದಕದಿಂದ ವಂಚಿತವಾಯಿತು.