ಟೆಕ್ಸಾಸ್‌: ಭಾರತೀಯ ಮೂಲದ ಮಹಿಳೆಯರ ಮೇಲಿನ ಜನಾಂಗೀಯ ದಾಳಿಗೆ ತೀವ್ರ ಖಂಡನೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್: 

ಬುಧವಾರ ಟೆಕ್ಸಾಸ್‌ನಲ್ಲಿ ನಾಲ್ವರು ಭಾರತೀಯ-ಅಮೆರಿಕನ್ ಮಹಿಳೆಯರ ಮೇಲೆ ನಡೆದ ಜನಾಂಗೀಯ ದಾಳಿಗೆ ಅಮೆರಿಕದಲ್ಲಿರುವ ಭಾರತೀಯರು ಘಟನೆಯನ್ನು ಖಂಡಿಸಿದ್ದಾರೆ. ಮೆಕ್ಸಿಕನ್-ಅಮೆರಿಕನ್ ಯುವತಿ  ಎಲ್ಲಿ ನೋಡಿದ್ರೂ ಭಾರತೀಯರೇ ಇರುತ್ತಾರೆ. ಅಮೆರಿಕಾ ಬಿಟ್ಟು ಹೋಗಿ ಎಂದು ನಿಂದಿಸಿದ್ದಾರೆ. ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆದ ಪೊಲೀಸರು ಮೆಕ್ಸಿಕನ್-ಅಮೆರಿಕನ್ ಮಹಿಳೆಯನ್ನು ಬಂಧಿಸಿದ್ದಾರೆ.

ಇಂತಹ ಜನಾಂಗೀಯ ದಾಳಿ ಮತ್ತು ತಾರತಮ್ಯ ತಪ್ಪು ಎಂದು ಇಂಡಿಯನ್-ಅಮೆರಿಕನ್ ಇಂಪ್ಯಾಕ್ಟ್ ನ ಕಾರ್ಯನಿರ್ವಾಹಕ ನಿರ್ದೇಶಕ ನೀಲ್ ಮಖಿಜಾ ಹೇಳಿದ್ದಾರೆ. ಇಂತಹ ವರ್ತನೆ ವಿರುದ್ಧ ಹೋರಾಟ ನಡೆಸುತ್ತೇವೆ ವರ್ಣಭೇದ ನೀತಿಯ ಘಟನೆಗಳನ್ನು ಸುಲಭವಾಗಿ ಪಕ್ಕಕ್ಕೆ ತಳ್ಳುವಂತಾಗಬಾರದು ಎಂದರು. ಅದೃಷ್ಟವಶಾತ್ ಇಂತಹ ಪ್ರಕರಣಗಳನ್ನು ಕಾನೂನಾತ್ಮಕವಾಗಿ ಎದುರಿಸಲು ವಿಡಿಯೋ ಸಾಕ್ಷ್ಯ ಸಿಕ್ಕಿದೆ ಇನ್ನು ಮುಂದೆ ಇಂತಹ ಘಟನೆಗಳು ನಡೆಯದಂತೆ ಕ್ರಮಕೈಗೊಳ್ಳಬೇಕು ಎಂದರು.

ಅವರ ಜೊತೆಗೆ ಅನೇಕ ಭಾರತೀಯ ಅಮೆರಿಕನ್ನರು ದಾಳಿಯನ್ನು ಬಲವಾಗಿ ಖಂಡಿಸಿದರು. ಟೆಕ್ಸಾಸ್‌ನ ಡಲ್ಲಾಸ್‌ನಲ್ಲಿರುವ ಪಾರ್ಕಿಂಗ್ ಸ್ಥಳದಲ್ಲಿ ನಾಲ್ಕು ಭಾರತೀಯ-ಅಮೆರಿಕನ್ ಮಹಿಳೆಯರ ಬಗ್ಗೆ ಜನಾಂಗೀಯ ನಿಂದನೆ ಮಾಡಿದ್ದಾರೆ. ಭಾರತೀಯರು ಎಲ್ಲೆಡೆ ನೆಲೆಸಿದ್ದಾರೆ ಮತ್ತು ಎಲ್ಲಾ ಭಾರತೀಯರು ತಮ್ಮ ದೇಶಕ್ಕೆ ಹಿಂತಿರುಗಬೇಕು. ತಾನು ಭಾರತೀಯರನ್ನು ದ್ವೇಷಿಸುತ್ತೇನೆ ಮತ್ತು ಭಾರತೀಯರು ಉತ್ತಮ ಜೀವನ ನಡೆಸಲು ಅಮೆರಿಕಕ್ಕೆ ಬರುತ್ತಾರೆ ಎಂಬ ಕಮೆಂಟ್‌ಗಳನ್ನು ಮಾಡಿದ್ದರು.

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!