ಹೊಸದಿಗಂತ ಡಿಜಿಟಲ್ ಡೆಸ್ಕ್:
ಪಹಲ್ಗಾಮ್‌ನಲ್ಲಿ ಉಗ್ರರ ದಾಳಿ ಘಟನೆಗೆ ಸಂಬಂಧಿಸಿದಂತೆ ಐಇಡಿ ಸ್ಫೋಟಿಸಿ ಮತ್ತೊಬ್ಬ ಉಗ್ರನ ಮನೆಯನ್ನು ಭಾರತೀಯ ಸೇನೆ ಧ್ವಂಸಗೊಳಿಸಿದೆ.
ಲಷ್ಕರ್ ಎ ತೊಯ್ಬಾ ಉಗ್ರ ಫಾರೂಕ್ ಮನೆಯನ್ನು ಭಾರತೀಯ ಸೇನೆ ಉಡೀಸ್ ಮಾಡಿದೆ. ಕುಪ್ವಾರದ ಕಲಾರೂಸ್ ಪ್ರದೇಶದಲ್ಲಿರುವ ಫಾರೂಕ್ ಮನೆಯನ್ನು ಐಇಡಿ ಸ್ಫೋಟಿಸಿ ಧ್ವಂಸಗೊಳಿಸಲಾಗಿದೆ.
ಪಹಲ್ಗಾಮ್ ದಾಳಿಯ ನಂತರ ಪುಲ್ವಾಮಾ, ಶೋಪಿಯಾನ್, ಅನಂತ್‌ನಾಗ್, ಕುಲ್ಗಾಮ್ ಮತ್ತು ಕುಪ್ವಾರಾ ಜಿಲ್ಲೆಗಳಲ್ಲಿ ಸ್ಫೋಟಕಗಳನ್ನು ಬಳಸಿ ಇಲ್ಲಿವರೆಗೆ ಆರು ಭಯೋತ್ಪಾದಕರ ಮನೆಗಳನ್ನು ನಾಶಪಡಿಸಲಾಗಿದೆ. ಈ ಎಲ್ಲಾ ಭಯೋತ್ಪಾದಕರು ಲಷ್ಕರ್-ಎ-ತೊಯ್ಬಾಗೆ ಸೇರಿದವರಾಗಿದ್ದು, ಪ್ರಸ್ತುತ ಜಮ್ಮು ಮತ್ತು ಕಾಶ್ಮೀರದಲ್ಲಿ ಸಕ್ರಿಯರಾಗಿದ್ದಾರೆ.