30 ಗಂಟೆಗಳ ಶೋಧದ ನಂತರ ಹಂಗೇರಿಯ ಚಾರಣಿಗನ್ನು ರಕ್ಷಿಸಿದ ಭಾರತೀಯ ಸೇನೆ

ಹೊಸದಿಗಂತ ಡಿಜಿಟಲ್‌ ಡೆಸ್ಕ್:‌
ಹಿಮಾಲಯದ ಚಾರಣ ಮಾಡುವಾಗ ದಾರಿ ತಪ್ಪಿ ಪರ್ವತಗಳಲ್ಲಿ ಸಿಲುಕಿಕೊಂಡಿದ್ದ ಹಂಗೇರಿಯನ್‌ ಚಾರಣಿಗನೊಬ್ಬನನ್ನು 30 ಗಂಟೆಗಳ ಸುದೀರ್ಘಕಾರ್ಯಾಚರಣೆಯ ನಂತರ ಭಾರತೀಯ ಸೇನೆಯ ತಂಡವು ರಕ್ಷಿಸುವಲ್ಲಿ ಯಶಸ್ವಿಯಾಗಿದೆ. ಜಮ್ಮು ಮತ್ತು ಕಾಶ್ಮೀರದ ಕಿಶ್ತ್ವಾರ್ ಜಿಲ್ಲೆಯ ಹಿಮಾಲಯ ಶ್ರೇಣಿಗಳ ಉಮಸಿಲಾ ಪಾಸ್‌ನಲ್ಲಿ ಆತ ದಾರಿ ತಪ್ಪಿದ್ದ.

ರಕ್ಷಣೆಯ ನಂತರ ಭಾರತೀಯ ವಾಯುಪಡೆಯ (ಐಎಎಫ್) ವಿಮಾನದಲ್ಲಿ ಅವರನ್ನು ಚಿಕಿತ್ಸೆಗಾಗಿ ಉಧಮ್‌ಪುರಕ್ಕೆ ಕರೆದೊಯ್ಯಲಾಗಿದೆ.

ಹಂಗೇರಿಯಲ್ಲಿರುವ ಭಾರತೀಯ ರಾಯಭಾರ ಕಚೇರಿಯು ಭಾರತೀಯ ಸೇನೆ ಮತ್ತು ಆಪರೇಷನ್ ಸರ್ಚ್ ಮತ್ತು ರೆಸ್ಕ್ಯೂ ಆಪರೇಷನ್ ಭುಜಾಸ್-ಉಮಾಸಿ ಲಾದಲ್ಲಿ ಭಾಗಿಯಾಗಿರುವ ಸಂಪೂರ್ಣ ತಂಡಕ್ಕೆ ಧನ್ಯವಾದಗಳನ್ನು ಅರ್ಪಿಸಿದೆ ಮತ್ತು ಇದನ್ನು ಹೆಮ್ಮೆ ಮತ್ತು ಪರಿಶ್ರಮದ ವಿಷಯ ಎಂದು ಕರೆದಿದೆ.

 

ಈ ಸುದ್ದಿಯನ್ನು ಇತರರ ಜೊತೆಗೂ ಹಂಚಿಕೊಳ್ಳಿ

LEAVE A REPLY

Please enter your comment!
Please enter your name here

error: Content is protected !!